ಅರ್ಜಿ ಹಾಕಿದ್ರೂ ಸಹ ಗೃಹಲಕ್ಷ್ಮಿ ಹಣ ಬಂದಿಲ್ವಾ..? ಈ ಕೆಲಸ ತಕ್ಷಣ ಮಾಡಿ

ಅರ್ಜಿ ಹಾಕಿದ್ರೂ ಸಹ ಗೃಹಲಕ್ಷ್ಮಿ ಹಣ ಬಂದಿಲ್ವಾ..?  ಈ ಕೆಲಸ ತಕ್ಷಣ ಮಾಡಿ

ಈ ಬಾರಿ ಮೆ ತಿಂಗಳಲ್ಲಿ ಆಯ್ಕೆ ಆದ "ಕಾಂಗ್ರೆಸ್ ಸರ್ಕಾರ" ತಾವು ಕೊಟ್ಟ ಮಾತಿನಂತೆ ಒಂದೊಂದೇ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇನ್ನೂ ಚುನಾವಣೆಯ ಸಂಧರ್ಭದಲ್ಲಿ ಮತ ಬಾಂಧವರಿಗೆ ತಮ್ಮ ಜೀವನಕ್ಕೆ ಅನುಕೂಲ ಆಗುವಂತಹ ಉಚಿತ ಯೋಜನೆಗಳನ್ನು ನೀಡಿ ಅವರ ಬಾಳನ್ನು ಮತ್ತಷ್ಟು ಸುಧಾಹರಣೇ ಮಾಡಿಕೊಳ್ಳಲ್ಲು ಅವರು ಬಿಡುಗಡೆ ಮಾಡುವ ಯೋಜನೆಗಳು ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದ್ದರು. ಇನ್ನೂ ಅವರು ಕೊಟ್ಟ ಮಾತಿನಂತೆ ಕರ್ನಾಟಕದ ಮಹಿಳೆಯರಿಗೆ "ಗೃಹ ಲಕ್ಷ್ಮಿ" ಯೋಜನೆಯಿಂದ '2000 ' ಹಾಗೋ "ಗೃಹ ಜ್ಯೋತಿ" ಇಂದ ಎಲ್ಲಾ ಮನೆಗೂ '200 ಯುನಿಟ್ ' ಉಚಿತವಾಗಿ ನೀಡುವುದುವಾಗಿ ತಿಳಿಸಿದ್ದರು.

ಇದೀಗ ಈ ಎರಡು ಯೋಜನೆಗಳು ಕೂಡ ಜಾರಿಗೆ ಬಂದು ಮೂರು ತಿಂಗಳ ವಸ್ತಿಲಲ್ಲಿ ಇದೆ. ಇನ್ನೂ ಈ ಮೂರು ತಿಂಗಳಲ್ಲೇ ಈ ಯೋಜನೆಗೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು ಕೊಡ ಇನ್ನೂ ಅರ್ಜಿಗಳ ಪ್ರಕ್ರಿಯೆ ಮುಗಿದಿಲ್ಲ. ಅದರಲ್ಲಿ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯಲ್ಲಿ ಸಾಕಷ್ಟು ಷರತ್ತುಗಳನ್ನು ವಿಧಿಸಿರುವ ಕಾರಣ ಈ ಯೋಜನೆಯ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕವನ್ನು ಘೋಷಣೆ ಮಾಡಿಲ್ಲ. ಇನ್ನೂ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಅನ್ವಯ ಆಗುವ ಮಹಿಳೆಯರು ಈಗಾಗಲೇ ಅರ್ಜಿ ಸಲ್ಲಿಕೆ ಕೂಡ ಮಾಡಿದ್ದಾರೆ. ಇನ್ನೂ ರಾಜ್ಯ ಸರ್ಕಾರ ತಿಳಿಸಿರುವ ಹಾಗೆ ಇದೆ ಆಗಸ್ಟ್ ತಿಂಗಳಲ್ಲಿ ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 2000 ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. 

ಇನ್ನೂ "ರಾಹುಲ್ ಗಾಂಧಿ" ಅವರು ತಿಳಿಸಿದ ಹಾಗೆ ಆಗಸ್ಟ್ 30 ರಂದು ಅದೆಷ್ಟೋ ಲಕ್ಷಾಂತರ ಮಂದಿಗೆ ಅವರು ಸೋಚಿಸಿದ್ದ ಬ್ಯಾಂಕ್ ಖಾತೆಗೆ 2000 ಹಣ ಜಮಾ ಆಗಿತ್ತು. ಆದರೆ ಇನ್ನೂ ಅದೆಷ್ಟೋ ಮಹಿಳೆಯರ ಅರ್ಜಿ ತಿರಸ್ಕಾರ ಆಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇನ್ನೂ ತಮ್ಮ ಖಾತೆಗೆ ಹಣ ಬಂದಿಲ್ಲದ ಕಾರಣ ತಾವು ಫಲಾನುಭವಿ ಆಗಲು ಅನರ್ಹರು ಎಂದು ಸಾಕಷ್ಟು ಮಹಿಳೆಯರು ಸುಮ್ಮನಾಗಿದ್ದರು. ಆದ್ರೆ ಇದೀಗ ರಾಜ್ಯ ಸರ್ಕಾರ ಒಂದು ಸಂದೇಶವನ್ನು ಹೊರಡಿಸಿದೆ. ಆ ಸಂದೇಶದ ಪ್ರಕಾರ ಅರ್ಜಿ ಸಲ್ಲಿಸಿ ಹಣ ಪಡೆಯದೆ ಇರುವ ಮಹಿಳೆಯರಿಗೆ  ಅರ್ಜಿ ಸಲ್ಲಿಕೆಯ ವೇಳೆಯಲ್ಲಿ ಆಗಿರುವ ಕಣ್ಣ್ತಪ್ಪಿನ ಬಗ್ಗೆ ಎಚ್ಚರ ವಹಿಸಲು "ಅನರ್ಹರ ಪಟ್ಟಿ" ಯ ಜೊತೆಗೆ ಕಾರಣ ಕೂಡ ತಿಳಿಸಲಾಗಿದೆ. ಇನ್ನೂ ಹಣ ಪಡೆಯದ ಮಹಿಳೆಯರು ಅನರ್ಹರ ಪಟ್ಟಿ ವೀಕ್ಷಣೆ ಮಾಡಿ ಅಲ್ಲಿರುವ ಲೋಪವನ್ನು ಸರಿಪಡಿಸಿಕೊಂಡು ಮತ್ತೆ ಅರ್ಜಿ ಸಲ್ಲಿಸಿ ರಾಜ್ಯ ಸರ್ಕಾರ ನೀಡುತ್ತಿರುವ ಯೋಜನೆಯ ಫಲಾನುಭವಿ ಆಗಲಿ ಎಂದು ನಾವು ಇಚ್ಚಿಸುತ್ತೇವೆ.