ಹೆಂಡತಿಯ ಕೊನೆ ವಾಟ್ಸಪ್ ಮೆಸೇಜ್ ನೋಡಿ ಮತ್ತೆ ಕಣ್ಣೀರಿಟ್ಟ ರಾಘು..! ಅಸಲಿಗೆ ಅಂಥದ್ದೇನಿತ್ತು ಮೆಸೇಜ್
ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಹೌದು, ಇಷ್ಟು ಸಣ್ಣ ವಯಸ್ಸಿಗೆ ಸ್ಪಂದನ ವಿಜಯ ರಾಘವೇಂದ್ರ ಅವರು ಎಲ್ಲರನ್ನೂ ಬಿಟ್ಟು ದೂರವಾಗುತ್ತಾರೆ ಎಂದು ಯಾರೂ ಕೂಡ ಊಹೆ ಮಾಡಿರಲಿಲ್ಲ. ಸ್ಪಂದನ ಅವರು ಇದ್ದಕ್ಕಿದ್ದಂತೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎಂದರೆ, ಅದು ಈ ಸಣ್ಣ ವಯಸ್ಸಿನಲ್ಲಿ ಎಂದಾದರೆ ಜೀವನದಲ್ಲಿ ಇದೇನಿದು ಹೀಗೆ ಆಗುತ್ತದೆ ಎಂದು, ಕೆಲವರು ಚರ್ಚೆ ಮಾಡುವಂತಾಗಿದೆ. ಜೀವನದಲ್ಲಿ ಯಾವುದೂ ಕೂಡ ಶಾಶ್ವತ ಅಲ್ಲ ಎಂದು ಪದೇ ಪದೇ ಇಂತಹ ಘಟನೆಗಳು ಎಲ್ಲರ ಮನಸಿಗೆ ಗಾಥ ಮಾಡುತ್ತಿವೆ.
ಹೌದು ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಅವರ ನಡುವೆ ಅದೆಂಥ ಪ್ರೀತಿ ವಾತ್ಸಲ್ಯ ಬಾಂಧವ್ಯ ಇತ್ತು ಅಂತ ಹೇಳುವುದಾದರೆ ವಿಜಯವರಿಗೆ ಹೆಂಡತಿಯೇ ಮೊದಲು, ನಂತರ ಮಿಕ್ಕಿದ್ದೆಲ್ಲ ಎಂಬಂತೆ ಹೆಚ್ಚು ಪ್ರೀತಿಯಿಂದ ತಮ್ಮ ಕಣ್ಣಲ್ಲಿ ಕಣ್ಣನಿಟ್ಟುಕೊಂಡು ಸ್ಪಂದನ ಅವರನ್ನ ನೋಡಿಕೊಳ್ಳುತ್ತಿದ್ದರು. ಸ್ಪಂದನ ಅವರನ್ನ ಖುಷಿಯಾಗಿಡುವುದಕ್ಕೆ ಅವರ ತಂದೆ ತಾಯಿ ಹೆಚ್ಚು ಶ್ರಮಿಸಿದ್ದಾರೆ..ನಂತರದಲ್ಲಿ ಬಂದ ಪತಿ ವಿಜಯ್ ರಾಘವೇಂದ್ರ ಅವರು ಮಾಡಿಸಿಟ್ಟ ಚಿನ್ನದಂತೆ ಸ್ಪಂದನ ಅವರಿಗೆ ದೊರಕಿದ್ದರು. ಆದ್ರೆ ಈಗ ಸ್ಪಂದನ ಅವರು ದೈಹಿಕವಾಗಿ ದೂರವಾಗಿದ್ದಾರೆ. ವಿಜಯ ರಾಘವೇಂದ್ರ ಅವರು ಅವರ ಪತ್ನಿ ಸ್ಪಂದನಾರ ನೆನಪಿನಲ್ಲಿಯೆ ಮಗನ ಮುಖ ನೋಡಿಕೊಂಡು ಜೀವನ ಸಾಗಿಸಬೇಕಾದಂತಹ ಪರಿಸ್ಥಿತಿ ಬಂದೋದಗಿದೆ. ಏನು ಮಾಡಲು ಆಗುವುದಿಲ್ಲ ವಿಧಿಯ ಮುಂದೆ ನಾವು ಎಲ್ಲರೂ ಕೂಡ ಸಣ್ಣವರೇ.
ಈಗ ವಿಜಯ್ ಅವರು ಅವರ ಹೆಂಡತಿಯ ವ್ಯಾಟ್ಸಪ್ ಮೆಸೇಜ್ ಗಳನ್ನು ನೋಡುತ್ತಾ ತುಂಬಾ ಕಣ್ಣೀರು ಹಾಕುತ್ತಿದ್ದಾರಂತೆ. ಸ್ಪಂದನ ಅವರು ಸಾವನ್ನಪ್ಪುವ ಎರಡು ದಿನ ಮುಂಚೆ ವಿದೇಶಕ್ಕೆ ತೆರಳುವಾಗ ನಿಮ್ಮನ್ನು ಬಿಟ್ಟು ನಾವಷ್ಟೇ ಹೋಗುತ್ತಿದ್ದೇವೆ ಎಂಬಂತೆ ಸ್ಪಂದನ ಅವರು ನಟ ವಿಜಯ್ ಅವರಿಗೆ ವಾಟ್ಸಪ್ ಮೂಲಕ ಮೆಸೇಜ್ ಮಾಡಿದ್ದರಂತೆ ಎಂದು ಅವರ ಸ್ನೇಹಿತರ ವಲಯದಲ್ಲಿ ಈ ಮಾತುಗಳು ಕೇಳಿ ಬಂದಿವೆ..ಹೌದು ಇದನ್ನು ನೋಡಿ ವಿಜಯ ರಾಘವೇಂದ್ರ ಅವರು ನನ್ನ ಅಚ್ಚು ನನ್ನನ್ನು ಬಿಟ್ಟು ಹೋಗುತ್ತೇನೆ ಅಂತ ಮೆಸೇಜ್ ಮಾಡಿದ್ದು, ಅದು ಈ ರೀತಿ ಹೋಗುತ್ತಾರೆ ಎಂದು ನಾ ಕೊಂಡಿರಲಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಈ ವಿಡಿಯೋ ಮೂಲಕ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಹಾಗೆ ಈ ವಿಡಿಯೋದಲ್ಲಿರುವ ಮಾಹಿತಿಯನ್ನೇ ನಾವು ಲೇಖನದ ಮೂಲಕ ಬರೆದಿದ್ದೇವೆ. ವಿಡಿಯೋ ನೋಡಿ ಇನ್ನೊಮ್ಮೆ ವಿಚಾರವನ್ನು ಖಚಿತಪಡಿಸಿಕೊಳ್ಳಿ, ಧನ್ಯವಾದಗಳು. ( video credit : Focus )