ಮನಸಲ್ಲಿ ಸಾವಿರ ನೋವಿದ್ದರೂ ಕದ್ದ ಚಿತ್ರ ಟ್ರೈಲರ್ ಲಾಂಚ್ ಮಾಡಲು ಬಂದ ವಿಜಯ ರಾಘವೇಂದ್ರ ಹೇಳಿದ್ದೇನು ನೋಡಿ ; ವಿಡಿಯೋ ವೈರಲ್
ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರು ಸಾಕಷ್ಟು ಯುವ ದಂಪತಿಗಳಿಗೆ ಮಾದರಿ ಆಗುವಂತೆ ಜೀವನವನ್ನು ಮಾಡಿದ್ದರು. ಸಾಂಸಾರಿಕ ಜೀವನದಲ್ಲಿ ಒಬ್ಬ ಪತಿ-ಪತ್ನಿ ಹೇಗಿರಬೇಕು, ಯಾವ ರೀತಿ ಸುಖ ಸಂಸಾರ ನಡೆಸಬೇಕು, ಯಾವ ರೀತಿ ಸಮಸ್ಯೆ ಬಂದಾಗ ಹೇಗೆ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಈ ಜೋಡಿ ತೋರಿಸಿಕೊಟ್ಟಿತ್ತು. ವಿಜಯ ರಾಘವೇಂದ್ರ ಅವರು ಸಾಕಷ್ಟು ಬಾರಿ ವೇದಿಕೆಯಲ್ಲಿ ಹೇಳಿದ್ದಾರೆ. ಹೌದು ನಾನು ಕಷ್ಟದಲ್ಲಿ ಇದ್ದಾಗ, ನನ್ನ ಭಾವನೆಗಳಿಗೆ ನನ್ನ ಕನಸುಗಳಿಗೆ ಹೆಚ್ಚು ಪೆಟ್ಟು ಬಿದ್ದಾಗ ನನ್ನ ಜೊತೆಗೆ ನಿಂತುಕೊಂಡಿದ್ದು ನನ್ನ ಹೆಂಡತಿ. ಆಕೆ ನನ್ನ ಬೆನ್ನೆಲುಬಾಗಿ ನಿಂತಳು. ಪ್ರತಿ ಹಂತದಲ್ಲೂ ಕೂಡ ನನ್ನ ಜೊತೆಗೆ ನಿಂತುಕೊಂಡು ಸಪೋರ್ಟ್ ಮಾಡಿದ್ದಾಳೆ ಸ್ಪಂದನ. ಇಂತಹ ಹೆಂಡತಿ ಪಡೆಯಲು ನಾನು ಪುಣ್ಯ ಮಾಡಿದೆ ಎಂದು ಸಾಕಷ್ಟು ಬಾರಿ ಹೇಳಿದ್ದರು ರಾಘು.
ಪತ್ನಿ ಸತ್ತ ನೋವಿನಲ್ಲಿ ಇದ್ದರು ಸಹ ತನ್ನ ಕರ್ತವ್ಯ ನಿರ್ವಹಿಸಲು ಕದ್ದ ಚಿತ್ರ ಟ್ರೈಲರ್ ಲಾಂಚ್ ಮಾಡಲು ಬಂದ ವಿಜಯ ರಾಘವೇಂದ್ರ ಇದು ನನ್ನ ಕರ್ತವ್ಯ ಈ ಚಿತ್ರವನ್ನು ಪ್ರಮೋಟ್ ಮಾಡುವುದು . ನನಗೆ ನನ್ನ ಮಗನೆ ಸರ್ವಸ್ವ ನಾನು ಅವನಲ್ಲಿ ನನ್ನ ಪತ್ನಿಯನ್ನು ಕಾಣುತ್ತೇನೆ .ಯಾರಾದರೂ ಬೇರೆ ಮನೆಯಲ್ಲಿ ಇಂತಹ ಘಟನೆ ನಡೆದಾಗ ನಾವೆಲ್ಲರೂ ಅವರಿಗೆ ಮರುಕ ಸೂಚಿಸುತ್ತೇವೆ . ಆದರೆ ಅಂತಹ ಒಂದು ಘಟನೆ ನನ್ನ ಜೀವನದಲ್ಲಿ ನಡೆದಿದೆ . ಅದರ ದುಃಖ ಎಂತಹದು ಎಂದು ಈಗ ನನಗೆ ಗೊತ್ತುಗುತ್ತಿದೆ .ಎಂದು ಕಣ್ಣಿರುಇಡುತ್ತಾ ಹೇಳಿದರು . ಅವರ ಕದ್ದ ಚಿತ್ರ ಎಲ್ಲ ರೀತಿಯಲ್ಲಿ ಸಕ್ಸಸ್ ಆಗಲು ಎಂದು ನಾವೆಲ್ಲ ಹಾರೈಸೋಣ .
( video credit : news first kannada )