DKD ಗೆ ವಿಜಯ್ ಮತ್ತೆ ಬರುತ್ತಾರಾ..? ಇಲ್ಲಿದೆ ಅನುಶ್ರೀ ಬಳಿ ರಾಘು ತಿಳಿಸಿದ ನಿರ್ಧಾರ..!

ಕನ್ನಡ ಕಿರುತೆರೆಯ ಅಂಗಳದಲ್ಲಿ ಹಾಗೆ ಕಿರುತೆರೆಯ ಕೆಲ ಚಾನೆಲ್ಗಳ ಮೂಲಕ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳು ಹೊರ ಬಂದಿವೆ. ಅವುಗಳೆಲ್ಲ ಅವುಗಳದ್ದೇ ಆದ ಪ್ರಾಮುಖ್ಯತೆಯನ್ನು ಈಗ ಬೆಳೆಸಿಕೊಂಡಿವೆ. ಈ ವೇದಿಕೆಗಳು ಪ್ರತಿಭಾವಂತ ಕಲಾವಿದರಿಗೆ ದಾರಿ ದೀಪ ಆಗಿವೆ, ಸಾಕಷ್ಟು ಕಲಾವಿದರು ಕಿರುತೆರೆಯ ಶೋಗಳನ್ನೆ ನಂಬಿಕೊಂಡಿದ್ದಾರೆ... ಹೌದು. ಇತ್ತೀಚಿಗಷ್ಟೇ ಒಂದು ಘಟನೆ ನಡೆಯಿತು.. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹೆಸರು ಮಾಡಿದ್ದ ಹಾಗೂ ಕಿರುತೆರೆ ರಂಗದಲ್ಲಿ ಇತ್ತೀಚಿಗೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಗಲಿಕೆ..
ಹೌದು ಇದರಿಂದ ಅವರ ಕುಟುಂಬಕ್ಕೆ ತುಂಬಾನೇ ದೊಡ್ಡ ಲಾಸ್ ಆಗಿದೆ ಎಂದು ಹೇಳಬಹುದು. ಹಾಗೇನೆ ಹೆಚ್ಚು ನೋವು ಕೂಡ ಅವರಿಗೆ ಈಗಲೂ ಇದೆ. ಸ್ಪಂದನ ಅವರ ಅಗಲಿಕೆಯಿಂದ ಅವರು ಇನ್ನೂ ಯಾರು ಕೂಡ ಹೊರಬಂದಿಲ್ಲ. ವಿಜಯ ರಾಘವೇಂದ್ರ ಅವರು ಜಡ್ಜ್ ಆಗಿ ಡಿಕೆಡಿ ಶೋನಲ್ಲಿ ಕಾರ್ಯನಿರ್ವಹಿಸುತ್ತಿದ್ದಂತವರು. ಹೌದು ಈಗಾಗಲೇ ಏಳು ಸೀಸನ್ ಮುಗಿಸಿರುವ ಡಿಕೆಡಿ ಕಾರ್ಯಕ್ರಮ ತನ್ನದೇ ಆದ ಹೆಚ್ಚು ಹೆಸರನ್ನು ಮಾಡಿದೆ. ಆ ಕಾರ್ಯಕ್ರಮಕ್ಕೆ ನಿನ್ನೆ ವಿಜಯ್ ಅವರು ಬಂದಿಲ್ಲ. ಇದರ ಕುರಿತಾಗಿ ಮಾತನಾಡಿದ ಅನುಶ್ರೀ, ವಿಜಯ್ ರಾಘವೇಂದ್ರ ಅವರನ್ನು ಮತ್ತೆ ಡಿಕೆಡಿ ಕಾರ್ಯಕ್ರಮಕ್ಕೆ ಬರುವಂತೆ ಕರೆಯಲು ಮನೆಗೆ ಹೋಗಿದ್ದರಂತೆ..ಆಗ ವಿಜಯ ರಾಘವೇಂದ್ರ ಅವರು ನಾನು ಖಂಡಿತ ಬಂದೇ ಬರುತ್ತೇನೆ, ಆದರೆ ಈಗ ಶೋಗೆ ನನಗೆ ಬರಲು ಸಾಧ್ಯ ಆಗುತ್ತಿಲ್ಲ, ನಾನು ಬಂದೇ ಬರುತ್ತೇನೆ, ನೀ ಬೇಜಾರಲ್ಲಿ ಇರಬೇಡ, ಆ ಕಾರ್ಯಕ್ರಮದ ಮೂಲಕ ಹಲವಾರು ಸಣ್ಣ ಮಕ್ಕಳ ಭವಿಷ್ಯ ಅಡಗಿದೆ, ಕಾರ್ಯಕ್ರಮವನ್ನು ನಿಲ್ಲಿಸುವ ಅಥವಾ ನಾನು ಬರಲಿಲ್ಲ ಎಂದು ಸ್ವಲ್ಪ ದಿನ ಮುಂದುಡಿಕೆ ಹಾಗೆಲ್ಲ ಮಾಡಬೇಡಿ, ನೀನು ಚೆನ್ನಾಗಿ ನಿರೂಪಣೆ ಮಾಡು, ನಾನು ಬಂದೆ ಬರುತ್ತೇನೆ ಈಗ ನನಗೆ ಬರಲು ಸಾಧ್ಯವಾಗಲ್ಲ ಕ್ಷಮಿಸು ಎಂದು ಅನುಶ್ರೀ ಅವರ ಬಳಿ ಹೇಳಿದ್ದಾರಂತೆ.
ಈ ವಿಚಾರವನ್ನು ವೇದಿಕೆ ಮೇಲೆ ಸ್ವತಃ ಅನುಶ್ರೀಯವರೆ ಹೇಳಿಕೊಂಡಿದ್ದು, ಆ ವಿಚಾರದ ವಿಡಿಯೋ ತುಣುಕು ಇದೀಗ ವೈರಲಾಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ. ವಿಜಯ್ ರಾಘವೇಂದ್ರ ಅವರು ಅನುಶ್ರೀಗೆ ಇನ್ನೂ ಏನೇನೆಲ್ಲಾ ಹೇಳಿದರು ಎಂಬುದಾಗಿ ಗೊತ್ತಾಗುತ್ತದೆ. ವಿಡಿಯೋನ ಶೇರ್ ಮಾಡಿ, ಡಿಕೆಡಿ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ಅವರನ್ನು ನೀವು ಕೂಡ ಮಿಸ್ ಮಾಡಿಕೊಳ್ಳುತ್ತಿದ್ದರೆ ಕಮೆಂಟ್ ಮಾಡಿ, ಧನ್ಯವಾದಗಳು.