ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ತಮಿಳು ನಟನ ಈ ಹೇಳಿಕೆ..! ಅವಕಾಶ ಕ್ಕಾಗಿ ಯಶ್ ಕಣ್ಣೀರು ಹಾಕಿದ್ದರಂತೆ
ಪ್ಯಾನ್ ಇಂಡಿಯಾ ಚಿತ್ರ ಕೆಜಿಎಫ್ ಮೂಲಕ ಕೇವಲ ಭಾರತ ಚಿತ್ರರಂಗ ಮಾತ್ರವಲ್ಲದೆ ಇಡೀ ಪ್ರಪಂಚವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ನಟನೆ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿರುವ ನಟ ಯಶ್ ಅವರು ಈ ಸಿನಿಮಾರಂಗದಲ್ಲಿ ಹೇಗೆ ಕಷ್ಟಪಟ್ಟು ಒಂದೊಂದೇ ಹೆಜ್ಜೆ ಇಟ್ಟು ಮೇಲೆ ಬಂದಿದ್ದಾರೆ ಎಂಬುದಾಗಿ ನಿಮಗೆ ಈಗಾಗಲೇ ಗೊತ್ತಿರುವ ವಿಚಾರ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟ ಯಶ್ ಅವರು ತಮ್ಮ ಸಿನಿ ಜರ್ನಿ ಹೇಗಿತ್ತು, ತಾವು ಯಾವೆಲ್ಲ ಕಷ್ಟ ಅಂದು ಎದುರಿಸಿದ್ದರು, ಹಾಗೆ ಎಷ್ಟೇ ಕಷ್ಟ ಬಂದರೂ ಸಹ ತಾವು ಸ್ವಾಭಿಮಾನ ಬಿಡದೆ ಸಿನಿಮಾರಂಗದಲ್ಲಿ ಬೆಳೆದು ನಿಂತೆ ಎಂಬುದಾಗಿ ಅವರೇ ಎಲ್ಲಾ ವಿಚಾರವನ್ನು ಹೇಳಿಕೊಂಡಿದ್ದರು.
ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮಿಳು ನಟ ಯಶ್ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಈತನ ಹೆಸರು ನಿಜಕ್ಕೂ ಬಹುತೇಕ ಜನರಿಗೆ ಗೊತ್ತಿಲ್ಲ. ಅಷ್ಟೇ ಯಾಕೆ ನಮಗೂ ಕೂಡ ಮೊದಲಿಗೆ ಗೊತ್ತಿರಲಿಲ್ಲ. ಹೌದು ಇದೀಗ ಯಶ್ ಅವರ ಬಗ್ಗೆ ತುಂಬಾ ಕೊಂಕಿನ ಮೂಲಕ ಹೇಳಿರುವ ಹೇಳಿಕೆ ಕೇಳಿ ಈತನನ್ನು ಸರ್ಚ್ ಮಾಡಿದಾಗ ಜೈ ಆಕಾಶ್ ಎಂದು ತಿಳಿದುಬಂದಿದೆ. ಹೌದು ಇವರು ಜಂಬದ ಹುಡುಗಿ ಸಿನಿಮಾದಲ್ಲಿ ಅಭಿನಯ ಮಾಡಿದ್ದರಂತೆ. ಈ ಜಂಬದ ಹುಡುಗಿ ಸಿನಿಮಾದಲ್ಲಿ ಯಶ್ ಕೂಡ ನಟನೆ ಮಾಡಿದ್ದರು.
ಹೌದು ಜಂಬದ ಹುಡುಗಿ ಸಿನಿಮಾವನ್ನು ನಟಿ ಪ್ರಿಯಾ ಹಾಸನ್ ಅವರೇ ನಿರ್ದೇಶಿಸಿ, ನಿರ್ಮಾಣ ಮಾಡಿ, ಆ ಸಿನಿಮಾ ಮಾಡಿದ್ದರು. ನಟ ಯಶ್ ನಟನೆ ನೋಡಿದ್ದ ಪ್ರಿಯಾ ಹಸನ್ ಅವರೇ ಯಶ್ ಗೆ ಡೈರೆಕ್ಟ್ ಅಪ್ರೋಚ್ ಮಾಡಿದ್ದರು. ಅದನ್ನು ಎಷ್ತೋ ಬಾರಿ ಯಶ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಈತ ಇದೀಗ ಮಾಧ್ಯಮ ಒಂದರಲ್ಲಿ ಯಶ್ ನನ್ನ ಬಳಿ ಬಂದು ಕಣ್ಣೀರು ಹಾಕಿದ್ದ, ನಾನು ಸಿನಿಮಾದಲ್ಲಿ ಕೆಲಸ ಮಾಡಬೇಕು, ಸೀರಿಯಲ್ ನಲ್ಲಿ ಮಾಡಿ ಮಾಡಿ ಸಾಕಾಗಿದೆ ಎಂದು ಹೇಳಿದ್ದನು, ಕಣ್ಣೀರು ನನ್ನ ಬಳಿ ಹಾಕಿದ್ದ, ನಾನು ಜಂಬದ ಹುಡುಗಿ ಸಿನಿಮಾದಲ್ಲಿ ಅಭಿನಯ ಮಾಡಿದ್ದೆ, ನನ್ನ ತಮ್ಮನ ರೋಲ್ನಲ್ಲಿ ಈತ ಅಭಿನಯ ಮಾಡಿದ್ದನು, ಈತನನ್ನ ನಾನೇ ಈ ಸಿನಿಮಾಗೆ ಕರೆ ತಂದು, ಈ ಸಿನಿಮಾದಲ್ಲಿ ಹಾಕಿಕೊಂಡಿದ್ದೆ, ಸಿನಿಮಾ ಶೂಟಿಂಗ್ ಪ್ರಾರಂಭವಾದ ಮೇಲೆ ಈತನಿಗೆ ಊಟ ಎಲ್ಲವನ್ನು ನಾನೇ ಕೊಡಿಸಿದ್ದೆ, ಹಾಗಂತೆ ಹೀಗಂತೆ ಎಂದು ಸುಳ್ಳು ಬೊಗಳೆ ಬಿಟ್ಟಿದ್ದಾನೆ ಈ ಜೈ ಆಕಾಶ್ ಎಂಬ ನಟ.
ಈತನ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..ಹಾಗೂ ಇದೀಗ ಕನ್ನಡಿಗರು ಯಶ್ ವಿರುದ್ಧ ನಾಲಿಗೆ ಹರಿ ಬಿಟ್ಟಿರುವ ಈತನ ವಿರುದ್ಧವಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಹೇಳುತ್ತಿದ್ದಾರೆ ಗೊತ್ತಾ..? ಈ ವಿಡಿಯೋ ನೋಡಿ, ಮತ್ತು ವಿಡಿಯೋವನ್ನು ಶೇರ್ ಮಾಡಿ. ಯಶ್ ಇಂದು ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರ ವಿರುದ್ಧ ಈ ರೀತಿ ನಾವು ಹೇಳಿದರೆ ನಾವು ಕೂಡ ಸ್ವಲ್ಪ ಬೆಳಕಿಗೆ ಬರುತ್ತೇವೆ ಎನ್ನುವ ದುರಾಸೆಯ ನಟ ಇವರೆಲ್ಲ ಎಂದು ಹೇಳಬಹುದು. ಈತನ ಮಾತು ಕೇಳಿದರೆ ನಿಜಕ್ಕೂ ಆಕ್ರೋಶ ಹೆಚ್ಚುತ್ತದೆ. ನಟ ಯಶ್ ಸ್ವಾಭಿಮಾನದ ನಟ. ಯಶ್ ಅವರು ಅಂದು ಕಷ್ಟದಿಂದಲೇ ಮೇಲೆ ಬಂದು ಇಷ್ಟು ಯಶಸ್ವಿ ಆಗಿದ್ದಾರೆ. ಸ್ವಾಭಿಮಾನ ಎಲ್ಲೂ ಬಿಟ್ಟಿಲ್ಲ. ಅಂತಹ ಸ್ಟಾರ್ ನಟನ ಬಗ್ಗೆ ತಮಿಳಿನ ಈತ ಹೀಗೆಲ್ಲಾ ಹೇಳುತ್ತಿದ್ದಾನೆ...ಈತನ ಪೂರ್ತಿ ಸ್ಟೋರಿ ಇಲ್ಲಿದೆ ಈ ವಿಡಿಯೋದಲ್ಲಿ, ಒಮ್ಮೆ ನೋಡಿ, ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು..
CEO of Bucketism #Yash !????
— ???????????????? ???????????????????????????????????? (@AadiSudeepian) August 17, 2023
"Before becoming a star,Yash literally begged me for a chance with his tears filled eyes, I served him food n a place later I gave him chance to play as my brother in a film, that's where he got a stand in Industry"-Tamil actorpic.twitter.com/kJh3Y8ehMO