ಡಿಕೆಡಿ ವೇದಿಕೆ ಮೇಲೆ ಸ್ಪಂದನಾರನ್ನ ನೋಡಿ ಬಿಕ್ಕಿ ಬಿಕ್ಕಿ ಅತ್ತ ರಾಘು..! ಕಣ್ಣೀರು ತರಿಸುವ ದೃಶ್ಯ
ಸ್ಪಂದನ ಹಾಗೂ ರಾಘು ಅವರ ಜೋಡಿ ಎಷ್ಟರಮಟ್ಟಿಗೆ ಸಾಕಷ್ಟು ಜನರ ಮೆಚ್ಚುಗೆ ಪಡೆದುಕೊಂಡಿತ್ತು ಅಂದರೆ, ನಿಜಕ್ಕೂ ಆದರ್ಶ ದಂಪತಿಗಳಾಗಿ ಮತ್ತು ದಾಂಪತ್ಯ ಜೀವನ ನಡೆಸಿದರೆ ಈ ಜೋಡಿಯಂತೆ ನಡೆಸಬೇಕು ಎಂಬಂತೆ ಸಾಕಷ್ಟು ಜನರಿಗೆ ಮಾದರಿಯಾಗಿದ್ದವರು. ಸ್ಪಂದನ ಹಾಗೂ ರಾಘು ಜೀವನದಲ್ಲಿ ಅದೆಂತಹ ಕಷ್ಟ ಬಂದರೂ ಕೂಡ, ಒಬ್ಬರನ್ನೊಬ್ಬರು ಎಂದಿಗೂ ಕೂಡ ಬಿಟ್ಟು ಕೊಡಲಿಲ್ಲ. ರಾಘು ಅವರ ಕಷ್ಟಕ್ಕೆ ನಿಂತು ಅವರ ಬೆನ್ನೆಲುಬಾಗಿ ಪ್ರತಿ ಹಂತದಲ್ಲೂ ರಾಘು ಅವರಿಗೆ ಸಾತ್ ಕೊಟ್ಟವರು ಸ್ಪಂದನ.. ಹೌದು ವಿಜಯ್ ರಾಘವೇಂದ್ರ ಅವರು ನನ್ನ ಜೀವನದಲ್ಲಿ ಇಂತಹ ಒಂದು ಕರಾಳ ದಿನ ಬರುತ್ತದೆ ಎಂದು ಎಂದಿಗೂ ಕೂಡ ಊಹೆ ಮಾಡಿರದ ವ್ಯಕ್ತಿ. ಅಷ್ಟು ಸುಂದರವಾಗಿ ಸೊಗಸಾಗಿ ಎಲ್ಲರ ಜೊತೆ ಸ್ನೇಹದಿಂದ ಖುಷಿಖುಷಿಯಾಗಿ ಇರುತ್ತಿದ್ದರು ರಾಘು.
ಆದ್ರೆ ಅವರ ಬಾಳಿನಲ್ಲಿ ಇದೀಗ ಕತ್ತಲು ಆವರಿಸಿತು. ವಿಧಿ ಏನು ಮಾಡಲು ಆಗುವುದಿಲ್ಲ. ಏನೇ ಆದರೂ ಜೀವನ ನಡೆಸಲೇಬೇಕು, ಅವರ ಮಗ ಶೌರ್ಯ ಮುಖ ನೋಡಿಕೊಂಡು ರಾಘು ಜೀವನ ನಡೆಸುವಂತಾಗಿದೆ. ಇದರ ಜೊತೆಗೆ ಸ್ಪಂದನ ಅವರ ಅಗಲಿಕೆಯ ನೋವು ಕೂಡ ಹೆಚ್ಚಿರುತ್ತದೆ.. ಇದೀಗ ಮಾಧ್ಯಮ ಮೂಲಕ, ಹಾಗೂ ಬಲ್ಲಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಎರಡು ವಾರ ಡಿಕೆಡಿ ವೇದಿಕೆಯಲ್ಲಿ ಕಾಣಿಸಿರದ ರಾಘು ಈ ವಾರ ಡಿಕೆಡಿಯಲ್ಲಿ ಕಾಣಿಸಲಿದ್ದಾರಂತೆ.. ಇದರ ಶೂಟಿಂಗ್ ವೇಳೆ ಸ್ಕ್ರೀನ್ ಮೇಲೆ ಸ್ಪಂದನ ಅವರ ವಿಚಾರವಾಗಿ ಮತ್ತು ಅವರ ಹಾಗೂ ರಾಘು ಅವರ ಹೆಚ್ಚು ಖುಷಿಯ ಕ್ಷಣದ ದೃಶ್ಯಗಳು ವಿಡಿಯೋ ಮೂಲಕ ಪ್ರಸಾರ ಆಗಿದ್ದು, ಆ ವಿಡಿಯೋ ನೋಡಿದ ತಕ್ಷಣ ರಾಘು ಅವರು ಬೆಕ್ಕಿ ಬೆಕ್ಕಿ ಅಳಲು ಆರಂಭಿಸಿದರಂತೆ, ತದನಂತರ ಅವರಿಗೆ ಅವರೇ ಸಾಂತ್ವನ ಹೇಳಿಕೊಂಡು ಮತ್ತೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆಂದು ಇದೀಗ ತಿಳಿದುಬಂದಿದೆ.
ಹೌದು ಸ್ನೇಹಿತರೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಡಿಕೆಡಿ ವೇದಿಕೆಯಲ್ಲಿ ಈ ವಾರ ನಟ ರಾಘು ಅವರು ಕಾಣಿಸಲಿದ್ದು, ಸ್ವಲ್ಪ ಸ್ಪಂದನ ಅವರ ಅಗಲಿಕೆ ನೋವು ಈ ಮೂಲಕ ಕಡಿಮೆ ಆಗಬಹುದು. ಇಲ್ಲಿದೆ ನೋಡಿ ವಿಡಿಯೋ, ಸ್ಪಂದನ ಅವರನ್ನು ವಿಜಯ್ ಅವರು ಯಾವ ರೀತಿ ಏಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ.. ಇನ್ನು ಮೇಲಾದರೂ ವಿಜಯ ರಾಘವೇಂದ್ರ ಅವರ ಬಾಳಿನಲ್ಲಿ ಹೆಚ್ಚು ಖುಷಿ ಕ್ಷಣಗಳು ಬರಲಿ ಎಂದು ಆಶಿಸಿ ಧನ್ಯವಾದಗಳು.
( video credit : content master ).