ರಜನಿಕಾಂತ್ ಅವರ ಅಷ್ಟು ಆಸ್ತಿ ನಂತರದಲ್ಲಿ ಯಾರಿಗೆ ಸೇರುತ್ತೆ ಗೊತ್ತಾ..? ತಲೈವಾ ನಿರ್ಧಾರಕ್ಕೆ ಎಲ್ರೂ ಶಾಕ್

ರಜನಿಕಾಂತ್ ಅವರ ಅಷ್ಟು ಆಸ್ತಿ ನಂತರದಲ್ಲಿ ಯಾರಿಗೆ ಸೇರುತ್ತೆ ಗೊತ್ತಾ..? ತಲೈವಾ ನಿರ್ಧಾರಕ್ಕೆ ಎಲ್ರೂ ಶಾಕ್

ಶಿವಾಜಿ ರಾವ್ ಗಾಯಕ್‌ವಾಡ್ ಎಂಬ ಮೂಲ ಹೆಸರಿನ ನಟ ರಜನಿಕಾಂತ್ ಅವರು 12 ಡಿಸೆಂಬರ್ 1950 ರಲ್ಲಿ ಜನಿಸಿದ್ದಾರೆ. ವೃತ್ತಿಪರವಾಗಿ ರಜನೀಕಾಂತ್ ಎಂದು ಕರೆಯಲ್ಪಡುವ ಭಾರತೀಯ ನಟ, ಇವರು ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಕನ್ನಡ ತಮಿಳು, ಹಿಂದಿ, ತೆಲುಗು, ಬೆಂಗಾಲಿ ಹಾಗೆ ಕೇರಳದ ಮಲಯಾಳಂ ಚಲನಚಿತ್ರಗಳನ್ನು ಒಳಗೊಂಡಂತೆ 160 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ.

ಮೊನ್ನೆ ನಟ ರಜನಿಕಾಂತ್ ಅವರ ಜೈಲರ್ ಸಿನಿಮಾ ಇಡೀ ಭಾರತದಾದ್ಯಂತ ಬಿಡುಗಡೆ ಆಗಿದೆ. 2023 ರ ಭಾರತೀಯ ತಮಿಳು-ಭಾಷೆಯ ಆಕ್ಷನ್ ಥ್ರಿಲ್ಲರ್ ಈ ಚಲನಚಿತ್ರವಾಗಿದೆ. ರಜನಿಕಾಂತ್ ನಟ ಅವರು ನಟನೆ ಮಾಡಿದ್ದು ಇದನ್ನು ನೆಲ್ಸನ್ ಬರೆದು ನಿರ್ದೇಶಿಸಿದ್ದಾರೆ. ಸನ್ ಪಿಕ್ಚರ್ಸ್ ನ ಕಲಾನಿತಿ ಮಾರನ್ ನಿರ್ಮಿಸಿದ್ದಾರೆ. ಪೋಷಕ ಪಾತ್ರವರ್ಗದಲ್ಲಿ ವಿನಾಯಕನ್, ರಮ್ಯಾ ಕೃಷ್ಣನ್, ವಸಂತ್ ರವಿ, ಸುನೀಲ್, ಮಿರ್ನಾ ಮೆನನ್ ಇತರರು ಇದ್ದಾರೆ, ಮೋಹನ್‌ಲಾಲ್, ಜಾಕಿ ಶ್ರಾಫ್, ಶಿವ ರಾಜ್‌ ಕುಮಾರ್ ಮತ್ತು ತಮನ್ನಾ ಭಾಟಿಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥಾವಸ್ತುವು ನಿವೃತ್ತ ಪೋಲೀಸ್‌ನ ಸುತ್ತ ಸುತ್ತುತ್ತದೆ, ಅವನು ತನ್ನ ಮಗನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ.

ಹೌದು ಮೊನ್ನೆ ರಜನಿಕಾಂತ್ ಅವರು ಅವರ ಜೀವನದ ಒಂದು ಮಹತ್ತರ ನಿರ್ಧಾರ ಬಿಚ್ಚಿಟ್ಟಿದ್ದಾರೆ. ಇದು ಒಂದು ಮಹತ್ತರ ನಿರ್ಣಯ ಆಗಿದ್ದು ಎಂದು ಕೆಲವರು ನಟ ರಜನಿಕಾಂತ್ ಅವರ ಮಾತಿಗೆ ಸೈ ಎಂದರೆ, ಹಲವರು  ಇವರ ಆ ಮಾತಿಗೆ ಒಳ್ಳೆ ಮೆಚ್ಚುಗೆ ವ್ಯಕ್ತಡಿಸುತ್ತಿದ್ದಾರೆ. ರಜನಿಕಾಂತ್ ಅವರು ಹೇಳಿರುವ ಹಾಗೆ, ''ನಾನು ಸಾವನ್ನಪ್ಪಿದ ಬಳಿಕ, ನನ್ನ ಇಡೀ ಪ್ರಾಪರ್ಟಿ, ನನ್ನ ಆಸ್ತಿ ಎಲ್ಲವೂ ಟ್ರಸ್ಟಿಗೆ ಸೇರಲಿದೆ. ತಮಿಳು ಜನಕ್ಕೆ ಸೇರಲಿದೆ, ಇದರಲ್ಲಿ ಒಂದು ರೂಪಾಯಿಯೂ ಕೂಡ ನನ್ನ ಕುಟುಂಬಕ್ಕೆ ಹೋಗುವುದಿಲ್ಲ, ನನ್ನ ಜೀವನದಲ್ಲಿ ನನ್ನ ಸಿನಿಮಾಗಾಗಿ ಅವರು ದುಡ್ಡು ಖರ್ಚು ಮಾಡಿ ಟಿಕೆಟ್ ಖರಿದಿಸಿ ಸಿನಿಮಾ ನೋಡಿ ನನ್ನನ್ನು ಬೆಳೆಸಿದ್ದಾರೆ.  ಹಾಗಾಗಿ ನಾನು ಸಾವನ್ನಪ್ಪಿದ ಮೇಲೆ ನನ್ನ ಎಲ್ಲಾ ಪ್ರಾಪರ್ಟಿ ಹಣ, ಆಸ್ತಿ ಟ್ರಸ್ಟಿಗೆ ಸೇರುತ್ತದೆ" ಎಂದು ತಲೈವಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಾತಿಗೆ ತಲೈವಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಇನ್ನೂ ಕೆಲವರು ರಜನಿಕಾಂತ್ ಅವರ ಕುಟುಂಬ ಇದಕ್ಕೆ ಒಪ್ಪಿಕೊಳ್ಳುತ್ತಾ.? ತಲೈವಾ ಅವರು ಮಾಡಿರುವ ಈ ನಿರ್ಧಾರಕ್ಕೆ ಅವರು ಒಪ್ಪಿಗೆ ಸೂಚಿಸುತ್ತಾರ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ...ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. ಹೌದು ನಟ ರಜನಿಕಾಂತ್ ಅವರು ತೆಗೆದುಕೊಂಡಿರುವ ಈ ಮಹತ್ತರ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದಾಗಿ ಕಮೆಂಟ್ ಮಾಡಿ ಧನ್ಯವಾದಗಳು...