ಸ್ಪಂದನ ಬಗ್ಗೆ ವಿಜಯ್ ವೇದಿಕೆ ಮೇಲೆ ಎರಡು ತಿಂಗಳ ಹಿಂದೆ ಹೇಳಿದ್ದೇನು..? ವಿಡಿಯೋ ನೋಡಿದ್ರೆ ಹೆಚ್ಚು ನೋವಾಗುತ್ತೆ
ಕನ್ನಡದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಕೆಲ ದಿನಗಳ ಹಿಂದೆ ವಿದೇಶಕ್ಕೆ ಅವರ ಕಸಿನ್ಸ್ ಜೊತೆ ಪ್ರವಾಸಕ್ಕೆ ತೆರಳಿದ್ದರು. ಹೌದು ಪ್ರವಾಸಕ್ಕೆ ತೆರಳಿದ್ದ ವೇಳೆಯೆ ಅವರಿಗೆ ಹೃದಯಘಾತ ಆಗಿದ್ದು ಮಲಗಿದ್ದ ಸ್ಪಂದನಾ ಅವರು ಮೇಲೆ ಮತ್ತೆ ಏಳಲೇ ಇಲ್ಲ. ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮೊನ್ನೆಯೇ ಈ ವಿಷಯ ಹೊರ ಬಿದ್ದಿದ್ದು ಸ್ಪಂದನ ಅವರ ಮರಣೋತ್ತರ ಪರೀಕ್ಷೆ ಮತ್ತು ಅಲ್ಲಿಯ ವಿಧಿ ವಿಧಾನ ಎಲ್ಲವನ್ನು ಮುಗಿಸಿ ಬೆಂಗಳೂರಿಗೆ ಅವರ ಮೃತ ದೇಹವನ್ನು ತರಲು ಎರಡು ದಿನ ಬೇಕಾಯಿತು. ನೆನ್ನೆ ರಾತ್ರಿ ಎರಡು ಗಂಟೆ ಸುಮಾರಿಗೆ ಸ್ಪಂದನ ಅವರ ಮೃತ ದೇಹವನ್ನು ಮಲ್ಲೇಶ್ವರಂ ಅವರ ತಂದೆ ನಿವಾಸಕ್ಕೆ ತರಲಾಗಿದೆ.
ಅವರ ಮೃತ ದೇಹದ ಜೊತೆ ವಿಜಯ್ ರಾಘವೇಂದ್ರ ಅವರು ಕೂಡ ಏರ್ಪೋರ್ಟ್ ನಿಂದ ಹೊರ ಬರುತ್ತಿರುವ ವಿಡಿಯೋ ಮನಸಿಗೆ ನೋವಾಗುವಂತಿತ್ತು. ಅವರ ಆ ನಡೆ ನಿಜಕ್ಕೂ ತುಂಬಾ ಭಾರವಾದ ನಡೆಯೆ ಆಗಿತ್ತು. ಅವರ ಮುಖದಲ್ಲಿ ಅತ್ತು ಅತ್ತು ಕಣ್ಣೀರೇ ಇಲ್ಲದಂತೆ ಭಾಸವಾಗಿತ್ತು. ಅಷ್ಟರಮಟ್ಟಿಗೆ ವಿಜಯ ರಾಘವೇಂದ್ರ ಅವರ ಪ್ರೀತಿಯ ಹೆಂಡತಿಯ ಹಚ್ಚಿಕೊಂಡಿದ್ದರು. ಆದರೆ ಇದೀಗ ಅವರಿಲ್ಲದೆ ವಿಜಯ ರಾಘವೇಂದ್ರ ಅವರು ಆ ನೋವನ್ನು ಹೇಗೆ ಬರಿಸುತ್ತಾರೋ ಆ ದೇವರೇ ಬಲ್ಲ. ಇಂದು ಬೆಳಗ್ಗೆ ಕುಟುಂಬದವರೆಲ್ಲರೂ ಸ್ಪಂದನ ಅವರ ದರ್ಶನವನ್ನು ಪಡೆದಿದ್ದಾರೆ..ಇದರ ಜೊತೆ ಇದೀಗ ಸಾರ್ವಜನಿಕರಿಗೂ ಕೂಡ ಸ್ಪಂದನ ಅವರ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.
ಪೊಲೀಸರು ಬ್ಯಾರೆಕೇಡ್ ಅಳವಡಿಸಿದ್ದು ಮಲ್ಲೇಶ್ವರಂನ ಕೆಲ ರಸ್ತೆಗಳನ್ನು ಬಂದ್ ಮಾಡಲಾಗಿದೆ..ಹೌದು ಇಂದು ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಸ್ಪಂದನ ಅವರ ಅಂತಿಮ ಕಾರ್ಯ ಶ್ರೀರಾಮ್ಪುರದ ಹರಿಚ್ಚಂದ್ರ ಗಾಟ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.. ಇದೀಗ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಎಂದು ಹೇಳಬಹುದು. ಎರಡು ತಿಂಗಳ ಹಿಂದೆ ವಿಜಯ ರಾಘವೇಂದ್ರ ಅವರು ಅವರ ಹೆಂಡತಿ ಬಗ್ಗೆ ತುಂಬಾ ನೋವಿನಲ್ಲಿ, ಅವರು ನಡೆದಂತಹ ಕಷ್ಟದ ಈ ಜೀವನ ಎಂಬ ಹಾದಿಯಲ್ಲಿ, ಅದ್ರಿಂದ ಹೇಗೆ ಹೊರಬಂದರು ಎಂಬುದಾಗಿ ವೇದಿಕೆ ಮೇಲೆ ಕಣ್ಣೀರು ಹಾಕುತ್ತಾ ಹೇಳಿಕೊಂಡಿದ್ದರು. ನಾನು ಸುಸ್ತಾದಾಗ ನನ್ನ ಸ್ನೇಹಿತರು ನನ್ನ ಜೊತೆಗಿದ್ದವರು ನನಗೆ ಬೆನ್ನು ತಟ್ಟಿ ದೈರ್ಯ ತುಂಬುತ್ತಿದ್ದರು. ನಂತರ ಬಂದವರು ಇವರು ಎಂದು ತಮ್ಮ ಹೆಂಡತಿ ಸ್ಪಂದನವರ ಬಗ್ಗೆ ಕಣ್ಣೀರು ಹಾಕುತ್ತಾ ಮಾತನಾಡಿದ್ದರು ವಿಜಯ್.
This was just 2 months back!????
— Ullas (@Ullasshetty48) August 7, 2023
ಯಾಕ್ ದೇವ್ರು ಒಳ್ಳೆಯವ್ರಿಗೆ ನೋವು ಕೊಡ್ತಾನೆ? ರಾಘು ಸರ್ ಆ ದೇವ್ರು ನಿಮಗೆ ಈ ನೋವು ಭರಿಸೋ ಶಕ್ತಿ ಕೊಡ್ಲಿ????????#Spandana #VijayRaghavendra pic.twitter.com/AWzHQrnyBj