ಸ್ವಂತ ಮನೆಯನ್ನ ಮಾರಿದ್ಯಾಕೆ ವಿಜಯ್ ಕುಟುಂಬ..! ಇಲ್ಲಿದೆ ಅಸಲಿ ಕಾರಣ
ನಟ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ದೈಹಿಕವಾಗಿ ದೂರವಾಗಿದ್ದಾರೆ. ಇವರ ನೋವಿನಲ್ಲಿರುವ ವಿಜಯ್ ರಾಘವೇಂದ್ರ ಮತ್ತು ಅವರ ಇಡೀ ಕುಟುಂಬಕ್ಕೆ ದೇವರು ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಾವು ನೀವೂ ಪ್ರಾರ್ಥಿಸೋಣ. ವಿಜಯ್ ರಾಘವೇಂದ್ರ ಅವರ ತಂದೆ ಚೆನ್ನೇಗೌಡರು. ಹೌದು ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ. ನಿಜ ಜೀವನದಲ್ಲಿ ಪ್ರತಿಯೊಬ್ಬರ ಕುಟುಂಬದಲ್ಲೂ ಸಾಕಷ್ಟು ಕಷ್ಟಗಳು ಎದುರಾಗುತ್ತವೆ.ಅದರಂತೆ ಚಿನ್ನೇ ಗೌಡರು ಪ್ರೀತಿಯಿಂದ ಕಟ್ಟಿಸಿದ್ದ ರಾಜಾಜಿನಗರದ ಮನೆ ಮಾರಾಟ ಆಗಿದ್ದು ಏಕೆ.? ಜೊತೆಗೆ ಆಗ ಕೇಳಿ ಬಂದ ಮಾತುಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಇರುವ ವಿಚಾರವನ್ನು ತಿಳಿಸಲು ಹೊರಟಿದ್ದೇವೆ.
ಸಿನಿಮಾ ವಿತರಕರಾಗಿ ಹಾಗಿ ಕೆಲ ಸಿನಿಮಾಗಳ ನಿರ್ಮಾಣ ಮಾಡಿ ನಿರ್ಮಾಪಕರು ಆಗಿ ದುಡಿದ ದುಡ್ಡಿನಲ್ಲಿ ಪ್ರೀತಿಯಿಂದ ರಾಜಾಜಿನಗರದಲ್ಲಿ ತಮ್ಮ ಇಬ್ಬರೂ ಮಕ್ಕಳಿಗೆ ಆಗುವಂತೆ ಒಂದು ಮನೆಯನ್ನ ಕಟ್ಟಿಸಿದ್ದರು. ಅದನ್ನು ಮಾರುವ ಪರಿಸ್ಥಿತಿ ಬರುತ್ತದೆ, ಯಾವಾಗ ಹೇಗೆ ಎಂಬುದಾಗಿ ತಿಳಿದುಕೊಳ್ಳೋಣ. 2006-07ರ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಅವರ ಸಿನಿಮಾಗಳು ಒಂದು ಕಡೆ ಸೋಲನ್ನ ಹೆಚ್ಚು ಅನುಭವಿಸುತ್ತಿರುತ್ತವೆ. ಅತ್ತ ಶ್ರೀ ಮುರುಳಿಯವರ ಸಿನಿಮಾಗಳು ಕೂಡ ಹೆಚ್ಚು ಯಶಸ್ಸು ಕಾಣುತ್ತಿರಲಿಲ್ಲ. ಆಗ ಚಿಹ್ನೆಗೌಡರು ಯಾರದ್ದೋ ಮಾತು ಕೇಳಿ ಒಂದು ಬಿಸ್ನೆಸ್ ಆರಂಭ ಮಾಡಲು ಕೈ ಹಾಕುತ್ತಾರೆ. ಅದರಿಂದ ದೊಡ್ಡ ಲಾಸ್ ಆಗುತ್ತದಂತೆ. ಅದನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶ್ರೀ ಮುರುಳಿಯವರೆ ನಮ್ಮ ಕುಟುಂಬವನ್ನು ಕಷ್ಟಕ್ಕೆ ತಳ್ಳಬೇಕು ಎಂಬುದಾಗಿ ಸಂಚು ರೂಪಿಸಿ ಬ್ಯುಸಿನೆಸ್ ಗೆ ಕರೆದೊಯ್ದು ಕಷ್ಟಕ್ಕೆ ತಳ್ಳಿ ನಮ್ಮ ಮನೆ ಮಾರಾಟ ಆಗುವಂತೆ ಮಾಡಿದರು ಎಂಬುದಾಗಿ ಹೇಳಿಕೊಂಡಿದ್ದರು.. ಆ ಬಿಸಿನೆಸ್ ಗೆ ಕೈ ಹಾಕಿದ ಚಿನ್ಹೆಗೌಡರು, ಅದ್ರಿಂದ ಅತಿ ದೊಡ್ಡ ಲಾಸ್ ಮಾಡಿಕೊಳ್ಳುತ್ತಾರಂತೆ.
ಸಾಲ ಹೆಚ್ಚಾದ ಕಾರಣಕ್ಕಾಗಿಯೇ ಮನೆ ಮಾರಾಟ ಮಾಡಲೇಬೇಕಾಗಿರುತ್ತದೆ. ಹಾಗಾಗಿ ಮನೆ ಮಾರಾಟ ಮಾಡುತ್ತಾರೆ. ನಂತರ ಬೇರೆ ಬಾಡಿಗೆ ಮನೆಯಲ್ಲಿ ಇರಬೇಕು ಎಂದು ನಿರ್ಧಾರ ಮಾಡಿದಾಗ, ವಿಜಯ್ ರಾಘವೇಂದ್ರ ಅವರು ಅವರ ಪತ್ನಿ ಜೊತೆ ಬೇರೆ ಮನೆ ಮಾಡುತ್ತಾರೆ..ಅದಕ್ಕೆ ಕಾರಣವೂ ಇದೆ. ಹೌದು, ಇವರ ಈ ನಡೆ ನೋಡಿ ಕೆಲವರು ಅಣ್ಣ ತಮ್ಮ ಸರಿ ಇಲ್ಲ, ಮನೆಯಲ್ಲಿ ಜಗಳ ಮಾಡಿಕೊಂಡು ಬೇರೆ ಬೇರೆ ಮನೆ ಮಾಡಿದ್ದಾರೆ ಎನ್ನುವ ಮಾತುಗಳನ್ನು ಕೂಡ ಕೆಲವರು ಆಡಿದ್ದರು. ಹೌದು ಅದು ಅವರ ತಪ್ಪು ಕಲ್ಪನೆ. ಮನೆ ಮಾರಾಟ ಆದ ಬೆನ್ನಲ್ಲೇ ಎಲ್ಲರೂ ಕೂತುಕೊಂಡು ಮಾತನಾಡುತ್ತಾರಂತೆ. ಒಟ್ಟಿಗೆ ಇರಬೇಕು ಎಂದರೆ ದೊಡ್ಡ ಮನೆಯನ್ನೇ ಬಾಡಿಗೆಗೆ ಪಡೆಯಬೇಕಾಗುತ್ತದೆ. ಹಾಗಾಗಿ ಅದು ಹಣ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ವಿಜಯ ರಾಘವೇಂದ್ರ ಅವರು ತಮ್ಮ ಶ್ರೀ ಮುರಳಿ ಮತ್ತು ಅವರ ತಂದೆ ಚಿನ್ಹೆಗೌಡರನ್ನು ಬೇರೆ ಮನೆಯಲ್ಲಿ ಬಾಡಿಗೆಗೆ ಇರಲು ಹೇಳಿದ್ದು, ಅವರು ಕೂಡ ಇನ್ನೊಂದು ಬಾಡಿಗೆ ಮನೆಯಲ್ಲಿ ಇರಲು ನಿರ್ಧಾರ ಮಾಡಿದರಂತೆ.
ಆಗ ಒಂದು ಕಡೆ ಸಿನಿಮಾ ಇಬ್ಬರದ್ದು ಇಲ್ಲ. ನಂತರ ಸ್ಪಂದನ ಅವರು ಇಂತಹ ಸಂದರ್ಭದಲ್ಲಿ ದೊಡ್ಡ ಸ್ಟ್ರೆಂತ್ ಆಗಿದ್ದರು ಎಂದು ತಿಳಿದುಬಂದಿದೆ. ವಿಜಯ್ ಅವರ ಜೊತೆಗೆ ಆಗ ನಿಲ್ಲುತ್ತಾರೆ. ಅದರ ಬಗ್ಗೆ ವಿಜಯ್ ಅವರೇ ಸಾಕಷ್ಟು ಬಾರಿ ತಮ್ಮ ಮಡದಿ ಬಗ್ಗೆ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ..ಕಷ್ಟದ ದಿನಗಳಲ್ಲಿ, ಹಾಗೂ ತಾವು ಕುಗ್ಗಿ ಹೋದಾಗ ನನ್ನ ಜೊತೆ ನಿಂತಿದ್ದು ಸ್ಪಂದನ ಎಂಬುದಾಗಿ ಹೇಳಿ ಕಣ್ಣೀರು ಹಾಕಿದ್ದಾರೆ. ಅದನ್ನು ನೀವು ಕೂಡ ಗುರುತಿಸಿದ್ದೀರಿ. ಹೌದು ಹೀಗೆ ಬೇರೆ ಬೇರೆ ಮನೆ ಮಾಡಿದಾಗ ಮತ್ತೆ ಸಿನಿಮಾ ಟ್ರ್ಯಾಕ್ ಇಬ್ಬರದ್ದು ಸಹ ಆರಂಭವಾಗಿದೆ..ಒಂದು ಕಡೆ ತಮ್ಮನ ಸಿನಿಮಾ ಉಗ್ರಂ ಮೂಲಕ ಮತ್ತೆ ಹಿಟ್ ಮೇಲೆ ಹಿಟ್ ಸಿನಿಮಾಗಳು ಬರಲು ಪ್ರಾರಂಭ ಆದವು..ವಿಜಯ್ ರಾಘವೇಂದ್ರ ಅವರ ಕೂಡ ಎವರೇಜ್ ನಟ ಆದರೂ ಹಾಕಿರುವ ದುಡ್ಡಿಗೆ ಮೋಸ ಇಲ್ಲ ಎಂಬಂತೆ ನಿರ್ಮಾಪಕರೂ ಇವರನ್ನ ಹಾಕಿಕೊಂಡು ಸಿನಿಮಾ ಮಾಡಲು ಮುಂದೆ ಬಂದರು. ( video credit : vn media )
ಹಾಗೆ ಟಿವಿ ಕಾರ್ಯಕ್ರಮ ಶೋ ಗಳಲ್ಲಿ ಕಾಣಿಸಿಕೊಳ್ಳ ತೊಡಗಿದರು ವಿಜಯ್. ಆಗ ಎಲ್ಲವೂ ಸರಿ ಆಯಿತು ಎನ್ನುವಷ್ಟರಲ್ಲಿ ಅತ್ತ ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪುತ್ತಾರೆ.. ಅದರಿಂದ ನೋವಿಗೆ ಒಳಗಾಗುತ್ತಾರೆ ಇಡೀ ಚಿನ್ನೆಗೌಡರ ಹಾಗೂ ರಾಜ್ಕುಮಾರ್ ಕುಟುಂಬ. ಜೊತೆಗೆ ಇಡೀ ಕರ್ನಾಟಕ ಎಂದು ಹೇಳಬಹುದು. ಹೌದು ಪುನೀತ್ ಅವರ ಫೋಟೋ ಕಂಡ ತಕ್ಷಣ ವಿಜಯ್ ಅವರು ಸಹ ಭಾವುಕರಾಗುತ್ತಿದ್ದರು. ಅದ್ರಿಂದ ಇನ್ನೇನು ಸ್ವಲ್ಪ ಸ್ವಲ್ಪ ಹೊರಗಡೆ ಬರುತ್ತಿದ್ದ ರಾಘವೇಂದ್ರ ಅವರಿಗೆ ಇದೀಗ ಅವರ ಪ್ರೀತಿಯ ಮಡದಿ ಸ್ಪಂದನಾರ ಅಗಲಿಕೆ ಆಯ್ತು. ಇದರಿಂದ ಇನ್ನಷ್ಟು ನೋವು ಅವರಿಗೆ ಹೆಚ್ಚಾಯಿತು ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ, ಮತ್ತು ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಮೆಂಟ್ ಮಾಡಿ ಧನ್ಯವಾದಗಳು..