ಸ್ಪಂದನಾ ಬರೆದಿದ್ದ ಡೈರಿ ನೋಡಿ ಕಣ್ಣೀರು ಹಾಕುತ್ತಿರುವ ರಾಘು..! ಸ್ಪಂದನಾರ ಆ ಆಸೆ ಏನಿತ್ತು..?
ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿದ್ದು ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಹೌದು ಇವರದು ತುಂಬು ಸಂಸಾರ ಆಗಿತ್ತು, ಸದಾ ನಗು ಮುಖದಲ್ಲಿಯೇ ಇರುತ್ತಿದ್ದ ವಿಜಯ್ ರಾಘವೇಂದ್ರ ಅವರ ಮುಖದಲ್ಲಿ ಇದೀಗ ನಗು ಕಣ್ಮರೆಯಾಗಿದೆ. ಅದಕ್ಕೆ ಕಾರಣ ಇದ್ದಕಿದ್ದಂತೆ ಅತಿ ಸಣ್ಣ ವಯಸ್ಸಿನಲ್ಲೇ ಆದ ಸ್ಪಂದನ ಅವರ ಅಗಲಿಕೆ. ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅವರು ಒಟ್ಟಿಗೆ ತುಂಬಾ ಪ್ರೀತಿಯಿಂದ ಜೀವನ ನಡೆಸುತ್ತಿದ್ದಂತವರು. ದೇವರಿಗೆ ಇವರ ಜೋಡಿ ನೋಡಿ ಅಸೂಯೆ ಹುಟ್ಟಿತೋ ಏನೋ ಗೊತ್ತಿಲ್ಲ, ಸ್ಪಂದನ ಅವರನ್ನು ಬಹುಬೇಗನೆ ತನ್ನ ಬಳಿ ಕರೆಸಿಕೊಂಡು ಇವರಿಗೆಲ್ಲ ನೋವು ಕೊಟ್ಟು ಬಿಟ್ಟ..
ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಅವರ ಜೋಡಿ ಹೇಗಿತ್ತು ಅಂದರೆ, ನೋಡಿದ ಹಲವರು ಸಹ ಆದರ್ಶ ದಂಪತಿಗಳಂತೆ ಇದ್ದರೆ, ಇವರ ಹಾಗೆ ನಾವು ಇರಬೇಕು ಎಂಬುದಾಗಿ ಇವರನ್ನೇ ಮಾದರಿಯಾಗಿ ಹೆಚ್ಚು ಜನರು ತೆಗೆದುಕೊಳ್ಳುವಂತೆ ಇದ್ದರು. ನಟ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅತಿ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರನ್ನೂ ಬಿಟ್ಟು ಹೋಗಿರುವುದು ತುಂಬಾ ದುಃಖದ ವಿಷಯ.. ಇದೀಗ ವಿಜಯ್ ರಾಘವೇಂದ್ರ ಅವರು ಸ್ಪಂದನ ಅವರ ನೆನಪಿನಲ್ಲಿಯೇ ಅವರ ಜೊತೆ ಕಳೆದ ಖುಷಿ ಸಂದರ್ಭಗಳಲ್ಲಿಯ ಕೆಲವು ವಿಡಿಯೋಗಳನ್ನ, ಹಾಗೂ ಕೆಲ ಫೋಟೋಗಳನ್ನು ನೋಡುತ್ತಾ ಅವರ ನೆನಪಿನಲ್ಲಿಯೇ ಕಣ್ಣೀರು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸ್ಪಂದನ ಅವರಿಗೆ ಆಗಾಗ ಡೈರಿ ಬರೆಯುವ ಅಭ್ಯಾಸ ಇತ್ತಂತೆ. ಅವರು ಬದುಕಿರುವವರೆಗೂ ಅದನ್ನು ಯಾರು ಕೂಡ ತೆಗೆದಿರಲಿಲ್ಲ, ಕಾರಣ ಅವರ ವೈಯಕ್ತಿಕ ವಿಚಾರ ಆಗಿರುತ್ತದೆಂದು ಯಾರು ಓದಿರಲಿಲ್ಲವಂತೆ, ಆದ್ರೆ ಈಗ ವಿಜಯ್ ಅವರು ಆ ಡೈರಿಯನ್ನು ಓಪನ್ ಮಾಡಿ ಓದಿದ್ದಾರೆ ಎಂದು ಈ ವಿಡಿಯೋ ಮೂಲಕ ತಿಳಿದುಬಂದಿದೆ.
ಆ ಡೈರಿಯನ್ನು ಓಪನ್ ಮಾಡಿದ್ದು ಡೈರಿಯನ್ನೇ ನೋಡಿ ಕಣ್ಣೀರು ಹಾಕುತ್ತಿದ್ದಾರಂತೆ ವಿಜಯ್ ರಾಘವೇಂದ್ರ. ಕಾರಣ 99% ಅದ್ರಲಿ ವಿಜಯ್ ರಾಘವೇಂದ್ರ ಅವರ ಒಳತಿಗಾಗಿಯೇ ಹೆಂಡತಿ ಬರೆದಿದ್ದನ್ನು ಕಂಡು ನೋವಿಗೆ ಒಳಗಾಗಿದ್ದಾರೆ. ವಿಜಯ್ ರಾಘವೇಂದ್ರ ಒಬ್ಬರು ನಟ ಆಗಿದ್ದು ಅವರು ಹೆಚ್ಚು ಸಿನಿರಂಗದಲ್ಲಿ ಯಶಸ್ಸು ಕಾಣಲಿಲ್ಲ, ಹಾಗಾಗಿ ಅವರ ಯಶಸ್ವಿಗೆ ಪ್ರತಿದಿನ ಸ್ಪಂದನ ಅವರು ಆ ದೇವರಲ್ಲಿ ಬೇಡಿಕೊಳ್ಳುವಂತಹ ಎಲ್ಲಾ ವಿಚಾರವನ್ನು ಡೈರಿಯಲ್ಲಿ ಬರೆದಿದ್ದರಂತೆ. ಜೊತೆಗೆ ಮಗನನ್ನು ದೊಡ್ಡ ಡಾಕ್ಟರ್ ಮಾಡಬೇಕು ಎನ್ನುವ ಕನಸನ್ನು ಹೊತ್ತಿದ್ದರು ಎಂದು ತಿಳಿದುಬಂದಿದೆ.
ಹಾಗೆ ಇನ್ನೊಂದು ಕಡೆ ಪಾರ್ವತಮ್ಮ ರಾಜಕುಮಾರ್ ಅವರ ಹಾಗೆಯೇ ಅವರು ಕೂಡ ದೊಡ್ಡ ನಿರ್ಮಾಪಕಿವಾಗಿ ಹೊಸಬರ ಸಿನಿಮಾಗಳಿಗೆ ಜೀವ ತುಂಬಿ ದೊಡ್ಡದಾದ ನಿರ್ಮಾಣ ಸಂಸ್ಥೆಯನ್ನು ಹೊಂದಬೇಕು ಎನ್ನುವ ಕನಸನ್ನು ಕಟ್ಟಿದ್ದರಂತೆ, ಆದ್ರೆ ಇದೀಗ ವಿಧಿ ಇವರ ಬಾಳಲ್ಲಿ ಕತ್ತಲು ತಂದಿತು. ಇದೀಗ ಸ್ಪಂದನ ಅವರ ಅಗಲಿಕೆಯಿಂದ ಅವರು ಕಂಡಿದ್ದ ಆ ಎಲ್ಲಾ ಕನಸು ಅವರು ಇದ್ದಾಗ ನನಸ್ಸು ಆಗಲೂ ಇಲ್ಲ. ಇದನ್ನು ನೆನೆದು ವಿಜಯ ರಾಘವೇಂದ್ರ ಇದೀಗ ಕಣ್ಣೀರು ಹಾಕುತ್ತಿದ್ದಾರೆ ಎಂದು ಈ ವೀಡಿಯೊ ಮೂಲಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ ವಿಡಿಯೋ ನೋಡಿ, ಮತ್ತು ವಿಡಿಯೋ ತಪ್ಪದೇ ಶೇರ್ ಮಾಡಿ, ಓಂ ಶಾಂತಿ ಎಂದು ಕಾಮೆಂಟ್ ಮಾಡುವ ಮೂಲಕ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಧನ್ಯವಾದಗಳು. ( video credit : cincisuddi kannada )