ಪತ್ನಿಯ ಅಗಲಿಕೆ ನೋವಿನಲ್ಲಿದ್ದರೂ ಲೈವ್ ಬಂದ ರಾಘು ಅಭಿಮಾನಿಗಳಿಗೆ ಹೇಳಿದ್ದೇನು..!
ವಿಜಯ್ ರಾಘವೇಂದ್ರ ಅವರು ಅವರ ಪತ್ನಿ ಸ್ಪಂದನ ಅವರ ಅಗಲಿಕೆಯಿಂದ ಇನ್ನೂ ಕೂಡ ಹೊರಬಂದಿಲ್ಲ. ಹೌದು ಪತ್ನಿಯ ನೆನಪಿನಲ್ಲಿ ಇದೀಗಲೂ ಕೂಡ ಕಣ್ಣೀರು ಹಾಕುತ್ತಿದ್ದಾರೆ ವಿಜಯ್ ರಾಘವೇಂದ್ರ ಅವರು. ಅವರ ಅಗಲಿಕೆಯನ್ನ ಯಾರಿಗೂ ಕೂಡ ಅರಗಿಸಿಕೊಳ್ಳಲಾಗದ ರೀತಿ ಸ್ಪಂದನ ಅವರು ಅತಿ ಚಿಕ್ಕ ವಯಸ್ಸಿಗೆ ಎಲ್ಲರನ್ನು ಬಿಟ್ಟು ಹೋಗಿರುವುದು ನಿಜಕ್ಕೂ ದುಃಖ ತರುವಂತಹ ವಿಷಯ..ಅವರ ಸಾವಿನ ಸುದ್ದಿ ಕೇಳಿ ಅವರು ನಮ್ಮಿಂದ ದೂರವಾಗಿರುವ ವಿಷಯ ತಿಳಿದು ನಮಗೆ ಇಷ್ಟು ನೋವು ಆಯ್ತು ಅಂದ್ರೆ, ಅವರ ಕುಟುಂಬದವರು ಈ ವಿಚಾರವನ್ನು ಕೇಳಿ ಎಷ್ಟು ನೊಂದುಕೊಂಡಿದ್ದರೋ ಆ ದೇವರೇ ಬಲ್ಲ.
ಇದೀಗ ವಿಜಯ ರಾಘವೇಂದ್ರ ಅವರು ಮನಸ್ಸಿನಲ್ಲಿ ಬೆಟ್ಟದಷ್ಟು ನೋವಿದ್ದರೂ,, ಮುತ್ತಿನಂತ ಅವರ ಹೆಂಡತಿ ತಮ್ಮಿಂದ ದೂರ ಆಗಿದ್ದರೂ ಕೂಡ, ಅವರ ಅಗಲಿಕೆಯ ನೋವಿನಲ್ಲಿದ್ದರೂ ಅಭಿಮಾನಿಗಳೇದುರು ಬಂದಿದ್ದಾರೆ. ಜೊತೆಗೆ ಒಂದು ಮನವಿ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ವಿಜಯ್ ರಾಘವೇಂದ್ರ ಮತ್ತು ಚಿನ್ಹೆಗೌಡರು ಜೊತೆಗೆ ಬಿಕೆ ಶಿವರಾಮ್ ಅವರು ಎಲ್ಲರೂ ಸೇರಿ ಇದೇ ತಿಂಗಳು 16ನೇ ತಾರೀಕು ಸ್ಪಂದನ ಅವರ ಉತ್ತರ ಕ್ರಿಯೆಯನ್ನು ಹಮ್ಮಿಕೊಂಡಿದ್ದಾರೆ...ಈ ವಿಚಾರವನ್ನು ರಾಘು ಅವರು ನೋವಿನಲ್ಲಿದ್ದರೂ ಲೈವ್ ಮೂಲಕ ಬಂದು ಹೇಳಿಕೊಂಡಿದ್ದಾರೆ ಎಂದು ವಿಡಿಯೋ ಮೂಲಕ ತಿಳಿದು ಬಂದಿದೆ. ಹೌದು ನಮ್ಮ ಮನೆಯ ಮಗಳು ಶ್ರೀಮತಿ ಸ್ಪಂದನ ವಿಜಯ್ ಅವರು ಮೊನ್ನೆ ಏಳನೇ ತಾರೀಕು ಹೃದಯಾಘಾತದಿಂದ ನಮ್ಮಿಂದ ದೂರವಾಗಿದ್ದಾರೆ..
ಹಾಗಾಗಿ ಅವರ ಉತ್ತರ ಕ್ರಿಯೆಯನ್ನು ಇದೆ ಬುಧವಾರ 16ನೇ ತಾರೀಕು ಮಲ್ಲೇಶ್ವರಂ ನ ಅವರ ಸ್ವಗೃಹದಲ್ಲಿ ಹಮ್ಮಿಕೊಂಡಿದ್ದೇವೆ. ಬೆಳಗ್ಗೆ ಎಂಟು ಗಂಟೆಯಿಂದಲೆ ಶಾಂತಿ ಹೋಮ ನಡೆಯಲಿದ್ದು, ಮಧ್ಯಾಹ್ನ ಒಂದು ಗಂಟೆಗೆ ಬಿವಿಎಂಪಿಯಲ್ಲಿ ಬರುವ ಕೋದಂಡರಾಮ ಪುರದ ಯಂಗ್ಸ್ಟರ್ಸ್ ಕಬ್ಬಡ್ಡಿ ಮೈದಾನದಲ್ಲಿ ಭೋಜನ ಏರ್ಪಾಡು ಮಾಡಿಕೊಂಡಿದ್ದೇವೆ. ಎಲ್ಲರೂ ಬಂದು ಆ ಕಾರ್ಯಕ್ರಮವ ನಡೆಸಿಕೊಡಬೇಕು ಎಂದು ಮನವಿ ಮಾಡಿ ಎಲ್ಲರಿಗೂ ಆಹ್ವಾನಿಸಿದ್ದಾರೆ. ಅಭಿಮಾನಿಗಳಿಗೆ ಮತ್ತೆ ಎಲ್ಲರಿಗೂ ಕೂಡ ಸ್ಪಂದನ ಅವರ ಕುಟುಂಬ ಆಹ್ವಾನ ಮಾಡಿದೆ. ಇಲ್ಲಿದೆ ನೋಡಿ ವಿಡಿಯೋ ನೀವು ಕೂಡ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಮೆಂಟ್ ಮಾಡಿ.. ( video credit ; karunada suddi )