ಸ್ಪಂದನ ಅವರಿಗೆ ಯಾಕೆ ಮೇಕಪ್ ಮಾಡಲಾಗಿತ್ತು ಗೊತ್ತಾ..? ವಿಜಯ್ ಹೇಳಿದ್ದ ಕೇಳಿ ಕಣ್ಣೀರು ಬರುತ್ತೆ
ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿದ್ದಾರೆ. ಆ ನೋವು ಅವರ ಕುಟುಂಬಕ್ಕೆ ಮಾತ್ರ ಅಲ್ಲದೆ, ಕೆಲವರೂ ಸಹ ಈಗಲೂ ನೋವಿನಲ್ಲಿಯೇ ಇದ್ದಾರೆ. ಹೌದು, ನಾಳೆ ಅವರ ಕುಟುಂಬಸ್ಥರು ಎಲ್ಲರೂ ಸೇರಿ ಸ್ಪಂದನ ಅವರ ಉತ್ತರ ಕ್ರಿಯೆಯನ್ನು ಹಮ್ಮಿಕೊಂಡಿದ್ದಾರೆ. ಹೌದು ಬೆಳಿಗ್ಗೆ ಎಂಟು ಗಂಟೆಗೆ ಶಾಂತಿ ಹೋಮ ಕಾರ್ಯ ನಡೆಯಯಲಿದ್ದು, ಮಧ್ಯಾಹ್ನ 1:00ಗೆ ಭೋಜನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ. ಸ್ಪಂದನ ಅವರ ಪುಣ್ಯತಿಥಿಗೆ ಎಲ್ಲರಿಗೂ ನೋವಿನಲ್ಲೆ ವಿಜಯ್ ರಾಘವೇಂದ್ರ ಕುಟುಂಬ ಆಹ್ವಾನ ನೀಡಿದೆ.
ಸ್ಪಂದನ ಅವರು ಇನ್ನು ನೆನಪು ಮಾತ್ರ.. ಅವರ ನೆನಪಿನಲ್ಲಿ ಎಲ್ಲರೂ ಅವರ ಕುಟುಂಬಸ್ಥರು ಜೀವನ ನಡೆಸಬೇಕಾದಂತಹ ಅನಿವಾರ್ಯತೆ ಬಂದಿದೆ..ದೇವರು ಯಾವಾಗ ಯಾರಿಗೆ ಏನೇನೆಲ್ಲಾ ಮಾಡಿಸುತ್ತಾನೋ ಆ ದೇವರೇ ಬಲ್ಲ. ಹೌದು ಸ್ಪಂದನ ವಿಜಯ್ ರಾಘವೇಂದ್ರ ಅವರು ಅದೆಷ್ಟರ ಮಟ್ಟಿಗೆ ಮುದ್ದು ಮುಖದ ಚೆಲುವೆ ಎಂಬುದಾಗಿ ನಾವು ನಿಮಗೆ ಬಿಡಿಸಿ ಹೇಳಬೇಕಿಲ್ಲ. ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳದಂತಹ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಅವರು ಕಡಿಮೆ ಕಾಣಿಸಿಕೊಳ್ಳುತ್ತಿದ್ದರು. ಹಾಗೇನೇ ದೇವತೆಯಂತೆ ಆಗ ಕಾಣಿಸಿಕೊಳ್ಳುತ್ತಿದ್ದವರು. ಸದಾ ನಗು ಮುಖವನ್ನೆ ಇಟ್ಟುಕೊಂಡು ಇರುತ್ತಿದ್ದರು.. ನೀವು ನೋಡಿರಬಹುದು ಸ್ಪಂದನ ಅವರು ಮೃತಪಟ್ಟು ಎರಡು ದಿನಗಳ ಬಳಿಕ ಅವರ ಮೃತದೇಹ ಬೆಂಗಳೂರಿಗೆ ಬಂದು ತಲುಪಿತ್ತು. ಆಗ ಅವರ ಮುಖ ಹಾಗೆಯೇ ಇತ್ತು.
ಅವರ ಮುಖ ಸ್ವಲ್ಪವೂ ಕಳೆಗುಂದಿರಲಿಲ್ಲ.. ಅವರನ್ನು ಮೇಕಪ್ ಮಾಡಲಾಗಿತ್ತು. ಸ್ಪಂದನ ಅವರ ಮೃತದೇಹಕ್ಕೆ ಮೇಕಪ್ ಮಾಡುವಾಗ ಇಡೀ ರಾಘವೇಂದ್ರ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದರಂತೆ..ಹಾಗೆ ಹೆಂಡತಿಗೆ ಮೇಕಪ್ ಮಾಡುವ ವಿಚಾರವನ್ನು ವಿಜಯ್ ರಾಘವೇಂದ್ರರೆ ಅವರ ಮನೆ ಕುಟುಂಬಸ್ಥರ ಬಳಿ ಪ್ರಸ್ತಾಪ ಮಾಡಿದರಂತೆ. ನನ್ನ ಹೆಂಡತಿ ಮೊದಲಿನಿಂದಲೂ ನಗುಮುಖದಿಂದಲೇ ಸದಾ ಇರುತ್ತಿದ್ದಳು. ಆಕೆಯನ್ನು ಈ ಜಗತ್ತು ಹಾಗೆಯೇ ನೋಡಬೇಕು, ಹಾಗಾಗಿ ಮೇಕಪ್ ಮಾಡಿ ಅಂತಿಮ ದರ್ಶನಕ್ಕೆ ಇರಿಸೋಣ ಎಂದು ಹೇಳಿದರಂತೆ. ಅದರಂತೆ ಮೇಕಪ್ ಮಾಡಲಾಗಿದ್ದು ಸ್ಪಂದನರವರು ಸಾವನ್ನಪ್ಪಿಲ್ಲ ಜಸ್ಟ್ ಮಲಗಿದ್ದಾರೆ ಎಂಬಂತೆಯೇ ಆಗ ಕಾಣಿಸಿದರು.
ಜಗತ್ತಿಗೆ ತಮ್ಮ ಹೆಂಡತಿಯನ್ನು ಸೌಂದರ್ಯವತಿಯಂತೆ ಕಾಣಿಸಬೇಕು ಎಂಬುದು ವಿಜಯ್ ಅವರದ್ದೆ ನಿರ್ಧಾರ ಆಗಿತ್ತಂತೆ. ಹಾಗಾಗಿ ಅಂತಹ ನಿರ್ಧಾರ ಕೈಗೊಂಡಿದ್ದರು ಎಂದು ಈ ವಿಡಿಯೋ ಮೂಲಕ ತಿಳಿದು ಬಂದಿದೆ.. ಅಸಲಿಗೆ ಸ್ಪಂದನ ಅವರಿಗೆ ಯಾಕೆ ಅಷ್ಟು ಮೇಕಪ್ ಮಾಡಲಾಗಿತ್ತು ಎಂಬುದಾಗಿ ನೀವು ಕೂಡ ಇನ್ನಷ್ಟು ಮಾಹಿತಿ ತಿಳಿದುಕೊಳ್ಳುವ ತವಕದಲ್ಲಿದ್ದರೆ ಇಲ್ಲಿರುವ ಲೇಖನದಲ್ಲಿಯ ಕೊನೆಯ ವಿಡಿಯೋ ನೋಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಜೊತೆಗೆ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳಿ, ಧನ್ಯವಾದಗಳು... ( video credit : kannada thare tv)