ದರ್ಶನ್ ಮೇಲೆ ಚಪ್ಪಲಿ ಎಸೆದವರಿಗೆ ಕೆಂಪೇಗೌಡ ಸ್ಟೈಲ್ ನಲ್ಲಿ ಕಿಚ್ಚನ ವಾರ್ನಿಂಗ್…ಇಲ್ಲಿದೆ ವಿಡಿಯೋ

ದರ್ಶನ್ ಮೇಲೆ ಚಪ್ಪಲಿ ಎಸೆದವರಿಗೆ ಕೆಂಪೇಗೌಡ ಸ್ಟೈಲ್ ನಲ್ಲಿ ಕಿಚ್ಚನ ವಾರ್ನಿಂಗ್…ಇಲ್ಲಿದೆ ವಿಡಿಯೋ

ನಮ್ಮ ನಾಡು ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಸಹ ಪ್ರೀತಿ ಹಾಗೂ ಗೌರವವನ್ನು ಪ್ರತಿನಿಧಿಸುತ್ತೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದು ಆ ಪರಿಹಾರವನ್ನು ಕಂಡುಕೊಳ್ಳಲು ಹಲವಾರು ಮಾರ್ಗಗಳಿವೆ.

ಪ್ರತಿಯೊಬ್ಬ ವ್ಯಕ್ತಿಯನ್ನು ಘನತೆಯಿಂದ ಕಾಣಬೇಕು ಮತ್ತು ಯಾವುದೇ ಸಮಸ್ಯೆಯನ್ನಾದರೂ ಸಹ ಶಾಂತತೆಯಿಂದ ಪರಿಹರಿಸಬಹುದು ಎಂದು ದರ್ಶನ್ ಮೇಲೆ ಚಪ್ಪಲಿ ಎಸೆದ ವಿಡಿಯೊ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್ ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು.

ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ ಎಂದಿದ್ದಾರೆ. ಇದರ ಜೊತೆಗೆ ಕಿಚ್ಚ ಸುದೀಪ್ ಅವರು ಖಡಕ್ ವಾರ್ನಿಂಗ್ ಕೊಟ್ಟ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ದಯವಿಟ್ಟು ಸಿಗಕೋ ಬೇಡಿ ಸಿಗಾಕಿಕೊಂಡ್ರೆ ನೀವು ಹೊಡೆದಿರೋರು ಯಾರು ಅಂತ ಗೊತ್ತಾದ್ರೆ ಅಷ್ಟು ಜನರನ್ನು ಸಂಪಾದಿಸಿಕೊಂಡಿದ್ದಾರೆ ಅಲ್ವಾ ಅವರು ಅದಕ್ಕಿಂತ ಹೀನಾಯವಾಗಿ ಹೊಡೆದು ಹಾಕಿ ಬಿಡ್ತಾರೆ ಎಂದಿದ್ದಾರೆ.

ಸದ್ಯಕ್ಕೆ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಚಿತಾ ರಾಮ್ ವೇದಿಕೆ ಮೇಲೆ ಮಾತಾಡುವಾಗಲೇ ಇಂತಹದೊಂದು ಘಟನೆ ನಡೆದಿದ್ದು ದರ್ಶನ್ ಮೇಲೆ ಚಪ್ಪಲಿ ಬಿದ್ದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ.

 

ಆದರೆ ಈ ಬಗ್ಗೆ ಮರು ಮಾತನಾಡದೇ ದರ್ಶನ್ ಹಾಗೂ ಚಿತ್ರತಂಡವು ಆದಷ್ಟು ಬೇಗ ಕಾರ್ಯಕ್ರಮ ಮುಗಿಸಿ ತೆರಳಿದ್ದರು. ಈ ಕೃತ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ನೋಡಿ ಡಿ ಬಾಸ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಕನ್ನಡ ಚಿತ್ರರಂಗ ಹಾಗು ಕನ್ನಡಿಗರು ಒಳ್ಳೆತನಕ್ಕೆ ಹೆಸರುವಾಸಿ ಇಂತಹ ಕೃತ್ಯಗಳಿಂದ ಕೆಟ್ಟ ಸಂದೇಶವನ್ನು ರವಾನಿಸಬಾರದು.ಯಾವುದಕ್ಕೂ ರೋಷಾವೇಶದ ಪ್ರತಿಕ್ರಿಯೆಯನ್ನು ನೀಡಬಾರದು. ಪ್ರತಿ ನಟರು ಮತ್ತು ಅಭಿಮಾನಿಗಳಲ್ಲಿ ವ್ಯತ್ಯಾಸವಿರುತ್ತದೆ ಎಂಬುದು ತಿಳಿದಿದೆ ಮತ್ತು ಇಬ್ಬರ ನಡುವೆ ಬಂದು ಮಾತನಾಡಲು ನಾನು ಯಾರೂ ಅಲ್ಲ.

ಆದರೆ ಪುನೀತ್ ಹಾಗೂ ದರ್ಶನ್ ಇಬ್ಬರ ಜತೆಗೂ ಆಪ್ತತೆ ಹೊಂದಿದ್ದೆ ಮತ್ತು ಅವರ ಜೀವನದಲ್ಲಿ ಒಳ್ಳೆ ಸ್ಥಾನವನ್ನು ಗಳಿಸಿದ್ದ ನಾನು ಮಾತನಾಡುವ ಸ್ವಾತಂತ್ಯ ಹೊಂದಿದ್ದು ನನ್ನ ಭಾವನೆಗಳನ್ನು ಬರೆದಿದ್ದೇನೆ. ಹೇಳಬೇಕಿದ್ದಕ್ಕಿಂತ ಹೆಚ್ಚು ಹೇಳಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ಚಿತ್ರರಂಗದಲ್ಲಿ 27 ವರ್ಷದ ಪಯಣದಲ್ಲಿ ಒಂದು ವಿಷಯ ನನಗೆ ಅರ್ಥವಾಗಿದೆ.

ಯಾವದೂ ಹಾಗೂ ಯಾರೂ ಸಹ ಶಾಶ್ವತವಲ್ಲ. ಪ್ರೀತಿ ಹಾಗೂ ಗೌರವವನ್ನು ಕೊಟ್ಟು ಮರಳಿ ಪಡೆಯಿರಿ. ಇದೊಂದೇ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲಾದರೂ ಗೆಲ್ಲಲು ಇರುವ ಮಾರ್ಗ ಎಂದು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂದೇಶ ರವಾನಿಸಿದ್ದಾರೆ.

ಇನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮತ್ತು ದರ್ಶನ್ ನಡುವೆ ಅಲ್ಲಿ ಸರಿ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತೇನೋ ಎಂದಿರುವ ಕಿಚ್ಚ ಈ ರೀತಿ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಹೌದು ಈ ಪ್ರತಿಕ್ರಿಯೆಯನ್ನು ಪುನೀತ್ ಒಪ್ಪುತ್ತಿದ್ರಾ ಹಾಗೂ ಬೆಂಬಲಿಸುತ್ತಿದ್ರಾ? ಇದಕ್ಕೆ ಉತ್ತರ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೂ ಗೊತ್ತಿದೆ.

ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಎಸಗಿದ ಬೇಜವಾಬ್ದಾರಿ ಕೃತ್ಯದಿಂದ ಪುನೀತ್ ಅಭಿಮಾನಿಗಳಿಗಿರುವ ಘನತೆ ಹಾಗೂ ಗೌರವವನ್ನು ಹಾಳು ಮಾಡಬಾರದು ಎಂದು ಸುದೀಪ್ ಉಲ್ಲೇಖಿಸಿದ್ದು ಮುಂದುವರಿದು ಮಾತನಾಡಿದ ಸುದೀಪ್ ರವರು ದರ್ಶನ್ ಕನ್ನಡ ಚಲನಚಿತ್ರರಂಗಕ್ಕೆ ಹಾಗೂ ಕನ್ನಡಕ್ಕೆ ಅಪಾರ ಕೊಡುಗೆಗಳನ್ನು ನೀಡಿದವರು.

ಹೌದು ದರ್ಶನ್ ಬಗ್ಗೆ ನನಗಿರುವ ನಿಜವಾದ ಭಾವನೆಯ ಕುರಿತು ಹೇಳುವುದನ್ನು ನಮ್ಮಿಬ್ಬರ ನಡುವಿನ ವೈಮನಸ್ಸಿನಿಂದ ತಡೆಯಲಾಗುವುದಿಲ್ಲ. ಆತನಿಗೆ ಈ ರೀತಿ ಮಾಡುವುದು ಖಂಡಿತ ತಪ್ಪು ಹಾಗೂ ಅದು ನನಗೂ ಸಹ ನೋವನ್ನು ಉಂಟುಮಾಡಿದೆ ಎಂದು ಬರೆದಿದ್ದಾರೆ.