ಸುದೀಪ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಂತೆ..! ಹುಟ್ಟುಹಬ್ಬದ ದಿನವೇ ಸುಮಲತಾ ತಿಳಿಸಿದ ಖುಷಿಯ ವಿಚಾರ ಇಲ್ಲಿದೆ
ದರ್ಶನ್ ಮತ್ತು ಸುದೀಪ್ ಅವರು ಒಟ್ಟಿಗೆ ಮಾತನಾಡಿ 6 ವರ್ಷಗಳು ಮುಗಿದಿದೆ. ಇಂದಿಗೂ ಕೂಡ ಅವರು ಇಬ್ಬರು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿಲ್ಲ. ಆದರೆ ಸುಮಲತಾ ಅವರ 60 ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಂತಸ ಪಡಿಸಿದ್ದಾರೆ. ನಟ ದರ್ಶನ್ ಅವರು ಮತ್ತು ಸುದೀಪ್ ಅವರು ಒಟ್ಟಿಗೆ ಮಾತನಾಡಿ 6 ವರ್ಷಗಳು ಕಳೆದಿವೆ. ಒಟ್ಟಿಗೆ ಕಾಣಿಸಿಕೊಂಡು ಆರು ವರ್ಷ ಮುಗಿದಿದ್ದು ಆದರೂ ಇಂದಿಗೂ ಕೂಡ ಅವರ ಅಭಿಮಾನಿಗಳು ಮತ್ತೆ ನೀವಿಬ್ಬರು ಒಂದಾಗಬೇಕು, ಮೊದಲಂತೆ ನೀವು ನಿಮ್ಮ ಸ್ನೇಹ ಮುಂದುವರಿಸಬೇಕು ಎಂಬುದಾಗಿ ಸದಾ ಕೇಳಿಕೊಳ್ಳುತಲೇ ಬಂದಿದ್ದರು.
ಅದರ ಫಲವಾಗಿ ಸುಮಲತಾ ಅವರ ಹುಟ್ಟು ಹಬ್ಬದ ಪ್ರಯುಕ್ತ ನಟ ದಚ್ಚು ಮತ್ತು ಕಿಚ್ಚ ಅವರು ಒಟ್ಟಿಗೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇಬ್ಬರಿಗೂ ಕೂಡ ಕೇಕ್ ತಿನಿಸಿದ ನಟಿ ಸುಮಲತಾ ಅವರು ತಮ್ಮ ಹುಟ್ಟು ಹಬ್ಬವನ್ನು ತುಂಬಾ ಗ್ರಾಂಡ್ ಆಗಿಯೇ ಆಚರಣೆ ಮಾಡಿಕೊಂಡರು. ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಂತೆ ಕುಚಿಕು ಗೆಳೆಯರು ಆಗಿದ್ದರು. ಆ ವಿಷಯ ಎಲ್ಲರಿಗೂ ಗೊತ್ತು. ಅವರ ನಂತರ ದಚ್ಚು ಕಿಚ್ಚ ಅವರು ಕುಚುಕು ಗೆಳೆಯರಾಗಿ ಒಟ್ಟಿಗೆ ಸದಾ ಖುಷಿಯಿಂದ ಸ್ನೇಹವನ್ನು ಬೆಳೆಸಿದ್ದರು. ಆದರೆ ನಂತರ ಯಾವುದೋ ಒಂದು ಕಾರಣಕ್ಕೆ ಇಬ್ಬರ ನಡುವೆ ವೈ ಮನಸ್ಸು ಬೇರೂರಿ ಇಬ್ಬರು ಕೂಡ ಇಂದಿಗೂ ಮಾತನಾಡುತ್ತಿಲ್ಲ.
ಆದರೆ ಸುಮಲತಾ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಬಂದಿರುವ ಇವರಿಬ್ಬರನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನೊಂದು ಕಡೆ ಮಾಧ್ಯಮದವರು ದರ್ಶನ್ ಮತ್ತು ಸುದೀಪ್ ಅವರು ಒಟ್ಟಿಗೆ ಸಿನಿಮಾ ಮಾಡ್ತಾರ ಮೇಡಂ ಎಂದು ಸುಮಲತಾ ಅವರಿಗೆ ಪ್ರಶ್ನೆ ಮಾಡುತ್ತಾರೆ. ಆಗ ಸುಮಲತಾ ಅವರು ನಗುನಗುತ್ತಾ ಖಂಡಿತವಾಗಿ ಮಾಡುತ್ತಾರೆ. ಅದಕ್ಕೆ ತಕ್ಕಂತೆ ನೀವು ಕಥೆಯ ಬರೆದುಕೊಂಡು ಬನ್ನಿ ಎಂದು ಹೇಳಿದರು..ಆಗ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಕೂಡ ನಾನೇ ಸಿನಿಮಾ ಪ್ರೊಡ್ಯೂಸ್ ಮಾಡುತ್ತೇನೆ ಎಂದು ಉತ್ತರ ನೀಡಿದ್ದಾರೆ. ದಚ್ಚು ಮತ್ತು ಕಿಚ್ಚ ಒಟ್ಟಿಗೆ ಸಿನಿಮಾ ಮಾಡುವ ವಿಚಾರ ತಿಳಿಸಿದ ಸುಮಲತಾರ ವಿಡಿಯೋ ಇಲ್ಲಿದೆ. ಒಮ್ಮೆ ನೋಡಿ. ನೀವು ಕೂಡ ಸುದೀಪ್ ಮತ್ತು ದರ್ಶನ್ ಅವರು ಆದಷ್ಟು ಬೇಗನೆ ಮೊದಲಿನಂತೆ ಮಾತನಾಡಲಿ ಎಂದು ಹಾರೈಸಿ, ಹಾಗೆ ಒಟ್ಟಿಗೆ ಸಿನಿಮಾ ಆದಷ್ಟು ಬೇಗನೆ ಅವರು ಮಾಡಲಿ ಎಂದು ಶುಭ ಕೋರಿ ಧನ್ಯವಾದಗಳು... ( karnataka you tube channel )