ಈ ಪೂಜೆಯನ್ನು ಮಾಡಿ ನೋಡಿ ಶೀಘ್ರವಾಗಿ ಮನೆ ಕಟ್ಟುವ,ಖರೀದಿಸುವ ಕನಸು ಈಡೇರುತ್ತದೆ.: ವಿಡಿಯೋ ನೋಡಿ
ಮನೆ ಕಟ್ಟುವ ಆಸೆ ಇರುವವರು ಈ ಪೂಜೆಯನ್ನು ಮಾಡಿ, ತಕ್ಷಣವೇ ನಿಮ್ಮ ಇಚ್ಛೆ ಈಡೇರುವುದನ್ನು ನೋಡಿ.ಮನೆ ಕಟ್ಟುವುದು ಹಲವು ಜನರ ಅತಿ ದೊಡ್ಡ ಕನಸು ಹಾಗೂ ಮನೆ ಇದು ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ನಾವು ಮನೆಯನ್ನು ಕಟ್ಟುವುದು ಹೇಳಿದಷ್ಟು ಸುಲಭವಲ್ಲ ಅದಕ್ಕೆ ಹಿರಿಯರು ಹೇಳುವುದು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು. ಆದರೆ ಈ ಕಾಲದಲ್ಲಿ ಮದುವೆ ಬೇಕಾದರೆ ಮಾಡಬಹುದು ಆದರೆ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸವಾಗಿದೆ. ಎಷ್ಟೋ ಜನ ಕಟ್ಟಿರುವ ಮನೆಯನ್ನು ಕೊಂಡುಕೊಳ್ಳುವ ಆಸೆ ಹೊಂದಿರುತ್ತಾರೆ ಆದರೆ ಅದಕ್ಕೆ ನೂರೆಂಟು ವಿಘ್ನಗಳು ಆಗುತ್ತಿರುತ್ತವೆ. ಮನೆ ಕಟ್ಟುವ ಆಸೆ ಇಂದ ಪ್ರಯತ್ನ ಮಾಡಿದರೂ ಅದು ಅರ್ಧಕ್ಕೆ ನಿಂತುಹೋಗುತ್ತದೆ. ಈ ರೀತಿಯ ಸಮಸ್ಯೆ ಆಗುತ್ತಿದ್ದರೆ ಈ ಕಾಮಾಕ್ಷಿ ತಾಯಿ ಹಾಗೂ ಗಜಲಕ್ಷ್ಮಿ ದೇವಿಗೆ ಪೂಜೆ ಈ ರೀತಿ ಪೂಜೆ ಮಾಡಿ ನೋಡಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗಿ ಆದಷ್ಟು ಬೇಗ ನಿಮಗೆ ಮನೆ ಆಗುತ್ತದೆ.ಕಾಮಾಕ್ಷಿ ತಾಯಿ ಹಾಗೂ ಗಜಲಕ್ಷ್ಮಿ ದೇವಿಗೆ ಈ ರೀತಿ ಪೂಜೆ ಮಾಡುವುದರಿಂದ ನಿಮ್ಮ ಮನೆ ಕಟ್ಟುವ ಕನಸಿಗೆ ಇರುವ ವಿಘ್ನಗಳು ನಿವಾರಣೆಯಾಗುತ್ತದೆ.
ಮೊದಲಿಗೆ ಅರಿಶಿನದ ಬಟ್ಟಲಿನಲ್ಲಿ ಅರಿಶಿನ ಹಾಗೂ ಒಂದು ಬಟ್ಟಲಿನಲ್ಲಿ ಕುಂಕುಮ ತೆಗೆದುಕೊಳ್ಳಿ. ಈ ದೇವಿಗೆ ಕನಕಾಂಬರ ಹಾಗೂ ಮಲ್ಲಿಗೆ ಹೂವೆಂದರೆ ಇಷ್ಟ ಆದ್ದರಿಂದ ಈ ಪೂಜೆಗೆ ಅವುಗಳನ್ನು ಬಳಸುವುದು ಉತ್ತಮ. ನಂತರ ಎರಡು ಪೂಜೆ ತಟ್ಟೆಗಳನ್ನು ತೆಗೆದುಕೊಳ್ಳಿ. ಎರಡು ತಟ್ಟೆಗಳಿಗೂ ಸುತ್ತಲೂ ಐದು ಅಥವಾ ಒಂಬತ್ತು ಕಡೆ ಅರಿಶಿನ ಕುಂಕುಮವಿಟ್ಟು ಅಲಂಕರಿಸಿಕೊಳ್ಳಿ. ನಂತರ ಒಂದು ತಟ್ಟೆಯಲ್ಲಿ ಕಾಮಾಕ್ಷಿ ದೀಪ ಹಾಗೂ ಇನ್ನೊಂದು ತಟ್ಟೆಯಲ್ಲಿ ಗಜಲಕ್ಷ್ಮಿ ದೀಪವನ್ನು ಇಟ್ಟು ಅರಿಶಿನ ಕುಂಕುಮ ಹಾಗೂ ಹೂಗಳಿಂದ ಅಲಂಕಾರ ಮಾಡಬೇಕು. ನಂತರ ಈ ದೀಪಕ್ಕೆ ಬತ್ತಿ ಹಾಕಿ ಎಣ್ಣೆಯನ್ನು ಹಾಕಿ ಹಚ್ಚಬೇಕು. ಆ ದೀಪಗಳ ಒಳಗಡೆ ಕುಬೇರನಿಗೆ ಇಷ್ಟವಾದ ಐದು ರೂ ನಾಣ್ಯವನ್ನು ಹಾಕಬೇಕು .
ಅಥವಾ ನಿಮ್ಮ ಬಳಿ ಇಲ್ಲ ಎಂದರೆ ಎರಡು ರೂ ನಾಣ್ಯವನ್ನು ಸಹ ಹಾಕಬಹುದು. ನಂತರ ಧೂಪ ದೀಪಗಳಿಂದ ಭಕ್ತಿಯಿಂದ ತಾಯಿಯನ್ನು ನೆನೆಸಿಕೊಳ್ಳುತ್ತಾ ದೀಪಗಳನ್ನು ಪೂಜೆ ಮಾಡಿ ನಿಮ್ಮ ಹರಕೆಯನ್ನು ಹೇಳಿಕೊಳ್ಳಬೇಕು. ನಿಮಗೆ ಯಾವುದೇ ಭೂಮಿ ಇಲ್ಲ ಅಂದರೆ ಐದು ರೂ ನ ಒಂದೊಂದು ನಾಣ್ಯಗಳನ್ನು ದೀಪದ ಕೆಳಗಡೆಯೂ ಸಹ ಇಡಬೇಕು. ಮೊದಲಿಗೆ ಇದನ್ನು ಶುಕ್ರವಾರದಂದು ಪ್ರಾರಂಭಿಸಬೇಕು. ನಂತರ ಪ್ರತಿ ಶುಕ್ರವಾರ ಈ ನಾಣ್ಯವನ್ನು ಬದಲಾಯಿಸಬೇಕು. ತೆಗೆದ ನಾಣ್ಯವನ್ನು ಒಂದು ಹುಂಡಿಯಲ್ಲಿ ಶೇಖರಿಸಿ ನಿಮ್ಮ ಹರಕೆ ಪೂರ್ತಿಯಾದ ನಂತರ ಅನ್ನದಾನ ಮಾಡಲು ಅಥವಾ ತಾಯಿ ರೂಪದಲ್ಲಿ ಇರುವವರಿಗೆ ಕಾಣಿಕೆ ಕೊಡಲು ಉಪಯೋಗಿಸಿ ಕೊಳ್ಳಬಹುದು. ಈ ರೀತಿ ಮಾಡುವುದರಿಂದ ಆದಷ್ಟು ಬೇಗ ನಿಮಗೆ ಮನೆ ದೊರಕುತ್ತದೆ. ( video credit : kannada vlogs )