ಮರಳಿ ಡಿಕೆಡಿಗೆ ಬನ್ನಿ ಎನ್ನುತ್ತಿರುವ ಪ್ರೇಕ್ಷಕರಿಗೆ ರಾಘು ನೋವಿನಲ್ಲೇ ಹೇಳಿದ್ದೇನು ನೋಡಿ..!
ಹೆಂಡತಿಯೇ ಸರ್ವಸ್ವ ಎಂದು ಜೀವನದಲ್ಲಿ ಮೊದಲಿಗೆ ತನ್ನ ಹೆಂಡತಿಗೆ ಪ್ರೀತಿ ಪಾತ್ರಧಾರಿಯಾಗಿ ಪ್ರೀತಿ ನೀಡಿ ನಂತರ ಮಿಕ್ಕೆಲ್ಲ ಎನ್ನುವಂತೆ ಹೆಂಡತಿಯನ್ನು ತುಂಬಾನೇ ಹಚ್ಚಿಕೊಂಡಿದ್ದರು ವಿಜಯ ರಾಘವೇಂದ್ರ. ತಮ್ಮ ಕಷ್ಟದ ದಿನಗಳಲ್ಲಿ ವಿಜಯ ರಾಘವೇಂದ್ರರಿಗೆ ಹೆಚ್ಚು ಸಾತ್ ಕೊಟ್ಟಿದ್ದು ಇದೆ ಸ್ಪಂದನ..ಹೌದು ಸ್ಪಂದನ ನನ್ನ ಜೊತೆ ಹೇಗೆಲ್ಲಾ ಕಷ್ಟದ ಸಂದರ್ಭಗಳಲ್ಲಿ ನಿಂತುಕೊಂಡರು ಎಂಬುದಾಗಿ ವಿಜಯ್ ಅವರೇ ಕೆಲವೇದಿಕೆ ಮೇಲೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದರು. ನಾನು ಕುಗ್ಗಿ ಹೋಗಿದ್ದೇನೆ, ನನ್ನ ಕೈಯಲ್ಲಿ ಇನ್ನೂ ಮುಂದೆ ಆಗಲ್ಲ ಎನ್ನುವ ಸಂದರ್ಭದಲ್ಲಿ ಸಾಕಷ್ಟು ಜನರು ಬೆನ್ನು ತಟ್ಟಿದ್ದಾರೆ, ಆದರೆ ಆ ಸಂದರ್ಭದಲ್ಲಿ ಗಟ್ಟಿಯಾಗಿ ನಿಂತಿದ್ದು ನನ್ನ ಮಡದಿ ಸ್ಪಂದನ ಎಂದು ವಿಜಯ್ ಅವರೇ ಹೇಳಿಕೊಂಡಿದ್ದರು.
ಸದಾ ನಗುನಗುತ್ತಾ ಇಬ್ಬರು ಖುಷಿಯಿಂದ ಜೀವನ ನಡೆಸುತ್ತಿದ್ದರು..ಇವರ ದಾಂಪತ್ಯ ಜೀವನದಲ್ಲಿ ಒಂದೇ ಒಂದು ಬಿರುಕು ಎಂದಿಗೂ ಕಾಣಿಸಲಿಲ್ಲ. ಆದರೆ ರಾಘು ಮತ್ತು ಸ್ಪಂದನ ಅವರ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ದೇವರು ರಾಘು ಅವರ ಜೀವನದಲ್ಲಿ ದೊಡ್ಡ ಬಿರುಗಾಳಿಯನ್ನೇ ಇದೀಗ ಎಬ್ಬಿಸಿ ಬಿಟ್ಟನು. ಸ್ಪಂದನ ಅವರಿಗೆ ಹೃದಯಾಘಾತ ಸಂಭವಿಸಿದ್ದು ಸಾವನಪ್ಪಿದ್ರು. ಇದರಿಂದ ರಾಘು ತುಂಬಾ ನೋವಿಗೆ ಒಳಗಾಗಿದ್ದಾರೆ. ವಿಜಯ ರಾಘವೇಂದ್ರ ಡಿಕೆಡಿ ಕಾರ್ಯಕ್ರಮದಲ್ಲಿ ಮೊದಲಿನಿಂದ ಕಾಣಿಸಿದ್ದರು. ಆದರೆ ಇತ್ತೀಚಿಗೆ ಒಂದು ಎಪಿಸೋಡ್ ಇವರಿಲ್ಲದೆನೆ ನಡೆದು ಹೋಗಿದೆ.
ವಿಜಯ್ ರಾಘವೇಂದ್ರ ಅವರಿಗೆ ಮತ್ತೆ ಡಿಕೆಡಿಗೆ ಬರಲು ಅನುಶ್ರೀ, ಅವರ ಮನೆಗೆ ಹೋಗಿ ಹೇಳಿದರಂತೆ.. ಆಗ ನಮ್ಮ ಮನೆ ನಂದಾದೀಪವೆ ಹಾರಿಹೋಗಿದೆ, ಇನ್ನೆಲ್ಲಿ ಖುಷಿಯಾಗಿರಲು ಸಾಧ್ಯ, ನನ್ನ ಮಗನು ಸಹ ಇದರಿಂದ ಇನ್ನೂ ಆಚೆ ಬಂದಿಲ್ಲ, ನೋಡೋಣ ಇಷ್ಟರಲ್ಲಿ ಮರಳಿ ಬರುವೆ ಎಂಬುದಾಗಿ ಅನುಶ್ರೀ ಅವರ ಬಳಿ ಹೇಳಿದ್ದಾರೆ ವಿಜಯ್ ಅವರು ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿದುಬಂದಿದೆ..ಜೊತೆಗೆ ಅನುಶ್ರೀ ಆ ಕಾರ್ಯಕ್ರಮಕ್ಕೆ ಬನ್ನಿ ಕಾಲ ಕಳೆದಂತೆ ಎಲ್ಲವೂ ಮಾಯ ಆಗುತ್ತದೆ ಎಂದು ಸಾಂತ್ವನ ಹೇಳಿ ಬಂದಿದ್ದಾರಂತೆ. ಇಲ್ಲಿದೆ ನೋಡಿ ವಿಡಿಯೋ, ಮತ್ತು ನೀವೂ ಸಹ ರಾಘು ಅವರನ್ನ ಮತ್ತೆ ಡಿಕೆಡೆಯಲ್ಲಿ ಆದಷ್ಟು ಬೇಗ ನೋಡಬೇಕು ಅಂದರೆ ತಪ್ಪದೆ ವಿಡಿಯೋಗೊಂದು ಮೆಚ್ಚುಗೆ ನೀಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit : TMG SERIAL TEAM )