ದಿಢೀರನೆ ಲೈವ್ ಬಂದು ಸಿಹಿ ಸುದ್ದಿ ಕೊಟ್ಟ ವಿಜಯ್ ರಾಘವೇಂದ್ರ! ಆ ಸಿಹಿ ಸುದ್ದಿ ಏನು ಗೊತ್ತಾ?
ಇನ್ನೂ ಸ್ಯಾಂಡಲ್ ವುಡ್ ನ ಚಿನ್ನಾರಿ ಮುತ್ತ ಎಂದ ಕೂಡಲೇ ನಾವು ಯಾರ ಬಗ್ಗೆ ಮಾತನಾಡುತ್ತಾ ಇದ್ದೇವೆ ಎಂದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುತ್ತದೆ. ಹೌದು ಇಂದಿನ ನಮ್ಮ ಲೇಖನ ಇರುವುದು ಸ್ಯಾಂಡಲ್ ವುಡ್ ನಲ್ಲಿ ಚಿನ್ನಾರಿ ಮುತ್ತಾ ಎಂದು ಹೆಸರು ಮಾಡಿರುವ ವಿಜಯ್ ರಾಘವೇಂದ್ರ ಅವರ ಬಗ್ಗೆ. ಇವ್ರ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಚಿತ್ರರಂಗದಲ್ಲಿ ಹಾಗೂ ವಯಕ್ತಿಕ ಜೀವನದಲ್ಲಿ ಕೂಡ ಒಳ್ಳೆಯ ವ್ಯಕ್ತಿ ಎಂದು ಹೆಸರು ಮಾಡಿರುವ ನಟ ಎಂದ್ರೆ ತಪ್ಪಾಗಲಾರದು. ಇನ್ನೂ ಇವ್ರ ಸರಳತೆಗೆ ಮನಸೋಲಾದವರು ಯಾರು ಇಲ್ಲ ಎಂದು ಹೇಳಬಹುದು. ಇನ್ನೂ ಇವರ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದೆ ಇದ್ದರೂ ಕೊಡ ಇವರ ಕ್ರೇಜ್ ಈ ವರೆಗೂ ಕಡಿಮೆ ಆಗಿಲ್ಲ. ಈಗ ಸದ್ಯದಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿರುವ ನಟ ಆಗಿದ್ದಾರೆ.
ಇನ್ನೂ ಕಳೆದ ವರ್ಷ ತಮ್ಮ ಪ್ರೀತಿಯ ಮಡದಿಯ ಅಗಲಿಕೆಯಿಂದ ನೊಂದಿರುವ ಈ ಮುಗ್ದ ಜೀವ ತನ್ನ ಮಗನಿಗೆ ತನ್ನ ನೋವನ್ನು ಮರೆತು ಎಲ್ಲಾ ಕ್ಷೇತ್ರದಲ್ಲಿ ಹಸನ್ಮುಖಿ ಆಗಿ ತೊಡಗಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಹಾಗೆಯೇ ಇತ್ತೀಚೆಗೆ ರಿಲೀಸ್ ಆದ ಜೋಗ 101 ಇವರ ಸಿನಿಮಾ ಕೊಡ ಮುಂಚೆ ಬಿಡುಗಡೆ ಆಗಿರುವ ಇವ್ರ ಎಲ್ಲಾ ಸಿನಿಮಾಗಳಿಗಿಂತ ಹೆಚ್ಚಿನ ಸದ್ದು ಮಾಡಿ ಯಶಸ್ಸನ್ನು ಕಾಣುತ್ತಾ ಇದೆ ಎಂದು ಹೇಳಬಹುದು. ಈಗಾಗಲೇ 3ಸಿನಿಮಾಗಳಿಗೆ ರಾಘು ಸಹಿ ಹಾಕಿರುವ ಸುದ್ದಿ ಈಗ ಗಾಂಧಿ ನಗರದಲ್ಲಿ ಸುದ್ದಿ ಮಾಡುತ್ತಾ ಇದೆ. ಹಾಗೆಯೇ ಈ ಚಿತ್ರದ ಬಗ್ಗೆ ರಾಘು ಸಾಕಷ್ಟು ನಿರೀಕ್ಷೆ ಹಾಗೂ ಕನಸನ್ನು ಹೊತ್ತಿದ್ದರು. ಏಕೆಂದ್ರೆ ಈ ವರೆಗೂ ಮಾಡಿರುವ ಇವರ ಕೆರಿಯರ್ ನಲ್ಲಿ ಈ ಸಿನಿಮಾ ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ ಈ ಮೂಲಕ ನನ್ನ ಇನ್ನೊಂದು ರೀತಿಯ ರಾಘುವನ್ನ ನಾನು ಪ್ರೇಕ್ಷಕರಿಗೆ ಪರಿಚಯ ಮಾಡಬಹುದು ಎಂದು ಹೆಚ್ಚಿನ ಪರಿಶ್ರಮವಹಿಸಿದ್ದರು.
ಈಗ ಸಿನಿಮಾ ಯಶಸ್ಸಿನ ಖುಷಿಯಲ್ಲಿ ಇದ್ದ ರಾಘು ನೆನ್ನೆ ಸಂಜೆಯ ಹೊತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ತನ್ನ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಇಷ್ಟ ಪಟ್ಟು ಈ ಸಿನಿಮಾವನ್ನು ಒಪ್ಪಿಕೊಂಡವರಿಗೆ ಧನ್ಯವಾದಗಳನ್ನು ತಿಳಿಸಿದರು. ಇನ್ನೂ ಶೂಟಿಂಗ್ ಸಮಯದಲ್ಲಿ ಕೊಡ ಸ್ಪಂದನ ಅವರು ಈ ಚಿತ್ರದ ಜಲಕ್ ಗಳನ್ನು ನೋಡಿ ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದಳು ಆದರೆ ವಿಧಿಯ ನಿರ್ಧಾರ ಬೇರೆಯೇ ಆಗಿತ್ತು ಎಂದು ಕೊಂಚ ಕಾಲ ಬೇಸರದಲ್ಲಿ ಇದ್ದದ್ದು ಉಂಟು. ಕೆಲ ಕಾಲ ಲೈವ್ ನಲ್ಲಿ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾತುಗಳನ್ನು ಆಡುತ್ತಾ ಆ ನಂತರ ಈಗ ಸಹಿ ಹಾಕಿರುವ ಮೂರು ಸಿನಿಮಾಗಳ ಬಗ್ಗೆ ತಿಳಿಸುತ್ತಾ ತನ್ನ ಅಭಿಮಾನಿಗಳಿಗೆ ಮನೋರಂಜನೆಯನ್ನು ನಾನು ನೀಡುತ್ತಾ ಬರುತ್ತೇನೆ ಎಂದು ಮಾತು ಕೊಟ್ಟು ತಮ್ಮ ಲೈವ್ ಯೆಂಡ್ ಮಾಡಿದರು.