ನಮ್ಮ ಪುನೀತ್ ಕನ್ನಡದ ಹೆಮ್ಮೆ.. ಕನ್ನಡದ ಕಣ್ಮಣಿ… ಕನ್ನಡದ ಕಂದ…. ಕನ್ನಡದ ಕರುಣಾಮಯಿ…ಭಾರತದ್ಯಂತ ಕನ್ನಡದ ಗೌರವ ಹೆಚ್ಚಿಸಿರುವ ಪುಟಿದಿಟ್ಟ ಚಿನ್ನ
ಕರ್ನಾಟಕ ರತ್ನ.ಎಲ್ಲರ ಹೃದಯ ಸಿಂಹಾಸನದಲ್ಲಿ ಇರುವ ಪುನೀತ್ ರನ್ನು ಅವರ ಅಭಿಮಾನಿಗಳು ದೇವರೆಂದು ಪೂಜಿಸುತ್ತಾರೆ . ಮತ್ತು ಎಷ್ಟೋ ಜನ ಅವರ ಮನೆಯಲ್ಲಿ ದೇವರ ಮದ್ಯೆ ಪುನೀತ್ ಫೋಟೋ ಇಟ್ಟುಅವರನ್ನು ಪೂಜಿಸುತ್ತಾರೆ. ಪುನೀತ್ ಅವರನ್ನು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರು ಇಷ್ಟ ಪಡುತ್ತಾರೆ . ಅವರು ಮಾಡಿರುವ ದಾನ ಧರ್ಮ ಯಾರು ಮಾಡುವದಕ್ಕೆ ಸಾಧ್ಯವಿಲ್ಲ

ದೇವರಿಗಿಂತ ದೊಡ್ಡವರು ನಮ್ಮ ಅಪ್ಪು ಅವರು. ಇಂಥವರಿಂದ ಅಪ್ಪು ಅವರ ಅಭಿಮಾನ ಯಾವತ್ತೂ ಕಮ್ಮಿ ಆಗುವುದಿಲ್ಲ. ಅಪ್ಪು ಬಾಸ್ ಎಂದೆಂದಿಗೂ ಜೀವಂತ.

ಅಂತಹದರಲ್ಲಿ ಪುನೀತ್ ಬಗ್ಗೆಒಬ್ಬ ಮಹಿಳೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮಲ್ಲೇಶ್ವರಂ ಬಳಿ ಆಟೋ ಚಾಲಕರು ಮತ್ತು ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿದೆ. ಪುನೀತ್ ಕನ್ನಡ ಬಾವುಟದಲ್ಲಿ ಇರಕೂಡದು ಅಂತ ಮಹಿಳೆ ಕಿರಿಕ್ ಮಾಡಿದ್ದಾರೆ. ಸದ್ಯ ದೊಡ್ಮನೆ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಇದ್ರಲ್ಲಿ ಯಾರದು ತಪ್ಪಿಲ್ಲ . ಆಟೋ ಚಾಲಕರು ತಮ್ಮ ಪ್ರೀತಿಯನ್ನು ತೋರಿಸುವದಕ್ಕೆ ಈ ರೀತಿಯ ಪುನೀತ್ ಫೋಟೋ ಕನ್ನಡ ಬಾವುಟದಲ್ಲಿ ಹಾಕಿದ್ದಾರೆ . ಆದರೆ ಆ ಮಹಿಳೆ ಇಷ್ಟೊಂದು ರಾದ್ದಂತ ಮಾಡುವ ಅವಶ್ಯಕತೆ ಇರಲಿಲ್ಲ . ಪಬ್ಲಿಕ್ನಲ್ಲಿ ಮಾತನಾಡುವಾಗ ಸೌಜನ್ಯ ಇರ ಬೇಕು . ಅದು ಬಿಟ್ಟು ಬಾಯಿಗೆ ಬಂದಂಗೆ ಮಾತನಾಡುವದಲ್ಲ . ಇದಕ್ಕೆ ನಿಮ್ಮ ಪ್ರತಿಕ್ರಿಯೆ ತಿಳಿಸಿ ( video credit : tv 9 kannada )

By Kumar K