ಸ್ಪಂದನ ಕುರಿತು ವಿವಾಹ ವಾರ್ಷಿಕೊತ್ಸವಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ರಾಘು..!
ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರು ಸಾಕಷ್ಟು ಯುವ ದಂಪತಿಗಳಿಗೆ ಮಾದರಿ ಆಗುವಂತೆ ಜೀವನವನ್ನು ಮಾಡಿದ್ದರು. ಸಾಂಸಾರಿಕ ಜೀವನದಲ್ಲಿ ಒಬ್ಬ ಪತಿ-ಪತ್ನಿ ಹೇಗಿರಬೇಕು, ಯಾವ ರೀತಿ ಸುಖ ಸಂಸಾರ ನಡೆಸಬೇಕು, ಯಾವ ರೀತಿ ಸಮಸ್ಯೆ ಬಂದಾಗ ಹೇಗೆ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಈ ಜೋಡಿ ತೋರಿಸಿಕೊಟ್ಟಿತ್ತು. ವಿಜಯ ರಾಘವೇಂದ್ರ ಅವರು ಸಾಕಷ್ಟು ಬಾರಿ ವೇದಿಕೆಯಲ್ಲಿ ಹೇಳಿದ್ದಾರೆ. ಹೌದು ನಾನು ಕಷ್ಟದಲ್ಲಿ ಇದ್ದಾಗ, ನನ್ನ ಭಾವನೆಗಳಿಗೆ ನನ್ನ ಕನಸುಗಳಿಗೆ ಹೆಚ್ಚು ಪೆಟ್ಟು ಬಿದ್ದಾಗ ನನ್ನ ಜೊತೆಗೆ ನಿಂತುಕೊಂಡಿದ್ದು ನನ್ನ ಹೆಂಡತಿ. ಆಕೆ ನನ್ನ ಬೆನ್ನೆಲುಬಾಗಿ ನಿಂತಳು. ಪ್ರತಿ ಹಂತದಲ್ಲೂ ಕೂಡ ನನ್ನ ಜೊತೆಗೆ ನಿಂತುಕೊಂಡು ಸಪೋರ್ಟ್ ಮಾಡಿದ್ದಾಳೆ ಸ್ಪಂದನ. ಇಂತಹ ಹೆಂಡತಿ ಪಡೆಯಲು ನಾನು ಪುಣ್ಯ ಮಾಡಿದೆ ಎಂದು ಸಾಕಷ್ಟು ಬಾರಿ ಹೇಳಿದ್ದರು ರಾಘು.
ಆದರೆ ದೇವರು ಇವರ ಪ್ರೀತಿ ನೋಡದೆ ಅವರಿಬ್ಬರನ್ನು ಬೇರೆ ಬೇರೆ ಮಾಡಿಬಿಟ್ಟನೋ ಏನೋ ಗೊತ್ತಿಲ್ಲಾ. ಅತಿ ಚಿಕ್ಕ ವಯಸ್ಸಿಗೆ ಸ್ಪಂದನರನ್ನ ತನ್ನ ಬಳಿ ಕರೆಸಿಕೊಂಡ. ಹೌದು ಇವತ್ತು ಅಗಸ್ಟ್ 26, ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರು ಮದುವೆಯಾದ ದಿನ. ಇಂದಿಗೆ ಅವರು ಮದುವೆಯಾಗಿ 16 ವರ್ಷಗಳು ಕಳೆದಿವೆ. ಈ ದಿನ ಪ್ರತಿ ವರ್ಷದಂತೆ ಮದುವೆ ವಾರ್ಷಿಕೋತ್ಸವವನ್ನು ತುಂಬಾ ಗ್ರಾಂಡ್ ಆಗಿಯೇ ವಿಜಯ ಹಾಗೂ ಸ್ಪಂದನ ಅವರು ಆಚರಣೆ ಮಾಡಿಕೊಳ್ಳುತ್ತಿದ್ದರು..ಆದರೆ ಈ ವರ್ಷ ಸ್ಪಂದನ ಅವರ ಅಗಲಿಕೆಯಿಂದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಬದಲಿಗೆ ಸ್ಪಂದನ ಅವರ ನೆನಪಿನಲ್ಲಿಯೇ ಮದುವೆ ವಾರ್ಷಿಕೋತ್ಸವದ ಕುರಿತಾಗಿ ರಾಘು ಅವರು ಸ್ಪಂದನ ಅವರ ಬಗ್ಗೆ ಬಹು ಪದಗಳ ಮಾತುಗಳನ್ನ ಆಡಿದ್ದಾರೆ.
ಅವರಿಗಾಗಿ ಒಂದು ಭಾವುಕ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಈ ರೀತಿ ಬರೆದಿದೆ. ಒಮ್ಮೆ ಪೂರ್ತಿ ಓದಿ. ಹಾಗೆ ಕೊನೆಯಲ್ಲಿ ವಿಡಿಯೋ ಇದೆ ನೋಡಿ ಶೇರ್ ಮಾಡಿ. 'ಚಿನ್ನ,
ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ,
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ, ಬದುಕನ್ನ ಕಟ್ಟಿ ಸರ್ವಸ್ವವಾದೆ, ಉಸಿರಲ್ಲಿ ಬೆರೆತು ಜೀವಂತವಾದೆ, ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು, ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ, ಶೌರ್ಯನಲಿ ನಾನಿನ್ನ ಬಿಗಿದಪ್ಪುವಷ್ಟು' ಎಂದು ರಾಘು ಭಾವುಕ ಪೋಸ್ಟ್ ಮಾಡಿದ್ದಾರೆ. ಇಲ್ನೋಡಿ ವಿಡಿಯೋ... ( video credit : public tv )