ಸ್ಪಂದನ ಅವರದ್ದು ಅಪ್ಪಟ ಪೋಲಿಸ್ ಮತ್ತು ಕಾಂಗ್ರೆಸ್ ಕುಟುಂಬ..! ಅಂದು ವಿಜಯ್ ಲವ್ ಗೆ ಹೆದರಿದ್ಯಾಕೆ

ಸ್ಪಂದನ ಅವರದ್ದು ಅಪ್ಪಟ ಪೋಲಿಸ್ ಮತ್ತು ಕಾಂಗ್ರೆಸ್ ಕುಟುಂಬ..! ಅಂದು ವಿಜಯ್ ಲವ್ ಗೆ ಹೆದರಿದ್ಯಾಕೆ

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಹೌದು ಇತ್ತೀಚಿಗಷ್ಟೇ ಅವರು ಅವರ ಸ್ನೇಹಿತರೊಟ್ಟಿಗೆ ಕಸಿನ್ಸ್ ಜೊತೆ ಪ್ರವಾಸ ಕೈಗೊಂಡಿದ್ದು ಬ್ಯಾಂಕಾಕ್ಗೆ ತೆರಳಿದ್ದರು.  ಆಗ ಅವರಿಗೆ ಹೃದಯಘಾತ ಸಂಭವಿಸಿದ್ದು ಸ್ಪಂದನಾ ಅವರು ಮಲಗಿದವರು ಮತ್ತೆ ಮೇಲೆ ಏಳಲೇ ಇಲ್ಲ. ಮೊನ್ನೆಯಷ್ಟೇ ಅವರ ಅಂತಿಮ ಕ್ರಿಯೆ ಬೆಂಗಳೂರಿನ ಮಲ್ಲೇಶ್ವರಂ ಬಳಿ ಶ್ರೀರಾಮಪುರದ ಹರಿಚ್ಚಂದ್ರ ಘಾಟ್ ನಲ್ಲಿ ಜರುಗಿದೆ. ಹೌದು ಇಂದು ಅವರ ಕುಟುಂಬದವರು ಹಾಲುತುಪ್ಪ ಬಿಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಸ್ಪಂದನ ಅವರಿಗೆ ಇಷ್ಟವಾದ ಸಿಹಿ ತಿಂಡಿಗಳನ್ನು ಮಾಡಿ ಅವರ ಸಮಾಧಿ ಮೇಲೆ ಇಟ್ಟು ಪೂಜೆ ಸಲ್ಲಿಸಿದ್ದಾರೆ..

ಸ್ಪಂದನ ಅವರದ್ದು ಅಪ್ಪಟ ಪೊಲೀಸ್ ಮತ್ತು ಕಾಂಗ್ರೆಸ್ ಕುಟುಂಬ. ಅವರ ತಂದೆ ದಕ್ಷ ಎಸ್ ಐ ಹಾಗೂ ಎಸಿಪಿ ಪೊಲೀಸ್ ಅಧಿಕಾರಿ ಆಗಿ ಸೇವಿ ಸಲ್ಲಿಸಿದವರು. ಹಾಗೇ ಒಂದಾನೊಂದು ಕಾಲದಲ್ಲಿ ಈ ಶಿವರಾಂ ಅವರನ್ನು ಕಂಡರೆ ಇಡೀ ಭೂಗತಲೋಕವೆ ಅಂಜಿ ಅಳುಕುತ್ತಿತ್ತು ಎನ್ನಲಾಗಿದೆ. ಅಷ್ಟರಮಟ್ಟಿಗೆ ಡಿಕೆ ಶಿವರಾಮ್ ಅವರು ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಿದವರು.. ಹಾಗೆ ಇವರ ತಮ್ಮ ಬಿ ಕೆ ಹರಿಪ್ರಸಾದ್ ಅವರು ಕೂಡ ಕಾಂಗ್ರೆಸ್ ಹಿರಿಯ ನಾಯಕರಾಗಿ ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.. ಶಿವರಾಮ್ ಅವರು ಸಹ ನಂತರದ ದಿನದಲ್ಲಿ ಮಲ್ಲೇಶ್ವರಂ ನಿಂದ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಯಾಗಿ ಕೂಡ ನಿಂತು ಸೋಲ ಅನುಭವಿಸುತ್ತಾರೆ.   

ಇವರ ಮಗ ರಕ್ಷಿತ್ ಅವ್ರು ಕೂಡ ಮೊನ್ನೆ ಮೊನ್ನೆಯಷ್ಟೇ ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಪರ ಸ್ಪರ್ಧಿಸಿ ನಿಂತು ಸೋಲನ್ನು ಅನುಭವಿಸಿದ್ದಾರೆ. ಇದೀಗ ಸ್ಪಂದನ ಮತ್ತು ವಿಜಯ್ ರಾಘವೇಂದ್ರ ಅವರ ಲವ್ ಸ್ಟೋರಿ ವಿಚಾರ ತಿಳಿದುಕೊಳ್ಳೋಣ... ವಿಜಯ್ ಅವರು 2004ರಲ್ಲಿ ಸ್ಪಂದನವರನ್ನು ಮಲ್ಲೇಶ್ವರಂನ ಕೆಫೆ ಕಾಫಿ ಡೇ ಯಲ್ಲಿ ಮೊದಲ ಬಾರಿ ನೋಡುತ್ತಾರೆ...ಆಗ ಅವರು ಅವ್ರನ್ನ ಮಾತನಾಡಿಸುವುದಿಲ್ಲ. ಮತ್ತೆ ಮೂರು ವರ್ಷ ಗ್ಯಾಪ್ ಆದ ನಂತರ ಇನ್ನೊಂದು ಕೆಫೆ ಕಾಫಿಡೆ ನಲ್ಲಿ ಕಾಣಿಸಿದ್ದ ಸ್ಪಂದನ ಅವರನ್ನು ವಿಜಯ್ ಮಾತನಾಡಿಸುತ್ತಾರೆ.

ಇವರಿಬ್ಬರ ಲವ್ ವಿಚಾರವನ್ನು ಮನೆಯಲ್ಲಿ ಹೇಳಬೇಕು ಎಂದಾಗ ವಿಜಯ್ ಮೊದಲಿಗೆ ಸ್ಪಂದನ ಅವರ ತಂದೆ ಪೊಲೀಸ್ ಅಧಿಕಾರಿ ಎಂದು ತಿಳಿದಾಗ ಈ ಲವ್ವೆ ಬೇಡ ಗುರು ಅನ್ನುವಂತೆ ಹೆದರಿದ್ದರಂತೆ...ನಂತರ ಎರಡು ಮನೆಯ ಕಡೆಯವರು ಮಾತನಾಡಿ ಸ್ಪಂದನ ವಿಜಯ ಲವ್ ವಿಚಾರ ತಿಳಿದು ಮದುವೆ ಮಾಡಿಸುತ್ತಾರೆ. ಆದರೆ ವಿಧಿ ಅವರ ಬಾಳಲ್ಲಿ ಈಗ ದೊಡ್ಡದಾದ ನೋವನ್ನೇ ಕೊಟ್ಟುಬಿಟ್ಟಿತು. ಹೌದು, ಸಣ್ಣವಯಸ್ಸಿನಲ್ಲಿಯೇ ಅತ್ತ ಸ್ಪಂದನ ಅವರನ್ನು ದೇವರು ತನ್ನತ್ತ ಕರೆಸಿಕೊಂಡು ತುಂಬಾ ಅನ್ಯಾಯ ಮಾಡಿಬಿಟ್ಟ. ಇಷ್ಟು ದಿನ ಸುಖ ಸಂತೋಷದಿಂದ ಇದ್ದ ಕುಟುಂಬ ಇದೀಗ ಸ್ಪಂದನ ಅವರ ನೆನಪಿನಲ್ಲಿ, ಅವರಿಲ್ಲದ ಲೋಕದಲ್ಲಿ ನೋವಿನ ಮೂಲಕವೇ ಅವರ ನೆನಪಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ. ಎಲ್ಲಾ ವಿಧಿ ಆಟ. ಹೌದು ಇನ್ನಷ್ಟು ಮಾಹಿತಿಗೆ ಈ ವಿಡಿಯೋ ನೋಡಿ, ಮತ್ತು ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು. ( video credit :india reports