ಸೃಜನ್‌ ಲೋಕೇಶ್‌ಗೆ ವಿಜಯಲಕ್ಷ್ಮೀ ಮೋಸ ಮಾಡಿದ್ರ ? ಅಸಲಿ ಸತ್ಯ ಏನು ನೋಡಿ ?

ಸೃಜನ್‌ ಲೋಕೇಶ್‌ಗೆ ವಿಜಯಲಕ್ಷ್ಮೀ ಮೋಸ ಮಾಡಿದ್ರ ? ಅಸಲಿ ಸತ್ಯ ಏನು ನೋಡಿ ?

ಸೃಜನ್ ಲೋಕೇಶ್ ಜೊತೆಗಿನ ತಮ್ಮ ಮದುವೆ ಮುರಿದುಬಿದ್ದಿದ್ಯಾಕೆ ಎಂಬುದನ್ನ ‘ರಾಜೇಶ್ ರಿವೀಲ್ಸ್’ ಯೂಟ್ಯೂಬ್ ಸಂದರ್ಶನದಲ್ಲಿ ಬಹಿರಂಗಪಡಿಸಿದ ನಟಿ ವಿಜಯಲಕ್ಷ್ಮೀ, ‘’ನಾವು ಡೇಟಿಂಗ್ ಮಾಡಿಲ್ಲ. ಸೃಜನ್ ಅವರನ್ನ ನಾನು ಮೊದಲು ಭೇಟಿ ಮಾಡಿದ್ದು ‘ಸಾವಿತ್ರಿ’ ಧಾರಾವಾಹಿಯಲ್ಲಿ. ಅದು ವಜ್ರೇಶ್ವರಿ ಕುಮಾರ್ ಹಾಗೂ ಗುರುದತ್‌ ನಿರ್ಮಾಣದ ಧಾರಾವಾಹಿ. ‘ಸಾವಿತ್ರಿ’ ಬಳಿಕ ನಾನು ಮತ್ತು ಸೃಜನ್‌ ತಮಿಳಿನಲ್ಲಿ ಒಂದು ಸೀರಿಯಲ್‌ ಮಾಡಿದ್ವಿ. ಆ ಟೈಮ್‌ನಲ್ಲಿ ಅವರೇ ಬಂದು ನನ್ನ ತಂದೆಯ ಬಳಿ ವಿಜಯಲಕ್ಷ್ಮೀ ಅವರನ್ನ ಮದುವೆ ಮಾಡಿಕೊಳ್ಳಬೇಕು ಅಂತಿದ್ದೀನಿ ಅಂತ ಕೇಳಿದರು. ಆಗ ನಾನು ನನ್ನ ವೃತ್ತಿಜೀವನದ ಪೀಕ್‌ನಲ್ಲಿದ್ದೆ. ವರ್ಕ್ ಕಮಿಟ್‌ಮೆಂಟ್ಸ್ ಜಾಸ್ತಿ ಇತ್ತು’’ ಎಂದಿದ್ದಾರೆ.

ಮಾತು ಮುಂದುವರೆಸಿದ ಅವರು, ‘’ನನ್ನ ಅಪ್ಪ ತೀರಿಕೊಂಡ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಗಿರಿಜಮ್ಮ ಹಾಗೂ ಸೃಜನ್ ತುಂಬಾ ಸಪೋರ್ಟಿವ್ ಆಗಿದ್ದರು. ನಮ್ಮ ಸಂಬಂಧ ಎಂಗೇಜ್‌ಮೆಂಟ್‌ವರೆಗೂ ಬಂತು. ನಾನೇ ಖರ್ಚು ಮಾಡಿ ನಿಶ್ಚಿತಾರ್ಥ ಮಾಡಿಕೊಂಡೆ. ತುಂಬಾ ಖುಷಿ ಇತ್ತು ನನಗೆ. ಅವರು ಖಂಡಿತವಾಗಿಯೂ ಒಳ್ಳೆಯ ಪಾರ್ಟ್ನರ್’’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

‘’ಎಂಗೇಜ್‌ಮೆಂಟ್ ಆದ್ಮೇಲೆ ಸ್ವಲ್ಪ ಮನಸ್ತಾಪಗಳು ಶುರುವಾಯ್ತು. ನಾವು ಖುಷಿಯಾಗಿ ಇರಲಿಲ್ಲ. ನಮಗೆ ತುಂಬಾ ಇಷ್ಟವಾದವರು ನಮ್ಮ ಜೊತೆ ಸಂತೋಷವಾಗಿ ಇರ್ತಾರೆ ಅಂತ ನಾವು ಅಂದುಕೊಳ್ಳಬಾರದು. ನಮ್ಮೊಂದಿಗೆ ಸಂತೋಷವಾಗಿಲ್ಲ ಅಂದ್ರೆ, ಅವರನ್ನ ಬಿಟ್ಟುಕೊಟ್ಟು, ಬೇರೆಲ್ಲೋ ಸಂತೋಷವಾಗಿರೋದನ್ನ ಕಂಡು ನಾವು ಸಂತೋಷ ಪಡಬೇಕು. ಅದನ್ನೇ ನಾನು ಸೃಜನ್ ವಿಷಯದಲ್ಲಿ ಮಾಡಿದ್ದು’’ ಎಂದು ಮುಕ್ತವಾಗಿ ಹೇಳಿದ್ದಾರೆ

‘’ನಾನು.. ಸೃಜನ್‌ ಅವರನ್ನ ಯಾಮಾರಿಸಿದೆ ಅಂತಲ್ಲ. ನಾನು ತುಂಬಾ ಆಸೆ ಪಟ್ಟು, ಅಷ್ಟೆಲ್ಲಾ ಖರ್ಚು ಮಾಡಿ ಎಂಗೇಜ್‌ಮೆಂಟ್ ಮಾಡಿಕೊಂಡೆ. ಆದರೆ, ನನ್ನ ಬ್ಯಾಡ್ ಲಕ್‌. ಆ ಫ್ಯಾಮಿಲಿ ನನಗೆ ಸಿಗಲಿಲ್ಲ. ಆ ಟೈಮ್‌ನಲ್ಲಿ ಏನೋ ಸ್ವಲ್ಪ ಆಯ್ತು. ಆ ಟೈಮ್‌ನಲ್ಲಿ ‘ಬೇಡ’ ಅಂತ ನಾನು ಡಿಸೈಡ್ ಮಾಡಿದೆ. ಸೃಜನ್ ಈಗ ಚೆನ್ನಾಗಿದ್ದಾರೆ. ಒಳ್ಳೆ ಹೆಂಡ್ತಿ ಸಿಕ್ಕಿದ್ದಾರೆ. ಖುಷಿಯಾಗಿದ್ದಾರೆ’’ ಅಂತ ವಿಜಯಲಕ್ಷ್ಮೀ ತಿಳಿಸಿದ್ದಾರೆ.

‘’ರೀಸೆಂಟ್‌ ಆಗಿ ನಾನು ಗಿರಿಜಮ್ಮ ಅವರನ್ನ ಭೇಟಿ ಮಾಡಿದೆ. ಅವರ ಬಳಿ ಓಡಿಹೋಗಿ ಅಪ್ಪಿಕೊಂಡೆ. ‘ಸಾರಿ ಅಮ್ಮ’ ಅಂತ ಹೇಳಿದೆ. ಅವರು ಸ್ವಲ್ಪವೂ ಸಿಟ್ಟು ತೋರಿಸಲಿಲ್ಲ. ಸೃಜನ್‌ ಅವರನ್ನೂ ಮೀಟ್ ಮಾಡಿದೆ. ಅವರೂ ನನ್ನನ್ನ ಕೋಪದಲ್ಲಿ ನೋಡಲಿಲ್ಲ’’ ಅಂತ ವಿಜಯಲಕ್ಷ್ಮೀ ಬಾಯ್ಬಿಟ್ಟಿದ್ದಾರೆ.