ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಏಕೆ? ಈ ರೀತಿ ನಡೆದು ಕೊಳ್ಳಿ ಖಂಡಿತ ಸಿಗುತ್ತಾರೆ ?

ಹುಡುಗಿಯರು ಸಿಗದೆ ಇರಲು ಕಾರಣ ಬಹಳಷ್ಟು ಜನ ಹುಡುಗಿಯರು ಕಾಲೇಜು ಇಂಜಿಯನಿರಿಂಗ್, ಡಾಕ್ಟರ್, ಐಏಎಸ್ ಐಪಿಎಸ್, ಸೈನ್ಯ, ಮತ್ತು ಸರ್ಕಾರಿ ಮತ್ತು ಇತರೆ ಕಂಪನಿಗಳಲ್ಲಿ ಕೆಲಸದಲ್ಲಿರುವುದು. ಯಾವುದೆ ಕಾಲೇಜಿನಲ್ಲಿ ಹುಡುಗರಿಗಿಂತ ಹುಡುಗಿಯರೆ ಹೆಚ್ಚು .
ಬಹಳಷ್ಟು ಹುಡುಗರು ಪಾಸಾಗದೆ ಓದನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಾರೆ. ಯಾವುದಾದರೊಂದು ಚಟಕ್ಕೆ ಬಿದ್ದು ಹಾಳುಮಾಡಿಕೊಳ್ಳುಔರು ಜಾಸ್ತಿ. ಬಡ ಹೆಣ್ಣುಮಕ್ಕಳು ಕೂಡಾ ಈಗ ಬಡವರಾಗಿ ಉಳಿದಿಲ್ಲ ಓದಿನ ನಂತರ ಕೆಲಸಕ್ಕೆ ಸೇರಿ ಸಾಕಷ್ಟು ಸಂಪಾದಿಸುತ್ತಿರುವುದರಿಂದ ಅವರಿಗು ಅವರದ್ದೆ ಆದ ಕನಸುಗಳಿರುತ್ತದೆ. ಮೊದಲಿನಂತೆ ಗಂಡುಸಿಕ್ಕಿದರೆ ಸಾಕು ತಾಳಿಕಟ್ಟು ಅನ್ನುವಂತ ಪರಿಸ್ಥಿತಿ ಈಗ ಇಲ್ಲ. ತಂದೆತಾಯಿಗಳು ಹೆಣ್ಣುಮಕ್ಕಳು ಅನುಕೂಲ ಇರುವ ಮನೆಯನ್ನು ಸೇರಲಿ ಆಸೆ ಪಡುವುದು ತಪ್ಪಲ್ಲ ಅನುಕೂಲವಿದ್ದವರ ಎಲ್ಲಾ ಗಂಡುಮಕ್ಕಳ ನೀತಿನಡತೆಯು ದಾರಿ ತಪ್ಪಿರುವುದರಿಂದ ಯಾವುದೆ ಹುಡುಗನನ್ನು ಮದುವೆಯಾಗಲು ಹತ್ತುಬಾರಿ ಯೋಚಿಸುತ್ತಾರೆ.
ಹಾಗಂತ ಎಲ್ಲ ಹೆಣ್ಣುಮಕ್ಕಳು ಸರಿ ಇದ್ದಾರೆ ಎನ್ನುವುದು ಕಷ್ಟ. ಈಗಿನ ವೇಷಭೂಷಣಗಳು ದಿನನಿತ್ತ ಫೇಸ್ಬುಕ್ ಇನಸ್ಟಿಗ್ರಾಮ್ ಮತ್ತು ಮುಂತಾದ ಕಡೆಗಳಲ್ಲಿ ಕಣ್ಣು ಹಾಯಿಸಿದರೆ ಹುಡುಗರನ್ನು ದಾರಿತಪ್ಪಿಸುವ ಹುಚ್ಚುಹಿಡಿಸುವ ಹೆಣ್ಣನ್ರ್ನುನೋಡಿದಾಗ ಸಮಾಜ ತಪ್ಪು ದಾರಿಯನ್ನು ಹಿಡಿದಿದೆ ಎನ್ನಬಹುದು.. ಹದಿನಾರರಿಂದ ನಲವತ್ತುವರ್ಷದ ವರೆಗೂ ತುಂಡುಬಟ್ಟೆ ಧರಿಸಿ ಪ್ರದರ್ಶನ ಕೊಡುವವರನ್ನು ನೋಡಿದರೆ ಹಣಕ್ಕಾಗಿ ಏನೆಲ್ಲ ಮಾಡುತ್ತಾರೆ ಎಂದು ಗೊತ್ತಾಗುತ್ತದೆ.
ಹಾಗಾಗಿ ಹೆಣ್ಣಾಗಲಿ ಗಂಡಾಗಲಿ ಮದುವೆ ಆಗಬೇಕು ಎಂದಾಗ ತಕ್ಷಣಕ್ಕೆ ಯಾರನ್ನು ಯಾರು ನಂಬುವ ಸ್ಥಿತಿಯಲ್ಲಿ ಇಲ್ಲ. ಓದಿದವರಿಗೆ ಅನುಕೂಲಸ್ತರು ವಿದ್ಯಾವಂತರು ಬೇಕು. ಈಗಿನ ಪ್ರತಿಮನೆಯಲ್ಲಿ ಓದದೆ ಇರುವ ಗಂಡುಮಕ್ಕಳನ್ನಾದರು ಹುಡುಕಬಹುದು ಹೆಣ್ಣುಮಕ್ಕಳನ್ನು ಹುಡುಕುವುದು ಕಷ್ಟ. ಒಂದಕ್ಕೊಂದು ತಾಳಮೇಳ ಸಿಗದಿರುವುದೆ ಈ ಪರಿಸ್ಥಿತಿ ಗೆ ಕಾರಣ.
ಹುಡುಗಿಯರು ಕಂಡಿತವಾಗಿ ಸಿಗುತ್ತಾರೆ ಅದರೆ ನಿಮ್ಮ ಮನಸ್ಸಿನಲ್ಲಿ , ತಂದೆ ತಾಯಿಗಳ ಮನಸ್ಸಿನಲ್ಲಿ ಪಟ್ಟಿ ಇಟ್ಟುಕೊಂಡಿರುತ್ತೀರಿ. ಆ ಪ್ರಕಾರ ಸಿಗುವುದಿಲ್ಲ ಅಷ್ಟೆ.
1. ಹುಡುಗಿ ಸುಂದರವಾಗಿರ ಬೇಕು. ತೆಳ್ಳಗೆ ಬೆಳ್ಳಗೆ ಇರಬೇಕು. ಎತ್ತರ ಸರಿ ಇರಬೇಕು.
2. ನಿಮ್ಮ ಶಿಕ್ಷಣಕ್ಕೆ ಸಮ ಇರಬೇಕು. ಉದಾ : ಡಾಕ್ಟರಾದರೆ, ಡಾಕ್ಟರು ಬೇಕು.
3. ನಮ್ಮ ಜಾತಿ/ ಉಪಜಾತಿಗೆ ಸರಿ ಇರಬೇಕು
4. ಜಾತಕ ಸರಿ ಬರ ಬೇಕು. ಜಾತಕ ದೋಷ ಇರ ಬಾರದು. ಗಣ ಕೂಟ ತಾಳೆ ಇರಬೇಕು
5. ಅನುಕೂಲವಂತರು ಆಗಿರಬೇಕು. ಸ್ವಂತ ಮನೆ, ಆಸ್ತಿ, ಖಾಲಿ ನಿವೇಶನಗಳು ಇದ್ದರೆ ಒಳ್ಳೆಯದು.
6. ಮದುವೆ ಯಲ್ಲಿ ಚಿನ್ನ ಇಷ್ಟು ಹಾಕ ಬೇಕು, ಕಾರು , ನಿವೇಶನ ತರ ತರದ ಬೇಡಿಕೆಗಳು.
7. ಮದುವೆ ಹೀಗೆ, ಇಂತಹ ಛತ್ರ/ ರಿಸಾರ್ಟ ನಲ್ಲಿ , luxury ಇರಬೇಕು. ಊಟದ ಮೇನು ಹೀಗೆ ಇರಬೇಕು , ಇಷ್ಟು ಜನರಿಗೆ ವ್ಯವಸ್ಥೆ, ಅವರಿಗೆ ಉಳಿದುಕೊಳ್ಳಲು A/c room , ಪಟ್ಟಿ ಇನ್ನು ಉದ್ದ ಆಗಬಹುದು
8. ಹುಡುಗಿ ಉದ್ಯೋಗದಲ್ಲಿರಬೇಕು. ಒಳ್ಳೆ ಸಂಬಳ ಇರಬೇಕು
9. ಹುಡುಗಿ ಸೌಮ್ಯ ಇರಬೇಕು. ಗುಣವತಿ ಇರಬೇಕು. ಮನೆಯವರ ಜೊತೆ ಹೊಂದಿಕೊಂಡು ಹೋಗಬೇಕು. ತುಂಬಾ modern ಬೇಡ. ತುಂಬಾ traditional ಬೇಡ.
10. ಹುಡುಗಿ ಊರು ತುಂಬಾ ದೂರ ಇರಬಾರದು. ತುಂಬಾ ಹತ್ತಿರ ಇರಬಾರದು. ಹಳ್ಳಿ ಮನೆ ಆಗಬಾರದು.
11. ಹುಡುಗಿ ನೋಡಲು ಜೊತೆಗೆ ಬಂದವರು, ಇನ್ನೂ ಕೆಲವು ಪಟ್ಟಿ ಸಿದ್ದ ಮಾಡಿ ಮಾಡಿಕೊಡುತ್ತಾರೆ. ಅದನ್ನು ಮುಂದೆ ಸೇರಿಸಬೇಕು.
ನಿಜವಾಗಿ ನೀವು ನಿಮ್ಮ ಸಂಗಾತಿ ಆಗುವವಳನ್ನು ಹುಡುಕಿದ್ದರೆ ಸಿಕ್ಕೆ ಸಿಗುತ್ತಾರೆ. ಪಟ್ಟಿ ಮಾಡಿ ಇಟ್ಟುಕೊಂಡಿದ್ದರೆ ಹೇಗೆ ಸಿಗಬೇಕು. ಪಟ್ಟಿ ಎಸೆಯಿರಿ. ಹುಡುಗಿ ಹುಡುಕಿ. ಅನುರೂಪ ಬಾಳ ಸಂಗಾತಿ ಅಷ್ಟೇ ಬೇಕಾಗಿರುವುದು. ಪಟ್ಟಿ ಪ್ರಕಾರ ಅಯ್ಕೆ ಮಾಡಿದ್ದು ಕಿತ್ತು ಹೋಗಿದ್ದೆ ಹೆಚ್ಚು.