‘ಕರ್ಣ’ ಧಾರಾವಾಹಿಗೆ ಯಾರು ಆಗ್ತಾರೆ ಹೀರೋಯಿನ್? ಇವರೇ ನೋಡಿ

ನಿಮಗೆಲ್ಲ ಗೊತ್ತಿರುವ ಹಾಗೆ ಕಿರಣ್ ರಾಜ್ ಹೊಸ ಧಾರಾವಾಹಿ ಕರ್ಣ ದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ . ಅದರ ಪ್ರೊಮೊ ಸಹ ಬಿಡುಗಡೆ ಆಗಿದೆ . ಇನ್ನೇನು ಶೀಘ್ರದಲ್ಲಿ ಧಾರಾವಾಹಿ ಸುರು ಆಗಲಿದೆ . ಆದರೆ ಅದಕ್ಕೆ ಇನ್ನಿ ಹೀರೊಯಿನ್ ಸೆಲೆಕ್ಟ್ ಆಗಿಲ್ಲ
ಕರ್ಣ’ ಧಾರಾವಾಹಿಯ ಮೊದಲ ಪ್ರೋಮೋದಲ್ಲಿ ಕರ್ಣ ಮತ್ತು ಮನೆಯವರನ್ನ ಮಾತ್ರ ಪರಿಚಯ ಮಾಡಲಾಗಿದೆ. ಹಾಗೇ, ಕರ್ಣನ ವೃತ್ತಿಯೇನು ಅನ್ನೋದೂ ಜಗಜ್ಜಾಹೀರಾಗಿದೆ. 'ಕರ್ಣ' ಸೀರಿಯಲ್‌ನಲ್ಲಿ ಗೈನಕಾಲಜಿಸ್ಟ್ ಆಗಿ ನಟ ಕಿರಣ್ ರಾಜ್ ನಟಿಸಲಿದ್ದಾರೆ. ಕರ್ಣನ ಫ್ಯಾಮಿಲಿಯಲ್ಲಿ ಹಿರಿಯ ನಟಿ ಆಶಾ ರಾಣಿ, ನಟ - ನಿರ್ದೇಶಕ ನಾಗಾಭರಣ, 'ಒಲವಿನ ನಿಲ್ದಾಣ' ಸೀರಿಯಲ್ ಖ್ಯಾತಿಯ ವರಲಕ್ಷ್ಮೀ ಶ್ರೀನಿವಾಸ್ ಮತ್ತು 'ಒಲವಿನ ನಿಲ್ದಾಣ' ನಟಿ ಶ್ಯಾಮ್ ಸಿಮ್ರನ್ ಇರೋದನ್ನ ಪ್ರೋಮೋದಲ್ಲಿ ತೋರಿಸಲಾಗಿದೆ. ಆದರೆ, ಕರ್ಣನಿಗೆ ಜೋಡಿಯಾಗಿರೋದ್ಯಾರು ಎಂಬುದನ್ನ ಮಾತ್ರ ರಿವೀಲ್ ಮಾಡಿಲ್ಲ.
‘ಕರ್ಣ’ ಸೀರಿಯಲ್‌ನಲ್ಲಿ ನಟ ಕಿರಣ್ ರಾಜ್‌ಗೆ ಹೀರೋಯಿನ್ ಯಾರು ಎಂಬ ಪ್ರಶ್ನೆ ಕನ್ನಡ ಕಿರುತೆರೆ ಪ್ರಿಯರಿಗೆ ಕಾಡುತ್ತಿದೆ. ‘ಕನ್ನಡತಿ’ ಜೋಡಿ ಇಲ್ಲೂ ಮುಂದುವರೆಯಬೇಕು.. ಕಿರಣ್ ರಾಜ್‌ಗೆ ಮತ್ತೆ ರಂಜನಿ ರಾಘವನ್ ಹೀರೋಯಿನ್ ಆಗಬೇಕು ಅಂತ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ಇನ್ನೂ ಕೆಲವರು ಕಿರಣ್ ರಾಜ್‌ಗೆ ನಾಯಕಿಯಾಗಿ 'ಗೀತಾ' ಸೀರಿಯಲ್ ಖ್ಯಾತಿಯ ಭವ್ಯಾ ಗೌಡ ಬರಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಹಲವರು ‘ಪಾರು’ ಬಳಿಕ ಮೋಕ್ಷಿತಾ ಪೈ ಮತ್ತೆ ಸೀರಿಯಲ್ ಮಾಡಬೇಕು, ‘ಕರ್ಣ’ ಸೀರಿಯಲ್‌ಗೆ ಮೋಕ್ಷಿತಾ ಪೈ ಅವರೇ ಕಿರಣ್ ರಾಜ್‌ಗೆ ಜೋಡಿ ಆಗಬೇಕು ಅಂತ ಆಸೆ ಪಡುತ್ತಿದ್ದಾರೆ. ಹಾಗಾದ್ರೆ, ವೀಕ್ಷಕರು ಹಾಗೂ ಅಭಿಮಾನಿಗಳ ಆಸೆಯಂತೆ ಕಿರಣ್ ರಾಜ್‌ಗೆ ರಂಜನಿ ರಾಘವನ್, ಮೋಕ್ಷಿತಾ ಪೈ ಮತ್ತು ಭವ್ಯಾ ಗೌಡ ಪೈಕಿ ಯಾರಾದರೂ ಒಬ್ಬರು ಹೀರೋಯಿನ್ ಆಗ್ತಾರಾ?
ಕರ್ಣ’ ಧಾರಾವಾಹಿಯನ್ನ ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ‘ಕರ್ಣ’ ಸೀರಿಯಲ್‌ನ ನಾಯಕಿ ಪಾತ್ರಕ್ಕೆ ನಿರ್ಮಾಪಕಿ ಶ್ರುತಿ ನಾಯ್ಡು ಫ್ರೆಶ್ ಫೇಸ್ ಹುಡುಕುತ್ತಿದ್ದಾರೆ. ನಾಯಕಿಯ ಹುಡುಕಾಟದಲ್ಲಿ ಬಿಜಿ ಆಗಿದ್ದಾರೆ ಶ್ರುತಿ ನಾಯ್ಡು. ಹೀರೋಯಿನ್ ಇನ್ನೂ ಫೈನಲಿಸ್ ಆಗಿಲ್ಲ. ಎಲ್ಲವೂ ಪ್ರಕಾರ ನಡೆದರೆ ‘ಕರ್ಣ’ನಿಗೆ ಜೋಡಿಯಾಗಿ ಹೊಸ ಹೀರೋಯಿನ್ ಎಂಟ್ರಿಕೊಡಲಿದ್ದಾರೆ.
ನಿಮ್ಮ ಪ್ರಕಾರ ಕಿರಣ್ ರಾಜ್ ಗೆ ಯಾರು ಜೋಡಿ ಆಗ ಬೇಕು ಅಂತ ಕಾಮೆಂಟ್ ಮೂಲಕ ತಿಳಿಸಿ