ಸ್ಪಂದನಾ ಫೋಟೋ ಮುಂದೆ ನಿಂತು ಮಗನ ಜೊತೆ ಖುಷಿ ಹಂಚಿಕೊಂಡ ವಿಜಯ್ ರಾಘವೇಂದ್ರ! ಏನದು ನೋಡಿ ?

ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾ ಲೈಫ್ ನಡುವೆಯೇ ಮಗನ ಓದಿನ ಬಗ್ಗೆ ಸಾಕಷ್ಟು ಸಮಯವನ್ನು ಮೀಸಲು ಇರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪರೀಕ್ಷೆ ಶುರುವಾದಾಗ, ವಿಜಯ ರಾಘವೇಂದ್ರ ಅವರೂ ನಿದ್ದೆಗೆಟ್ಟು ಒಂದು ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡಿದ್ದರು. ಅವರು ಅದರಲ್ಲಿ ನಿದ್ದೆಗೆಟ್ಟು ಕಾಯುತ್ತಿರುವುದನ್ನು ನೋಡಬಹುದಾಗಿತ್ತು. ಪರೀಕ್ಷೆಯ ಸಮಯ ಎಂದು ಅ ಅವರು ಶೀರ್ಷಿಕೆ ಕೊಟ್ಟಿದ್ದರು. ಮಗನಿಗಾಗಿ ಅಪ್ಪ ರಾತ್ರಿ ಜಾಗರಣೆ ಮಾಡುತ್ತಿದ್ದುದು ಇದರಿಂದ ತಿಳಿಯುತ್ತದೆ.
ಆದರೆ ಇದೀಗ, ನಟ, ಪರೀಕ್ಷೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಸದ್ಯ ಮಗನ ಪರೀಕ್ಷೆ ಮುಗಿದಿರುವುದಾಗಿ ಹೇಳಿದ್ದಾರೆ. EXAM ಇವತ್ತು ಮುಗೀತು! ಅಮ್ಮನ ಬೆಳಕಿನಲ್ಲಿ ಬೆಳಗು ಕಂದ ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ. ಹಿಂದೆ ಪತ್ನಿ ಸ್ಪಂದನಾ ಅವರ ಫೋಟೋ ಇದರಲ್ಲಿ ನೋಡಬಹುದಾಗಿದೆ. ಮಕ್ಕಳ ಪರೀಕ್ಷೆ ಮುಗಿದಾಗ ಅಪ್ಪ-ಅಮ್ಮಂದಿರಿಗೂ ಏನೋ ದೊಡ್ಡದೊಂದು ತಲೆಬಿಸಿ ಮುಗಿದ ಅನುಭವ. ಏನೋ ಭಾರ ಕಳೆದುಕೊಂಡಂತೆ ಭಾಸವಾಗುವುದು ಸಹಜ. ಅದೇ ರೀತಿ ವಿಜಯ ರಾಘವೇಂದ್ರ ಅವರಿಗೂ ಆಗಿದ್ದು, ಪರೀಕ್ಷೆ ಮುಗಿದಿರುವುದಾಗಿ ಹೇಳಿದ್ದಾರೆ. ಇದರಿಂದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಸ್ಪಂದನಾ ಅವರನ್ನ ತುಂಬಾನೆ ಪ್ರೀತಿಸೋ ವಿಜಯ ರಾಘವೇಂದ್ರ, ಸದಾ ಅವರ ನೆನಪಿನಲ್ಲಿಯೇ ಇದ್ದಾರೆ. ಪತ್ನಿ ಅಂದ್ರೆ ವಿಶೇಷ ಪ್ರೀತಿ ಇಟ್ಟುಕೊಂಡಿರೋ ವಿಜಯ ರಾಘವೇಂದ್ರ ಅವರನ್ನ ಮರೆತೇ ಇಲ್ಲ ಅಂತಲೇ ಹೇಳಬಹುದು.ನಾ ಕಂಡ ಅದ್ಭುತ ಫ್ಯಾಮಿಲಿ ಸರ್ ನಿಮ್ದು.. ನಿಮ್ನ ನೋಡುದ್ರೆ ಖುಷಿ ಆಗುತ್ತೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈಗ ನಿಮ್ಮ ಜೊತೆ ನಿಮ್ಮ ಹೆಂಡತಿ ಇದ್ದಿದ್ದರೆ ನಿಮ್ಮ ಫ್ಯಾಮಿಲಿ ನೋಡಲು ಎರಡು ಕಣ್ಣು ಸಾಲದು ಆದರೆ ವಿಧಿ ಆಟದಲ್ಲಿ ಬೇರೆ ಅಣೆ ಆಗೋಗಿದೆ ಆದರೂ ನೀವು ಹೀಗೆ ನಗುನಗುತ್ತಾ ಇರಬೇಕೆಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.