ನಿನ್ನೆ ಅತ್ತಿಗೆ ಪುಣ್ಯತಿಥಿಗೆ ಶ್ರೀಮುರಳಿ ಕುಂಟುತ್ತಾ ಬಂದಿದ್ದು ಯಾಕೆ..? ಈಗ ಬಯಲು
ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯ ವ್ಯಕ್ತಿಗಳು ಸಣ್ಣ ಸಣ್ಣ ವಯಸ್ಸಿಗೆ ಕರೋನ ಬಂದ ಮೇಲೆ ಕರೋನ ಮುಂಚೆ ಹಾಗೆ ಈಗಲೂ ಕೂಡ ಒಬ್ಬರಮೇಲೊಬ್ಬರು ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ, ಹಾಗೆ ಸಂಚಾರಿ ವಿಜಯ್ ಅವರ ಅಗಲಿಕೆ ನಿಜಕ್ಕೂ ಎಲ್ಲರಿಗೂ ನೋವು ತಂದಿತ್ತು. ಈಗಲೂ ಕೂಡ ಇವರೆಲ್ಲರೂ ಸದಾ ನೆನಪಿಗೆ ಬಂದೆ ಬರುತ್ತಾರೆ. ಈ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅತಿ ಸಣ್ಣ ವಯಸ್ಸಿಗೆ ನಾವು ಎಲ್ಲಿ ನೋಡಿದರೂ ಅಲ್ಲಿ ಹೃದಯಘಾತದಿಂದ ಸಣ್ಣ ಸಣ್ಣ ಮಕ್ಕಳು ಕೂಡ ಸಾವನ್ನಪ್ಪುತ್ತಿದ್ದಾರೆ. ಅಸಲಿಗೆ ಈ ಜೀವನದಲ್ಲಿ ಯಾವುದರ ಮೇಲೆಯೂ ನಂಬಿಕೆ ಇಡದ ಪ್ರಸ್ಥಿತಿ ಬಂದೋದಗಿದೆ ಎಂದು ಹೇಳಬಹುದು.
ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಕೂಡ ಮೊನ್ನೆ ಹೃದಯಾಘಾತಕ್ಕೆ ಒಳಗಾಗಿ ಸಾವನಪ್ಪಿದ್ದರು. ಅದು ಎಲ್ಲರಿಗೂ ಕೂಡ ಗೊತ್ತಿದೆ. ಹೌದು ವಿಧಿ ಅವರ ಬದುಕಿನಲ್ಲಿ ತುಂಬಾ ಕೆಟ್ಟದಾದ ರೀತಿ ಆಟ ಆಡಿಬಿಟ್ಟಿತು. ಇದೀಗ ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿಯನ್ನು ಕಳೆದುಕೊಂಡು ಅವರ ನೆನಪಿನಲ್ಲಿಯೇ ಮಗನ ಮುಖ ನೋಡಿಕೊಂಡು ಈ ಜೀವನವ ಸಾಗಿಸುವಂಥಾಗಿದೆ. ನಿನ್ನೆ ಕುಟುಂಬಸ್ಥರು ನೋವಿನಲ್ಲೇ ವಿಜಯ್ ಅವರ ಪತ್ನಿ ಸ್ಪಂದನ ವಿಜಯ ರಾಘವೇಂದ್ರ ಅವರ ಪುಣ್ಯತಿಥಿ ಕಾರ್ಯವನ್ನ ಹಮ್ಮಿಕೊಂಡಿದ್ದರು. ಎಲ್ಲರಿಗೂ ಕೂಡ ಆಹ್ವಾನ ನೀಡಿ ನೋವಿನಲ್ಲಿ ಕಾರ್ಯವನ್ನು ಮುಗಿಸಿದ್ದಾರೆ.
ಇದರ ಜೊತೆ ಸ್ಪಂದನ ಅವರು ಅಗಲಿದ ವೇಳೆ ಅಣ್ಣನ ಜೊತೆ ಒಟ್ಟಿಗೆ ನಿಂತು ಎಲ್ಲಾ ಕಾರ್ಯಗಳನ್ನು ಓಡಾಡಿ ಮಾಡಿದ್ದ ಶ್ರೀಮುರಳಿ ಅವರು ನಿನ್ನೆ ಕುಂಟುತ್ತ ಬಂದಂತೆ ಕಾಣಿಸಿದರು. ಹೌದು ಸ್ಟ್ಯಾಂಡ್ ಹಿಡಿದು ಕೈಯಲ್ಲಿ ಅತ್ತ ಪ್ರೀತಿಯ ಅತ್ತಿಗೆಯ ಪುಣ್ಯ ತಿಥಿ ಕಾರ್ಯಕ್ಕೆ ಕುಂಟುತ್ತಾ ಬಂದಿದ್ದಾರೆ ಶ್ರೀಮುರಳಿ. ಅದಕ್ಕೆ ಕಾರಣ ಇದೀಗ ತಿಳಿದು ಬಂದಿದೆ. ಹೌದು ನಟ ಶ್ರೀಮುರುಳಿಯವರಿಗೆ ಕೆಲವು ದಿನಗಳಿಂದ ಬೆನ್ನು ನೋವು ಮತ್ತು ಕಾಲ ನೋವು ಆಗುತ್ತಿದೆಯಂತೆ, ಹಾಗಾಗಿ ನಿನ್ನೆ ಸ್ಟ್ಯಾಂಡ್ ಹಿಡಿದು ಬಂದಿದ್ದರು ಎನ್ನಲಾಗಿದೆ. ಹೌದು ಶ್ರೀಮುರುಳಿ ಪತ್ನಿ ವಿದ್ಯಾ ಅವರಿಗೂ ಕೂಡ ಬಹು ದಿನಗಳಿಂದ ಗಂಭೀರ ಸಮಸ್ಯೆ ಇದೆ, ಆ ದೇವರು ಒಂದರ ಮೇಲೆ ಒಂದರಂತೆ ಇವರ ಕುಟುಂಬಕ್ಕೆ ಕಷ್ಟವನ್ನು ನೀಡುತ್ತಿದ್ದಾನೆ. ಇವರ ಎಲ್ಲಾ ಕಷ್ಟವನ್ನು ಇನ್ನು ಮೇಲಾದರೂ ಪರಿಹರಿಸಲಿ, ಇವರು ಇನ್ನು ಮುಂದೆ ಖುಷಿಯಾಗಿ ಇರಲಿ ಇವರ ಕುಟುಂಬ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ. ಇನ್ನೊಮ್ಮೆ ಖಚಿತ ಪಡಿಸಿಕೊಳ್ಳಲು ಈ ವಿಡಿಯೋ ನೋಡಿ ಈ ವಿಡಿಯೋದಲ್ಲಿ ಇರುವುದನ್ನು ನಾವು ಲೇಖನದ ಮೂಲಕ ಬರೆದಿದ್ದೇವೆ. ಧನ್ಯವಾದಗಳು..