ಅಪ್ಪು ಕಾರ್ಯಕ್ರಮ ನೋಡುತ್ತಿದ್ದಂತೆ ದುಃಖ ಹೆಚ್ಚಾಗಿ ಅಭಿಮಾನಿ ಸಾವು..! ಅಸಲಿಗೆ ಆಗಿದ್ದೆ ಬೇರೆಯಂತೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನ ಯಾರು ಇಷ್ಟಪಡುತ್ತಿರಲಿಲ್ಲ ಹೇಳಿ ನೋಡೋಣ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಂದರೆ ಸಾಕಷ್ಟು ಅಭಿಮಾನಿಗಳಿಗೆ ಇಷ್ಟ. ಅವರನ್ನು ಇಷ್ಟಪಡುತ್ತಿದ್ದವರ ಸಂಖ್ಯೆ ಹೆಚ್ಚು ಬಿಡಿ. ಹಾಗೆ ಬದುಕಿ ಹೋಗಿದ್ದಾರೆ ಅಪ್ಪು. ಇಡೀ ಕನ್ನಡಿಗರು ಇಂದಿಗೂ ಕೂಡ ಅಪ್ಪು ಅವರ ಅಗಲಿಕೆ ನೋವಿನಲ್ಲಿಯೇ ಇದ್ದಾರೆ ಎನ್ನಬಹುದು. ನಿನ್ನೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುನೀತ ಪರ್ವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ..ಆದರೆ ಇದೀಗ ಇನ್ನೊಂದು ದುಃಖದ ಸುದ್ದಿ ಏನಪ್ಪಾ ಅಂದ್ರೆ, ಪುನೀತ್ ಅವರ ಅಭಿಮಾನಿ ಎನ್ನಲಾದ ಒಬ್ಬ ಯುವಕ ಪುನೀತ ಪರ್ವ ಕಾರ್ಯಕ್ರಮ ನೋಡುತ್ತಾ ಇದ್ದು ಅದು ಮುಗಿಯುತ್ತ ಇದ್ದಂತೆಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುನೀತ ಪರ್ವ ಕಾರ್ಯಕ್ರಮ ನೋಡುತ್ತಿದ್ದ ಯುವಕನಿಗೆ ಇದ್ದಕ್ಕಿದ್ದಂತೆ ದುಃಖ ಹೆಚ್ಚಾಗಿದೆ. ನಂತರ ಬಾತ್ರೂಮಿಗೆ ಹೋಗಿ ಬರುತ್ತೇನೆ ಎಂದು ಎದ್ದು ಒಳಹೋದ ಯುವಕ ನಂತರ ಬಂದಿದ್ದು ಅಜೀವವಾಗಿ. ಬಾತ್ರೂಮಿಗೆ ಹೋಗಿ ನಂತರ ಅಲ್ಲಿ ಏನಾಯ್ತು ಗೊತ್ತಿಲ್ಲ, ದಡ್ ಎಂದು ಸದ್ದು ಕೇಳಿತು ಎಂದು ಆತನ ಕುಟುಂಬಸ್ತರು ಹೇಳಿಕೊಂಡಿದ್ದಾರೆ. ಆಗ ನೆಲಕ್ಕೆ ಬಿದ್ದಿದ್ದಾರೆ. ಇದು ಸೌಂಡು ಏನು ಎಂದು ಆ ಡೋರ್ ಓಪನ್ ಮಾಡಲು ಪ್ರಯತ್ನಿಸಿದ ಯುವಕನ ಕುಟುಂಬದವರು ಆರಂಭದಲ್ಲಿ ಪರದಾಡಿದ್ದಾರೆ. ನಂತರ ಆತನನ್ನು ಹೇಗೋ ಹೊರಗಡೆ ತೆಗೆದು ಎಚ್ಚರ ತಪ್ಪಿದ್ದ ಯುವಕ ನೋಡಿ ಹೆದರಿ ಆ ಕುಟುಂಬದವರು ಆಸ್ಪತ್ರೆಗೆ ದಾಖಲೆಸಿದ್ದಾರಂತೆ.

ಆದ್ರೆ ಅಲ್ಲಿಗೆ ಹೋಗುವಷ್ಟರಲ್ಲಿ ಯುವಕನ ಪ್ರಾಣ ಹಾರಿ ಹೋಗಿತ್ತು. ಆಸ್ಪತ್ರೆ ವೈದ್ಯರು ಜೀವ ಇಲ್ಲ. ಪೋಸ್ಟ್ ಮಾಟಂ ಮಾಡುವುದ ಎಂದು ಕೇಳಿದ್ದು, ಕುಟುಂಬದವರು ಬೇಡ ಎಂದಿದ್ದಾರೆ. ಕುಟುಂಬದ ಸಂಬಂಧಿಕರು ಇದೀಗ ಯುವಕ ನನ್ನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅಸಲಿಗೆ ಆತನ ಕುಟುಂಬದ ಸಂಬಂಧಿಕರು ಹೇಳಿದ್ದೇನು ಗೊತ್ತಾ.? ಇಲ್ಲಿದೆ ನೋಡಿ ಅಸಲಿ ವಿಡಿಯೋ.. ಹಾಗೆ ಈತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ…

By Kumar K