ವೈಷ್ಣವಿ ಗೌಡ ಅವರ ಮದುವೆ ಮುರಿದು ಬಿದ್ದ ಬಗ್ಗೆ ಅವರು ಲೈವ್ ಬಂದು ಏನು ಹೇಳಿದ್ದಾರೆ : ವಿಡಿಯೋ ನೋಡಿ
ಇತ್ತೀಚಿಗಷ್ಟೇ ವೈಷ್ಣವಿ ಗೌಡ ಅವರ ಮದುವೆ ಮುರಿದು ಬಿದ್ದಿದೆ . ಅವರ ಅಭಿಮಾನಿಗಳು ಇದರ ಬಗ್ಗೆ ತುಂಬಾ ಬೇಜಾರು ಮಾಡಿ ಕೊಂಡಿದ್ದರು ಮತ್ತು ನಾನಾ ತರಹ ಕಾಮೆಂಟ್ಸ್ ಹಾಕಿದ್ದರು . ವೈಷ್ಣವಿ ಗೌಡ ಅವರು ಡಿಪ್ರೆಷನ್ಗೆಹೋಗಿದ್ದಾರೆ ಮತ್ತು ಅವರು ಇನ್ನು ಮುಂದೆ ಮದುವೆ ಬಗ್ಗೆ ಏನು ಯೋಚನೆ ಮಾಡುವುದಿಲ್ಲ ಅಂತ ಅಂದು ಕೊಂಡಿದ್ದರು. ಆದರೆ ಈಗ ವೈಷ್ಣವಿ ಗೌಡ ಲೈವ್ ಬಂದು ಏನು ಹೇಳಿದ್ದಾರೆ : ವಿಡಿಯೋ ನೋಡಿ
ವೈಷ್ಣವಿ ಗೌಡ ಹೇಳಿದ್ದೇನು?
"ನಾನು ಡಿಪ್ರೆಶನ್‌ನಲ್ಲಿದ್ದೆ, ಬೇಜಾರಾಗಿ ಟ್ಯಾಟೂ ಹಾಕಿಸಿಕೊಂಡೆ ಅಂತ ಕೆಲವರು ಹೇಳಿದ್ದಾರೆ. ನನಗೆ ಬೇಜಾರಾಗಿತ್ತು, ಆದರೆ ನಾನು ಡಿಪ್ರೆಶನ್‌ಗೆ ಹೋಗಿರಲಿಲ್ಲ. ನನಗೆ ಸಿಕ್ಕಿರುವ ಬೆಂಬಲಕ್ಕೆ ಧನ್ಯವಾದಗಳು. ಈ ಘಟನೆಗಳೆಲ್ಲ ನಡೆಯುವುದಕ್ಕೂ ಮುನ್ನ 8 ನೇ ತಾರೀಖಿಗೆ ನಾನು ಟ್ಯಾಟೂ ಹಾಕಿಸಿಕೊಂಡಿದ್ದೆ. ಜೀವನದಲ್ಲಿ ಏನೇ ನಡೆದರೂ ಕೂಡ ನಾನು ಪಾಸಿಟಿವ್ ಕಡೆಗೆ ನೋಡುತ್ತೇನೆ" ಎಂದು ವೈಷ್ಣವಿ ಗೌಡ ಹೇಳಿದ್ದಾರೆ.
"ಮದುವೆ ಇಂದಿಗೂ ಕೂಡ ನನ್ನ ದೊಡ್ಡ ಕನಸು. ಜೀವನಕ್ಕೆ ನಮಗೆ ಏನು ಕೊಡಬೇಕು? ಏನು ಕೊಡಬಾರದು ಅಂತ ಗೊತ್ತು ಅನಿಸತ್ತೆ. ನಾನು ನನ್ನ ಜೀವನವನ್ನು ನಂಬುತ್ತೇನೆ. ನಾನಾ? ಜೀವನಾನಾ ಅಂತ ನೋಡೇಬಿಡುವೆ. ಕನಸನ್ನು ನನಸು ಮಾಡಿಕೊಳ್ತೀನಿ. ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ" ಎಂದು ವೈಷ್ಣವಿ ಗೌಡ ಹೇಳಿದ್ದಾರೆ.