ಹೆಂಡತಿಯ ಕೊನೆ ಮೆಸೇಜ್ ಮಾತು ನೋಡಿ ವಿಜಯ್ ಭಾವುಕ..! ಮಗನ ಬಗ್ಗೆ ಎನ್ ಹೇಳಿದ್ದರು ನೋಡಿ
ಸ್ಪಂದನ ಮತ್ತು ವಿಜಯ ರಾಘವೇಂದ್ರ ಅವರು ಸಾಕಷ್ಟು ಜನರಿಗೆ ಮಾದರಿಯ ರೀತಿ ದಂಪತಿಗಳಾಗಿ ಜೀವನ ಸಾಗಿಸುತ್ತಿದ್ದವರು..ಹೌದು ಇವರ ಜೋಡಿ ನೋಡಿದವರು ನಿಜಕ್ಕೂ ಗಂಡ ಹೆಂಡತಿ ಅಂದರೆ ಇವರಂತಿರಬೇಕು ಎನ್ನುವಂತೆ ಜನರ ಬಾಯಿಯಲ್ಲಿ ಮೆಚ್ಚುಗೆಯ ಮಾತುಗಳನ್ನು ಆಡಿಸಿಕೊಂಡಿದ್ದ ಜೋಡಿ ಇದು. ಆ ದೇವರಿಗೆ ಇವರ ಜೋಡಿ ನೋಡಿ ಹೊಟ್ಟೆ ಕಿಚ್ಚು ಬಂದಿತ್ತೋ ಗೊತ್ತಿಲ್ಲ, ಅಥವಾ ಬೇರೆ ಯಾರದಾದರೂ ಕಣ್ಣು ಬಿತ್ತೋ, ಅಥವಾ ಈ ಜೋಡಿಗೆ ದೃಷ್ಟಿ ತಾಕಿತ್ತೋ ಅದು ಕೂಡ ಗೊತ್ತಿಲ್ಲ, ಅತಿ ಸಣ್ಣ ವಯಸ್ಸಿಗೆ ಸ್ಪಂದನ ಅವರು ಇದ್ದಕ್ಕಿದ್ದಂತೆ ಸಡೆನ್ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ನಿಜಕ್ಕೂ ಇದು ತುಂಬಾ ಕಷ್ಟದ ವಿಚಾರ..ಸ್ಪಂದನ ಅವರ ಅಗಲಿಕೆಯನ್ನ ವಿಜಯ ರಾಘವೇಂದ್ರ ಅವರು ಅದು ಹೇಗೆ ತಡೆದುಕೊಂಡಿದ್ದಾರೋ ಏನೋ ಅವರ ನೋವು ಅವರಿಗೆ ಗೊತ್ತು. ಎಷ್ಟರಮಟ್ಟಿಗೆ ಆಳವಾಗಿ ಅವರಲ್ಲಿ ಪ್ರೀತಿಯ ಹೆಂಡತಿಯ ಅಗಲಿಕೆ ನೋವು ಬೇರೂರಿದೆ ಆ ದೇವರೇ ಬಲ್ಲ.
ಹೌದು ಸ್ಪಂದನ ಅಗಲಿಕೆ ನಂತರ ಅವರ ಅಂತಿಮ ಕಾರ್ಯದ ಎಲ್ಲಾ ವಿಧಿ ವಿಧಾನಗಳು ಕೂಡ ಈಗಾಗಲೇ ಮುಗಿದಿವೆ. ಸ್ಪಂದನ ಅವರು ಇನ್ನೂ ನೆನಪು ಮಾತ್ರ. ಇತ್ತೀಚಿಗೆ ಪುಣ್ಯತಿಥಿ ಕಾರ್ಯ ಕೂಡ ಜರುಗಿತು. ಹೌದು ಸ್ಪಂದನ ಅವರನ್ನು ಕಳೆದುಕೊಂಡಿರುವ ನಟ ವಿಜಯ ರಾಘವೇಂದ್ರ ಮತ್ತು ಅವರ ಪುತ್ರ ಶೌರ್ಯ ಇದೀಗ ನೋವಿನಲ್ಲಿ ಇದ್ದಾರೆ.. ಅವರಿಗೆ ಸಾಂತ್ವನ ಹೇಳಿದರೂ ಕೂಡ ಆ ನೋವಿನಿಂದ ಹೊರಬರಲು ನಿಜ ತುಂಬಾ ಕಷ್ಟಕರವಾಗಿರುತ್ತದೆ. ಏನೇ ಇರಲಿ ವಾಸ್ತವ ಅರಿತು ಜೀವನ ಮಾಡಬೇಕು, ಎಲ್ಲರೂ ಕೂಡ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು, ಅವರು ಮುಂದೆ ಅಂದರೆ ನಾವು ಹಿಂದೆ ಹೋಗಲೇಬೇಕು, ಇದು ಜಗತ್ ನಿಯಮ, ಯಾರು ಕೂಡ ಇದನ್ನ ಬದಲಾಯಿಸಲಾಗದು. ವಿಜಯ ರಾಘವೇಂದ್ರ ಮತ್ತು ಅವರ ಮಡದಿ ಸ್ಪಂದನ ಅವರು ಹೆಚ್ಚು ಪ್ರೀತಿಯಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡುತ್ತಿದ್ದರು.
ಸ್ಪಂದನ ಅವರು ಜೀವನದಲ್ಲಿ ದೊಡ್ಡ ನಿರ್ಮಾಪಕಿ ಆಗಬೇಕು ಎನ್ನುವ ಕನಸನ್ನು ಹೊಂದಿದ್ದರು. ಮಗ ಶೌರ್ಯನ ಬಗ್ಗೆ ಹೆಚ್ಚು ಕನಸು ಕಂಡಿದ್ದರು ಸ್ಪಂದನ. ಅವನಿಗೆ ತಮ್ಮ ಸಿನಿಮಾ ಸಂಸ್ಥೆಯ ಮೂಲಕವೆ ಮೊದಲ ಸಿನಿಮಾವನ್ನು ನಿರ್ಮಾಣ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದರಂತೆ..ಹೌದು ಇದೀಗ ಸ್ಪಂದನ ಅವರು ಸಾವನ್ನಪ್ಪುವ ಮುನ್ನ ವಿಜಯ ರಾಘವೇಂದ್ರ ಅವರಿಗೆ ವಾಟ್ಸಪ್ ಮೂಲಕ ಕಳಿಸಿದ ಕೊನೆಯ ಮೆಸೇಜ್ ಏನು ಎಂಬುದಾಗಿ ತಿಳಿದು ಬಂದಿದೆ.. ಈ ವಿಡಿಯೋದಲ್ಲಿ ಕೇಳಿ ಬಂದಿರುವ ಪ್ರಕಾರ ವಿಜಯವರಿಗೆ ಸ್ಪಂದನ ಅವರು ನೀವು ಶೂಟಿಂಗ್ ಮುಗಿಸಿ ಬೇಗನೆ ಬನ್ನಿ, ನಾನು ನಿಮ್ಮನ್ನು ಎದುರು ನೋಡುತ್ತಿದ್ದೇನೆ, ಶೌರ್ಯನನ್ನು ಚೆನ್ನಾಗಿ ನೋಡಿಕೊಳ್ಳಿ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುವಂತೆ ಅನಿಸುತ್ತಿದೆ, ಎಂದು ಹೇಳಿದ್ದರಂತೆ. ( video credit : Kannada taja suddi )