ಪುನೀತ್ ರಾಜ್ ಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು. ಮಾತ್ರವಲ್ಲದೇ ಸುಮಾರು 45 ಕ್ಕೂ ಹೆಚ್ಚು ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಮಿಗಿಲಾಗಿ ಶಕ್ತಿಧಾಮ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು.ಅವರ ಈ ಕೆಲಸ ನಿಜಕ್ಕೂ ಮೆಚ್ಚುವಂತಹದ್ದು.

ಇದೀಗ ಅಪ್ಪು ಇಲ್ಲ.ಆದರೆ ಅಪ್ಪುವನ್ನು ನೆನಪಿಸಿಕೊಳ್ಳುತ್ತಿರುವವರು ಒಬ್ಬರಲ್ಲ ಇಬ್ಬರಲ್ಲ ಅದೆಷ್ಟೋ ಅಭಿಮಾನಿಗಳು. ಕನ್ನಡ ಮಾತ್ರವಲ್ಲದೇ ಪರ ಭಾಷಾ ನಟ ನಟಿಯರು ಅಪ್ಪುವಿನ ನಡೆ ನುಡಿಯನ್ನು ಕೊಂಡಾಡುತ್ತಿದ್ದಾರೆ. ಇನ್ನು ಅಪ್ಪು ನೋಡಿಕೊಳ್ಳುತ್ತಿದ್ದ ಶಕ್ತಿಧಾಮದಲ್ಲಿ ಏನೆಲ್ಲಾ ವ್ಯವಸ್ಥೆ ಇತ್ತು ಎಂದರೆ ನೀವು ದಂಗಾಗುತ್ತೀರಿ.

ಇದೀಗ ಶಕ್ತಿಧಾಮ ಪುನೀತ್ ರಾಜ್ ಕುಮಾರ್ ಇಲ್ಲದೆ ಅನಾಥವಾಗಿದೆ. ಆದರೆ ಅಣ್ಣಾವ್ರು ಕನಸಿನ ಶಕ್ತಿ ಧಾಮವೂ ಹೈ ಟೆಕ್ ಸ್ಪರ್ಶ ಪಡೆದಿತ್ತು. ಅಂದಹಾಗೆ,ಉತ್ತಮವಾದ ಪರಿಸರದ ನಡುವೆ ಶಕ್ತಿಧಾಮದ ಸುಸಜ್ಜಿತವಾದ ಕಟ್ಟಡವಿದೆ. ಮಕ್ಕಳಿಗೆ ಉತ್ತಮವಾದ ವ್ಯವಸ್ಥೆ ಇದೆ. ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡುವುದಕ್ಕಾಗಿ ಕಂಪ್ಯೂಟರ್ಗಳನ್ನು ಅಳವಡಿಸಲಾಗಿದ್ದು, ಅಲ್ಲಿನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಕೂಡ ಇದೆ.

ಇನ್ನು, ಆ ಮಕ್ಕಳಿಗೆ ಪ್ರತಿದಿನ ಯೋಗಾಭ್ಯಾಸವನ್ನು ಮಾಡಿಸಲಾಗುತ್ತದೆ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಸಲಾಗುತ್ತದೆ. ಅಲ್ಲಿನ ಮಕ್ಕಳಿಗೆ ಮೈದಾನ,ಗ್ರಂಥಾಲಯ ವ್ಯವಸ್ಥೆ ಇದೆ.ಅಷ್ಟೇ ಅಲ್ಲದೇ,ಮಕ್ಕಳು ಮಲಗುವ ಕೊಠಡಿಗಳಲ್ಲಿ ಕಾಟ್ ಗಳ ವ್ಯವಸ್ಥೆ,ಒಂದೇ ರೀತಿಯಾದ ಸಮವಸ್ತ್ರವನ್ನು ನೀಡಲಾಗಿದೆ.ಅಷ್ಟೇ ಅಲ್ಲದೇ,ಮಕ್ಕಳ ಜೊತೆಗೆ ಮಹಿಳೆಯರಿಗೂ ಕೂಡ ಕೌಶಲ್ಯಗಳ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗವನ್ನು ಒದಗಿಸಲಾಗುತ್ತದೆ. ಅಷ್ಟೇ ಅಲ್ಲದೇ,ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಉತ್ತಮ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.

ಇನ್ನು ಪುನೀತ್ ಅವರು ಆಶ್ರಮಕ್ಕೆ ಭೇಟಿ ನೀಡಿ ಅವರ ಕೋರಿಕೆಯನ್ನು ನೆರವೇರಿಸುತ್ತಿದ್ದರು.ಆದರೆ ಇದೀಗ ಅಪ್ಪು ಅವರೇ ಇಲ್ಲ.ಶಕ್ತಿಧಾಮದ ಮಕ್ಕಳು ಕೂಡ ಇದೀಗ ಅನಾಥವಾಗಿದೆ.ಆದರೆ ಅಪ್ಪುವಿನ ಆದರ್ಶಗಳು ಎಲ್ಲರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ಇನ್ನು ಶಕ್ತಿ ಧಾಮದ ಮಕ್ಕಳಿಗೆ ಮಾತ್ರವಲ್ಲ, ಯಾರೇ ಕಷ್ಟ ಎಂದು ಬಂದರೆ ಅವರಿಗೆ ಸಹಾಯ ಮಾಡಿ ಕಳುಹಿಸುವುದು ಅಪ್ಪುವಿನ ದೊಡ್ಡ ಗುಣವಾಗಿದೆ. ಹೀಗಾಗಿ ಅಪ್ಪು ದೈಹಿಕವಾಗಿ ಇಲ್ಲವಾದರೂ ಕೂಡ ಅವರು ಮಾಡಿರುವ ಕೆಲಸಗಳು ಸಾಕಷ್ಟು ಜನರ ಮನಸ್ಸಿನಲ್ಲಿ ಅಪ್ಪು ಮತ್ತೆ ಹುಟ್ಟುವಂತೆ ಮಾಡಿದೆ. ಒಟ್ಟಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಎಂದೆಂದಿಗೂ ಜೀವಂತ.