ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಪುನೀತ್ ರಾಜ್ ಕುಮಾರ್ ಸ್ಥಾನ ತುಂಬಲಿದ್ದಾರಾ ಕಿಚ್ಚ ಸುದೀಪ! ಇಲ್ಲಿದೆ ನೋಡಿ ಮಾಹಿತಿ?
ಕನ್ನಡ ಕೋಟ್ಯಾಧಿಪತಿ ಕನ್ನಡದ ಬಹುಜನಪ್ರಿಯ ರಿಯಾಲಿಟಿ ಶೋ ಆಗಿದ್ದು, ಇದು ಹಿಂದಿಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದ ಕನ್ನಡ ಆವೃತ್ತಿಯಾಗಿದೆ. ಇದು ಬುದ್ಧಿಮತ್ತೆ ಹಾಗೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ ಹಣ ಗೆಲ್ಲುವ ಒಂದು ಉತ್ತಮ ವೇದಿಕೆ ಎಂದು ಹೇಳಬಹುದು.
ಈ ಕಾರ್ಯಕ್ರಮವು ಕನ್ನಡ ಕೋಟ್ಯಾಧಿಪತಿ ಮೊದಲ ಸೀಸನ್ 2012ರಲ್ಲಿ ಆರಂಭವಾಯಿತು. ಈ ವರೆಗೂ ಐದು ಸೀಸನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಮಗೆಲ್ಲ ಕನ್ನಡ ಕೋಟ್ಯಾಧಿಪತಿ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದ್ರೆ ಅದು ನಮ್ಮ ಅಪ್ಪು. ಈ ಕಾರ್ಯಕ್ರಮವನ್ನು ಹೆಚ್ಚಾಗಿ ವೀಕ್ಷಣೆ ಮಾಡುತ್ತಿದ್ದ ಕಾರಣವೇ ಅದು ನಮ್ಮ ಅಪ್ಪುಗಾಗಿ ಎಂದು ಹೇಳಬಹುದು.
ಕನ್ನಡದ ಕೋಟ್ಯಾಧಿಪತಿ ಮೊದಲ ಎರಡನೆಯ ಮತ್ತು ನಾಲ್ಕನೇ ಸೀಸನ್‌ಗಳನ್ನು ದಿವಂಗತ ಪುನೀತ್ ರಾಜ್‌ಕುಮಾರ್ ನಿರೂಪಿಸಿದರು. ಹಾಗೂ
ಮೂರನೇ ಸೀಸನ್ ಅನ್ನು ರಮೇಶ್ ಅರವಿಂದ್ ನಿರೂಪಿಸಿದರು. ಈಗ ಐದು ಸೀಸನ್ ಪೂರೈಸಿರುವ ಈ ಕೋಟ್ಯಾಧಿಪತಿ ಕಾರ್ಯಕ್ರಮ ಪುನೀತ್ ಅವರ ಅಗಲಿಕೆಯ ನಂತರ ಯಾರು ನಡೆಸಿಕೊಳ್ಳಬಹುದು ಎಂದು ಹಲವರಲ್ಲಿ ಗೊಂದಲ ಹೆಚ್ಚಾಗಿತ್ತು. ಅದರಲ್ಲೂ ಅಪ್ಪು ಇಲ್ಲದೆ ಈ ಕಾರ್ಯಕ್ರಮ ನೂಡುವುದು ಬಹಳ ಭಾರವಾದ ಕೆಲ್ಸಾ ಎಂದರೆ ತಪ್ಪಾಗಲಾರದು. ರಮೇಶ್ ಅವರು ನಡೆಸಿಕೊಡುವಾಗ ನೋಡಿದ್ದೇವೆ ಆದರೆ ಆಗ ಅಪ್ಪು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಎಂಬ ಮನೋಭಾವನೆ ಇತ್ತು. ಆದರೆ ಈಗ ಅವರು ನಮ್ಮೊಟ್ಟಿಗೆ ಇಲ್ಲವಲ್ಲ ಎಂಬ ನೂವು ಹೆಚ್ಚಲಿದೆ ಎಂದರೆ ತಪ್ಪಾಗಲಾರದು.
ಇನ್ನು ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಭಾಗವಹಿಸಲು ಜನರು ನಿಗದಿತ ಸುತ್ತುಗಳನ್ನು ಪೂರೈಸಬೇಕು. ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಹಾಜರಾಗುತ್ತಾರೆ. ಇದರಿಂದ ಅದೆಷ್ಟೋ ಜನರ ಮನೆಯ ಕಷ್ಟವೂ ಗೆದ್ದ ಹಣದಿಂದ ನೀಗಿದೆ ಎಂದು ಹೇಳಬಹುದು. ಇದೀಗ ಈ ರೀತಿಯ ಒಂದು ಅದ್ಬುತ ಶೋ ಐದನೇ ಸೀಸನ್ ಶುರುವಾಗುವ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಇನ್ನು ಗಾಳಿ ಸುದ್ದಿಯ ಪ್ರಕಾರ ಈ ಶೋ ನ ನೇತೃತ್ವವನ್ನು ಕಿಚ್ಚ ಸುದೀಪ್ ಅವರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಹೊರಬಿದ್ದಿಲ್ಲ. ಇನ್ನು ಬಿಗ್ ಬಾಸ್ ಶೋ ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ಇನ್ನಷ್ಟು ಖಾತರಿ ಆಗುವಂತೆ ಮಾಡಿದೆ.