ಲೈವ್ ಬಂದು ಎರಡನೇ ಮದುವೆ ಬಗ್ಗೆ ಸಿಹಿ ಸುದ್ದಿ ತಿಳಿಸಿದ ವರ್ತುರ್ ಸಂತೋಷ್ ;ಹುಡುಗಿ ಯಾರು ನೋಡಿ

ಹಳ್ಳಿಕಾರ್ ಒಡೆಯ ಎಂದು ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ್ದ ಅವರು ಬಳಿಕ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ತಮ್ಮ ಡೈಲಾಗ್‌ಗಳಿಂದಲೇ ಜನರ ಮನಗೆದ್ದಿರುವ ಅವರು ಕೊನೆಗೂ ಶುಭಸುದ್ದಿ ನೀಡಿದ್ದಾರೆ. ಹಳ್ಳಿಕಾರ್ ಒಡೆಯ ಹಸೆಮಣೆ ಏರಲು ಸಜ್ಜಾಗಿದ್ದು, ಈ ಬಗ್ಗೆ ಅವರು ಖುದ್ದಾಗಿ ಮದುವೆ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ವರ್ತೂರು ಸಂತೋಷ್ ಅವರು ತಮ್ಮ ಮದುವೆ ವಿಚಾರವನ್ನು ಖಚಿತಪಡಿಸಿದ್ದಾರೆ. ಅವರ ಸ್ನೇಹಿತರೊಬ್ಬರು ವರ್ತೂರು ಸಂತೋಷ್ ಅವರು ಇದೇ ವರ್ಷ ಮದುವೆಯಾಗುತ್ತಿದ್ದಾರೆ, ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಮದುವೆ ವಿಚಾರ ಬಹಿರಂಗಪಡಿಸಿದ್ದಾರೆ. ಇದಕ್ಕೆ ಸಂತೋಷ್ ಅವರು ಹೌದು ಎಂದು ಹೇಳಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಹಳ್ಳಿಕಾರ್ ಒಡೆಯ ಎಂದೇ ಫೇಮಸ್ ಆದ ಸಂತೋಷ್, ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇನ್ನೇನು ಇದೇ ವರ್ಷದಲ್ಲಿ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ತಾವೇ ಹೇಳಿಕೊಂಡ ವಿಡಿಯೋ ಅವರ ಇನ್‌ಸ್ಟಾಗ್ರಾಂನಲ್ಲಿದೆ.ವರ್ತೂರು ಸಂತೋಷ್ ಅವರ ಸ್ನೇಹಿತ ಶ್ರೀನಿವಾಸ್ ಎಂಬುವವರು ಖುದ್ದು ಸಂತೋಷ್ ಅವರ ಜೊತೆಗೆ ನಿಂತು, ತಿಗಳರ ತಮಿಳು ಭಾಷೆಯಲ್ಲಿ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದೇ ವರ್ಷ ನಮ್ಮ ವರ್ತೂರು ಸಂತೋಷ್ ಮದುವೆ ಆಗುವುದು ಖಚಿತ. ಎಲ್ಲ ನಮ್ಮ ತಿಗಳ ವನ್ಯ ಕುಲ ಕ್ಷತ್ರೀಯ ಜನರು, ನಮ್ಮ ವರ್ತೂರು ಸಂತೋಷ್‌ಗೆ ಆಶೀರ್ವಾದ ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ನೂರು ವರ್ಷ ಖುಷಿಯಾಗಿರಬೇಕು ಎಂದು ನಾನು ಈ ಮೂಲಕ ಕೇಳಿಕೊಳ್ಳುತ್ತೇನೆ. ಜೈ ಹಳ್ಳಿಕಾರ್ ಎಂದಿದ್ದಾರೆ ಶ್ರೀನಿವಾಸ್.
ಶ್ರೀನಿವಾಸ್ ಮಾತನಾಡಿದ ಬಳಿಕ, ಅದೇ ವಿಡಿಯೋದಲ್ಲಿ ತಮ್ಮ ಮದುವೆಗೆ ಬಂದು ಹರಸಿ ಎಂದು ಸ್ವತಃ ವರ್ತೂರು ಸಂತೋಷ್ ತಿಗಳರ ಭಾಷೆಯಲ್ಲಿಯೇ ಮನವಿ ಮಾಡಿದ್ದಾರೆ. "ನಮ್ಮ ಸಮುದಾಯದಿಂದ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು ತುಂಬಾ ಕಡಿಮೆ. ನಾನು ಸೋಷಿಯಲ್ ಮೀಡಿಯಾ ಜೊತೆಗೆ ಬಿಗ್ ಬಾಸ್ ತನಕ ಹೋಗಿದ್ದೇನೆ. ನಮ್ಮ ಸಮುದಾಯದವರ ಆಶೀರ್ವಾದ ಯಾವಾಗಲೂ ನನ್ನ ಮೇಲಿರಲಿ. ಬಿಗ್ ಬಾಸ್‌ನಲ್ಲಿದ್ದಾಗ ಇಡೀ ಕರ್ನಾಟಕದ ಜನತೆ ಆಶೀರ್ವಾದ ಮಾಡಿದ್ದರು. ಈಗಲೂ ಆಶೀರ್ವಾದ ಮಾಡಿ" ಎಂದು ವಿಡಿಯೋದಲ್ಲಿ ಕೋರಿಕೊಂಡಿದ್ದಾರೆ ವರ್ತೂರು ಸಂತೋಷ್. ಅಂದಹಾಗೆ ಮದುವೆ ಯಾವಾಗ, ಹುಡುಗಿ ಯಾರು ಎಂಬಿತ್ಯಾದ ವಿವರವನ್ನು ಅವರು ನೀಡಿಲ್ಲ.