ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಮದುವೆ ಯಾವಾಗ ಎಂದು ತಿಳಿಸಿದ ವೈಷ್ಣವಿ ಗೌಡ;

ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಮದುವೆ ಯಾವಾಗ ಎಂದು ತಿಳಿಸಿದ ವೈಷ್ಣವಿ ಗೌಡ;

ಸೀತಾರಾಮ ಸೀರಿಯಲ್​ ಸೀತಾ ಅರ್ಥಾತ್​ ನಟಿ ವೈಷ್ಣವಿ ಗೌಡ ಅವರ ಮದುವೆಯ ಬಗ್ಗೆ ಇದಾಗಲೇ ಸಾಕಷ್ಟು ಬಾರಿ ಅಭಿಮಾನಿಗಳು ತಲೆ ಕೆಡಿಸಿಕೊಂಡದ್ದು ಇದೆ. ಮದ್ವೆ ಯಾವಾಗ ಎನ್ನುವ ಪ್ರಶ್ನೆ ನಟಿಗೆ ಎದುರಾಗಿ ಸುಸ್ತಾಗಿದ್ದೂ ಇದೆ. ಪದೇ ಪದೇ ಇದೇ ಪ್ರಶ್ನೆಯನ್ನು ಯಾಕೆ ಕೇಳ್ತೀರಾ ಎಂದು ವೈಷ್ಣವಿ ಗೌಡ ಅವರು ಬೇಸರಿಸಿಕೊಂಡದ್ದೂ ಆಗಿದೆ. ಆದರೂ ಅಭಿಮಾನಿಗಳು ಅದೇ ಪ್ರಶ್ನೆಯನ್ನು ಕೇಳುವುದೂ ಅಲ್ಲದೇ, ಸೀತಾರಾಮ ಸೀರಿಯಲ್​ ರಾಮ್​ನೇ ರಿಯಲ್​ ಲೈಫ್​ನಲ್ಲಿಯೂ ಗಂಡನಾಗಲಿ ಎಂದು ಹಾರೈಸುವವರೂ ಇದ್ದಾರೆ.

ಸೋ ನಿಂದು ಯಾವಾಗ ಮದುವೆ ಕರ್ನಾಟಕ ಜನತೆಗೆ ಇರೋದು ಒಂದೇ ಪ್ರಶ್ನೆ ನಮ್ಮ ಹೊಟ್ಟೆ ಎಷ್ಟು ಉರಿಸುತ್ತವರು ವೈಷ್ಣವಿ ಅವರ ಮದುವೆ ಯಾವಾಗ ಯಾವಾಗ ಜನಕ್ಕೆ ಏನಾದ್ರು ಒಂದು ಸಿಹಿ ಸುದ್ದಿ ಕೊಡ್ತೀಯಾ ಇಷ್ಟರಲ್ಲಿ ಏನಾದ್ರೂ ಹಾ ನೋ ಕಮೆಂಟ್ಸ್ ಅಂತ ಅವಳ ಮೈಂಡ್ ವಾಯ್ಸ್ ಗಾಯ್ಸ್ ನಾನು ಆಮೇಲೆ ಸಿಕ್ತೀನಿ ನಿಮಗೇನು ಅನ್ಸುತ್ತೆ ಅವಳು ನೆಕ್ಸ್ಟ್ ಇಯರ್ ಮದುವೆ ಆಗ್ಬೇಕಾ ಈ ವರ್ಷನೇ ಮದುವೆ ಆಗ್ಬೇಕಾ ನನ್ನ ಮಗು ಅನಿಸಿಕೆ ಅನಿಸಿಕೆ ಒಂದು ಅನಿಸಿಕೆ ಹೇಳಿ ಅಶೋಕ್ ಆಗ್ಲಿ ಆದಷ್ಟು ಬೇಗ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ವರ್ಷ ಗಿರಿಸಲ್ಲ ನನಗೆ ಗೊತ್ತಿಲ್ಲ ಮೋಸ್ಟ್ ಪ್ರಾಬಬ್ಲಿ ಕೈಯಲ್ಲಿ ಇವರ ಕೈಯಲ್ಲೂ ಇರಲ್ಲ ನೀವು ಮಾತಾಡಂಗಿಲ್ಲ ಅಂತ ಸಚಿತ್ ಅದಕ್ಕೆ ಆಗ್ಲಿ ಆದಷ್ಟು ಬೇಗ ಆಗ್ಲಿ ಒಳ್ಳೇದಾಗಲಿ ವೈಷ್ಣವಿ ಸದಾ ಖುಷಿಯಾಗಿರಿ ಮತ್ತೆ ವೈಶು ಸಿಹಿ ಸುದ್ದಿ ಯಾವಾಗ ಕೊಡ್ತೀಯಾ ಹೇ ನನ್ನ ಬ್ಲಾಗ್ ಅಲ್ಲಿ ಹಾಕ್ತೀನಿ ನಿಮ್ಮ ಬ್ಲಾಗ್ ಅಲ್ಲಿ ಅಲ್ಲ ಯಾಕೆ ಹೇಳಿಲ್ಲ ಅಂದ್ರೆ ಗಾಯ್ಸ್ ಆದಷ್ಟು ಬೇಗ ಸಿಹಿ ಸುದ್ದಿ ವೈಷ್ಣವಿ ಅವರಿಗೆ ಕೊಡ್ತೀನಿ 

ಇದೀಗ ಮೊದಲ ಬಾರಿಗೆ ಸೀತಾರಾಮ ಶೂಟಿಂಗ್​ ಸೆಟ್​​ನಲ್ಲಿ ಖುದ್ದು ಇದೇ ಸೀರಿಯಲ್​ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಅವರು ಈ ಪ್ರಶ್ನೆಯನ್ನು ನಟಿಯ ಮುಂದೆ ಇಟ್ಟಿದ್ದಾರೆ. ಇದನ್ನು ಕೇಳಿ ಅರೆ ಕ್ಷಣ ವೈಷ್ಣವಿ ಸೈಲೆಂಟ್​ ಆಗಿದ್ದಾರೆ. ಆಮೇಲೆ ಮೇಘನಾ ಅಶೋಕ್​ ಪಾತ್ರಧಾರಿಗೆ ವೈಷ್ಣವಿ ಯಾವ ವರ್ಷ ಮದ್ವೆಯಾಗಬೇಕು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಯಾವಾಗಲಾದರೂ ಆಗಲಿ, ಖುಷಿಯಾಗಿ ಇರಲಿ ಎಂದಿದ್ದಾರೆ. ಆಮೇಲೆ ಮೇಘನಾ ಬೇಗ ಹೇಳಿ, ಯಾವಾಗ ಗುಡ್​ನ್ಯೂಸ್ ಎಂದಾಗ, ವೈಷ್ಣವಿ ಅದನ್ನು ನಿಮ್ಮ ಬ್ಲಾಗ್​ನಲ್ಲಿ ಯಾಕೆ ಹೇಳಲಿ? ನನ್ನದೇ ಚಾನೆಲ್​ನಲ್ಲಿ ಅನೌನ್ಸ್​ ಮಾಡುತ್ತೇನೆ ಎಂದಿದ್ದಾರೆ. ಆಗ ಮೇಘನಾ ಹಾಗಿದ್ದರೆ ಶೀಘ್ರದಲ್ಲಿಯೇ ವೈಷ್ಣವಿ ಗುಡ್​ನ್ಯೂಸ್​ ಕೊಡಲಿದ್ದಾರೆ ಎಂದಿದ್ದಾರೆ. ಇದರ ವಿಡಿಯೋವನ್ನು ಮೇಘನಾ ಶಂಕರಪ್ಪ ಅವರು ಶೇರ್​ ಮಾಡಿಕೊಂಡಿದ್ದು, ಅದೀಗ ವೈರಲ್​ ಆಗಿದೆ. 

( video credit :  Meghana shankarappa )