ಸ್ಪಂದನ ಸ್ಪಂದನ ಎಂದು ಮನೆಯ ಬಾಗಿಲು ಬಳಿಯೇ ಕುಳಿತ ರಾಘು..! ಇಲ್ಲಿದೆ ಕಣ್ಣೀರು ತರಿಸುವ ದೃಶ್ಯ
ಯಾರ ಜೀವನ ಯಾವಾಗ ಅದು ಹೇಗೆ ಎಲ್ಲಾ ಚೆನ್ನಾಗಿದ್ದ ವೇಳೆಯೇ ಊಹಿಸಲಾಗದಂತೆ ಕಷ್ಟಗಳು ಎದುರಾಗುತ್ತವೆ ಎಂಬುದಾಗಿ ನಾವು ಹೇಳಲು ಅಸಾಧ್ಯ. ಹೌದು ವಿಧಿ ಬರಹ ಅಂದ್ರೆ ಹಾಗೆ. ಜೀವನದಲ್ಲಿ ಯಾರು ಎಷ್ಟು ದಿನ ಈ ಭೂಮಿ ಮೇಲೆ ಇರಬೇಕು ಎಂಬುದಾಗಿ ಮೊದಲೇ ದೇವರು ನಿರ್ಧಾರ ಮಾಡಿರುವಂತೆ ಕೆಲವು ಘಟನೆಗಳು ನಮ್ಮ ಕಣ್ಣು ಮುಂದೆ ನಡೆದು ಕಣ್ಣೀರು ತರಿಸುತ್ತವೆ. ನಟ ವಿಜಯ ರಾಘವೇಂದ್ರ ಅವರು ಡಿಕೆಡಿ ಕಾರ್ಯಕ್ರಮದಲ್ಲಿ ಅದೆಷ್ಟು ಸುಂದರವಾಗಿ ಸದಾ ನಗು ಮುಖ ಇಟ್ಟುಕೊಂಡು, ನಗು ನಗುತ್ತಾ ಎಲ್ಲರೂಟ್ಟಿಗೆ ಚೆನ್ನಾಗಿ ಮಾತನಾಡುತ್ತಾ ಸ್ನೇಹದಿಂದ ಬೆರೆಯುತ್ತಿದ್ದ ವ್ಯಕ್ತಿ ಅವರು. ಅವರ ಜೀವನದ ಬಾಳಿನಲ್ಲಿ ಇದೀಗ ಬಿರುಗಾಳಿಗೆ ಬೀಸಿದೆ.
ಅವರು ಎಂದಿಗೂ ಕೂಡ ನನ್ನ ಜೀವನದ ಪ್ರೀತಿಯ ಮಡದಿ ಇಷ್ಟು ಬೇಗನೆ ನಮ್ಮನೆಲ್ಲ ಬಿಟ್ಟು ದೈಹಿಕವಾಗಿ ದೂರವಾಗುತ್ತಾರೆ ಎಂಬುದಾಗಿ ಅಂದುಕೊಂಡಿರಲಿಲ್ಲ. ಆದರೆ ವಿಧಿ ಮುಂದೆ ಎಲ್ಲವೂ ಶೂನ್ಯ ಎಂಬಂತೆ ಇದೀಗ ಅವರ ಮಡದಿ ಸ್ಪಂದನ ಅವರು ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ.. ಹೌದು, ಜೀವನ ಇರುವುದು ಒಂದೇ, ಯಾವಾಗ ಯಾರ ಜೀವನದಲ್ಲಿ ಅದೆಂತಹ ಕಷ್ಟದ ದಿನಗಳು ಬರುತ್ತವೆ, ಯಾರ ಜೀವನದಲ್ಲಿ ಅವರ ಪ್ರೀತಿ ಪಾತ್ರದಂತಹ ವ್ಯಕ್ತಿಗಳು ಯಾವಾಗ ಕಣ್ಮರೆ ಆಗುತ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ಇರುವಷ್ಟು ದಿನ ನಗುನಗುತ್ತಾ ಇರಬೇಕು.
ಹೌದು ನಟ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಹೃದಯಘಾತಕ್ಕೆ ಒಳಗಾಗಿ ಇದೀಗ ಕೇವಲ ನೆನಪಾಗಿ ಉಳಿದರು. ಅವರ ಕುಟುಂಬ ಸ್ಪಂದನಾರ ಅಗಲಿಕೆಯನ್ನು ನಿಜಕ್ಕೂ ಒಪ್ಪಿಕೊಳ್ಳುತ್ತಿಲ್ಲ. ಅಷ್ಟರಮಟ್ಟಿಗೆ ಅವರಿಗೆ ನೋವಾಗಿದೆ ಎಂದು ಹೇಳಬಹುದು. ನಿನ್ನೆ ಸ್ಪಂದನ ಅವರ ಉತ್ತರಕ್ರಿಯೆ ಮುಗಿಸಿ ಮನೆಗೆ ಬಂದ ವಿಜಯ ರಾಘವೇಂದ್ರ ಅವರು ನೋವಿನಲ್ಲಿಯೇ ಮನೆಯ ಬಾಗಿಲ ಬಳಿ ಕುಳಿತಿದ್ದಾರೆ. ಅದರ ವಿಡಿಯೋ ತುಣುಕನ್ನ ನೀವು ಈ ಲೇಖನದಲ್ಲಿ ಗಮನಿಸಬಹುದು. ಅದೆಂತಹ ಕಲ್ಲು ಮನಸ್ಸಿನ ವ್ಯಕ್ತಿಗಾದರೂ ಇಂತಹ ಸಂದರ್ಭದಲ್ಲಿ ನಿಜಕ್ಕೂ ಕಣ್ಣೀರು ಬರುತ್ತದೆ. ಏನೇ ಇರಲಿ ವಾಸ್ತವವನ್ನು ನಟ ವಿಜಯ್ ರಾಘವೇಂದ್ರ ಅವರು ಆದಷ್ಟು ಬೇಗನೆ ಒಪ್ಪಿಕೊಂಡು, ಮರಳಿ ಮೊದಲಿನಂತೆ ನಗು ನಗುತ್ತಾ ಮಗನ ಮುಖ ನೋಡಿಕೊಂಡು ಮಡದಿ ನೆನಪಿನಲ್ಲಿ ಜೀವನ ಸಾಗಿಸಬೇಕು..ಅವರ ಅಗಲಿಕೆ ನೋವನ್ನ ತಡೆದುಕೊಳ್ಳುವ ಶಕ್ತಿ ಆ ದೇವರು ಇವರ ಕುಟುಂಬಕ್ಕೆ ಮತ್ತು ರಾಘು ಅವರಿಗೆ ನೀಡಲಿ ಎಂದು ನಾವು ಕೂಡ ಪ್ರಾರ್ಥಿಸೋಣ. ಈ ವಿಡಿಯೋ ನೋಡಿ ಮತ್ತು ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೀವು ದೇವರಲ್ಲಿ ಪ್ರಾರ್ಥಿಸಿ ಧನ್ಯವಾದಗಳು...
VIDEO CREDIT : Cinibuzz