ವೈಷ್ಣವಿ ಗೌಡ ಕತ್ತಿನಲ್ಲಿ ತಾಳಿ ನೋಡಿ ಫ್ಯಾನ್ಸ್ ಶಾಕ್ : ಯಾವಾಗ ಮದುವೆ ಆಯಿತು ಎಂದ ಫ್ಯಾನ್ಸ್ ?

ವೈಷ್ಣವಿ ಗೌಡ ಕತ್ತಿನಲ್ಲಿ ತಾಳಿ ನೋಡಿ ಫ್ಯಾನ್ಸ್ ಶಾಕ್ :  ಯಾವಾಗ ಮದುವೆ ಆಯಿತು ಎಂದ ಫ್ಯಾನ್ಸ್ ?

ನಟಿ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಲೇಟ್ ಪೋಸ್ಟ್ ಎನ್ನುತ್ತಾ ನಟಿ, ತ್ರಿವೇಣಿ ಸಂಗಮದಲ್ಲಿ (Triveni Sangama) ಮಿಂದೆದ್ದ ಫೋಟೊ ಹಾಗೂ ಹಣೆ ಮೇಲೆ ನಾಮ ಹಾಕಿರುವ ಫೋಟೊ ಶೇರ್ ಮಾಡಿಕೊಂಡಿದ್ದರು. ಈ ಫೋಟೊಗಳಲ್ಲಿ ವೈಷ್ಣವಿ ಕುತ್ತಿಗೆಯಲ್ಲಿ ತಾಳಿ ಇದ್ದು, ಇದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 


ಸೀತಾರಾಮ ಸೀರಿಯಲ್ ನ ಹೊಸ ಪ್ರೊಮೋ ನೋಡಿರದ ಒಂದಿಷ್ಟು ಜನರು, ವೈಷ್ಣವಿ ಗೌಡ ಹಾಕಿರುವ ಫೋಟೊಗಳಲ್ಲಿ ನಟಿಯ ಕುತ್ತಿಗೆಯಲ್ಲಿ ತಾಳಿ ನೋಡಿ ಶಾಕ್ ಆಗಿದ್ದಾರೆ. ನಿಮಗೆ ಮದುವೆ ಯಾವಾಗ ಆಯ್ತು? ತಾಳಿ ಕುತ್ತಿಗೆಯಲ್ಲಿ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮಷ್ಟು ಲಕ್ಷಣವಾಗಿ ಸೀರೆಯುಟ್ಟುಕೊಂಡು ಕುಂಭ ಸ್ನಾನ ಮಾಡಿ ಬಂದವರು ಯಾರೂ ಇಲ್ಲ ಎಂದಿದ್ದಾರೆ. ಇದಕ್ಕೆ ಉತ್ತರವಾಗಿ ಮತ್ತೊಂದಿಷ್ಟು ಜನ ಇದೆಲ್ಲವೂ ಸೀತಾ ರಾಮ ಸೀರಿಯಲ್ ಗಾಗಿ ನಡೆದದ್ದು ಎಂದು ಉತ್ತರವನ್ನೂ ನೀಡಿದ್ದಾರೆ. 

ಈಗಾಗಲೇ ಕುಂಭಮೇಳದಲ್ಲಿ ಸೀತಾ ರಾಮ ಮತ್ತು ಸುಬ್ಭಿಯ ತ್ರಿವೇಣಿ ಸಂಗಮದ ಕುರಿತು ಪ್ರೊಮೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸುಬ್ಬಿ ಕರೆದುಕೊಂಡು, ಸೀತಾ ಹಾಗೂ ರಾಮ ತ್ರಿವೇಣಿ ಸಂಗಮದಲ್ಲಿ ಮಿಂದಿದ್ದಾರೆ. ಅಷ್ಟೇ ಅಲ್ಲ, ಸಿಹಿ ನಾಗ ಸಾಧುವೊಬ್ಬರ ನೆರವಿನಿಂದ ತನ್ನ ಅಮ್ಮ-ಅಪ್ಪನನ್ನು ಸ್ಪರ್ಶಿಸುವಂತಹ ಸೌಭಾಗ್ಯವನ್ನು ಸಹ ಪಡೆದಿದ್ದಾಳೆ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಇಷ್ಟು ದೊಡ್ಡ ಪ್ರಯೋಗ ನಡೆಯುತ್ತಿದ್ದು, ವೀಕ್ಷಕರು ಇದನ್ನು ನೋಡಿ ತುಂಬಾನೇ ಖುಷಿಯಾಗಿದ್ದಾರೆ.