ಸುಮಲತಾ ಮನೆಯಲ್ಲಿ ನಡೆದ ನಾಮಕರಣ ಕ್ಕೆ ದರ್ಶನ ಬಂದಿದ್ದಾರಾ ?

ಸುಮಲತಾ ಮನೆಯಲ್ಲಿ ನಡೆದ ನಾಮಕರಣ ಕ್ಕೆ ದರ್ಶನ ಬಂದಿದ್ದಾರಾ ?

ನಾವು ಈಗ ಮೊಮ್ಮಗನ ಜೊತೆ ಖುಷಿಯಾಗಿದ್ದೇವೆ. ನನಗೆ ಯಾವುದೇ ಬೇಸರ ಇಲ್ಲ ಎಂದು ಸುಮಲತಾ ಹೇಳಿದ್ರು. ಅಭಿಷೇಕ್ ಮಗನ ನಾಮಕರಣಕ್ಕೆ ದರ್ಶನ್​ ಅವರನ್ನು ಕರೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ದರ್ಶನ್ ಇಲ್ಲದೇ ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯೋದಿಲ್ಲ. ಖಂಡಿತ ನಾನು ಕರೆಯುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.ಸುಮಲತಾ ಅವರು ಈ ಒಂದು ಚರ್ಚೆಯ ಬಗ್ಗೆ ಪಾಸಿಟಿವ್ ಆಗಿಯೇ ಮಾತನಾಡಿದ್ದಾರೆ. ಆದರೆ ಅವರು ಕೂಡಾ ಸಾಕಷ್ಟು ಇನ್​ಸ್ಟಾಗ್ರಾಮ್ ಸ್ಟೋರಿಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಸುಮಲತಾ ಕೆಲ ದಿನದ ಹಿಂದಷ್ಟೆ ಹೇಳಿರುವಂತೆ, ದರ್ಶನ್ ಇಲ್ಲದೆ ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ ಎಂದಿದ್ದರು. ಹಾಗಿದ್ದ ಮೇಲೆ ದರ್ಶನ್ ಇಂದಿನ ನಾಮಕರಣ ಸಮಾರಂಭಕ್ಕೆ ಹಾಜರಾಗಲೇ ಬೇಕಿದೆ. ಒಂದೊಮ್ಮೆ ದರ್ಶನ್ ಇಂದು ನಾಮಕರಣಕ್ಕೆ ಬರಲಿಲ್ಲವೆಂದಾದಲ್ಲಿ, ಸುಮಲತಾ ಹಾಗೂ ದರ್ಶನ್ ನಡುವೆ ಬಿರುಕು ಮೂಡಿರುವುದು ಬಹುತೇಕ ಖಾತ್ರಿ ಆಗಲಿದೆ. ಈ ಹಿಂದೆ, ಸುಮಲತಾ ಅವರ ಮನೆಯಲ್ಲಿ ನಡೆದಿರುವ ಎಲ್ಲ ಸಮಾರಂಭಗಳಿಗೂ ದರ್ಶನ್ ಭಾಗಿ ಆಗಿರುವುದು ಮಾತ್ರವೇ ಅಲ್ಲದೆ ಮುಂದಾಳತ್ವ ಸಹ ವಹಿಸಿದ್ದರು.

ಇನ್ನು ನಟ ದರ್ಶನ್ ಮೈಸೂರಿನಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನ ಅತಿಥಿ ಗೃಹದಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಈ ಹಿಂದೆ, ದರ್ಶನ್ ಎಷ್ಟೇ ಬ್ಯುಸಿಯಾಗಿದ್ದರೂ ಸುಮಲತಾ ಅವರ ಮನೆಯ ಎಲ್ಲ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ಸುಮಲತಾ ಪರವಾಗಿ ಚುನಾವಣಾ ಪ್ರಚಾರಗಳಲ್ಲಿಯೂ ಭಾಗಿ ಆಗಿದ್ದರು. ಅವರ ರಾಜಕೀಯ ಪಯಣಕ್ಕೂ ಪರೋಕ್ಷವಾಗಿ ಸಹಾಯ ಮಾಡಿದ್ದರು. 
ಆದರೆ ಬಲ್ಲ ಮೂಲಗಳಿಂದ ತಿಳಿದಿರುವ ಪ್ರಕಾರ ನಟ ದರ್ಶನ್ ಮೈಸೂರಿನಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಸುಮಲತಾ ಮನೆಯಲ್ಲಿ ನಡೆದ ನಾಮಕರಣ ಕ್ಕೆ ದರ್ಶನ ಬಂದಿಲ್ಲ ಅಂತ ತಿಳಿದು ಬಂದಿದೆ