ಯಾರಿಗೂ ಕೆಟ್ಟದ್ದು ಒಂದು ದಿವಸ ಬಯಸಿಲ್ಲ ಆಕೆ..! ಸ್ಪಂದನಾ ಒಡನಾಟದ ಬಗ್ಗೆ ನೋವು ತೋಡಿಕೊಂಡ ಸೃಜನ್
ಸ್ಯಾಂಡಲ್ ವುಡ್ ನ ನಾಯಕ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮೊನ್ನೆ ಬ್ಯಾಂಕಾಕ್ ನಲ್ಲಿ ಹೃದಯಘಾತಕ್ಕೆ ಒಳಗಾಗಿ ಮಲಗಿದ್ದ ಅವರು ಮತ್ತೆ ಮೇಲೆ ಜೀವಂತವಾಗಿ ಏಳಲೇ ಇಲ್ಲ. ಇಂದು ಅವರ ಮೃತದೇಹ ವಿದೇಶದಿಂದ ಬೆಂಗಳೂರಿಗೆ ಬರಲಿದೆ, ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಚಿತ್ರರಂಗದ ಗಣ್ಯರು ಕನ್ನಡದ ದೊಡ್ಡ ದೊಡ್ಡ ವ್ಯಕ್ತಿಗಳು ಹಾಗೆ ಕನ್ನಡದ ಕಲಾ ಬಂಧುಗಳು ಎಲ್ಲರೂ ಕೂಡ ಕಣ್ಣೀರು ಹಾಕುತ್ತಿದ್ದಾರೆ. ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳು ಕೂಡ ಈ ವಿಷಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಿದ್ದಾರೆ.
ನಟ ವಿಜಯ್ ರಾಘವೇಂದ್ರ ಅವರು ಕೂಡ ಕನ್ನಡದಲ್ಲಿ ಎಲ್ಲರೂಟ್ಟಿಗೆ ಸ್ನೇಹದಿಂದ ಲವಲವಿಕೆಯಿಂದಲೆ ಇದ್ದು ಪ್ರೀತಿಯಿಂದ ಸರಳ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಹಾಗೆ ಯಾರೇ ಮಾತನಾಡಿಸಿದರೂ ಕೂಡ ಅಷ್ಟೇ ಪ್ರೀತಿ ನೀಡಿ ಮಾತನಾಡುತ್ತಿದ್ದಂತಹ ವ್ಯಕ್ತಿತ್ವ ಅವರದ್ದು. ಅವರ ಪತ್ನಿ ಕೂಡ ಸ್ಪಂದನಾ ತುಂಬಾನೇ ಒಳ್ಳೆಯವರು. ಹೆಚ್ಚಾಗಿ ಹೇಳಬೇಕು ಅಂದರೆ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ತುಂಬಾನೇ ಸೈಲೆಂಟು ಸ್ವಭಾವದವರು, ಯಾರಿಗೂ ಕೂಡ ಕೆಟ್ಟದ್ದನ್ನು ಬಯಸಿದ ಮನಸ್ಥಿತಿ ಸ್ಪಂದನಾ ಅವರದು.. ಹೌದು ಅವರೊಟ್ಟಿಗೆ ಸಾಕಷ್ಟು ಜನರು ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಅವರ ಸಾಲಿಗೆ ನಟ ಸೃಜನ್ ಲೋಕೇಶ್ ಅವರು ಕೂಡ ಸೇರುತ್ತಾರೆ. ಹೌದು ಈಗ ಮಾಧ್ಯಮದಲ್ಲಿ ಕಾಣಿಸಿಕೊಂಡ ಸೃಜನ್ ಲೋಕೇಶ್ ಮೊದಲಿಗೆ ಈ ವಿಷಯ ನಿಜಾನಾ ಅಥವಾ ಸುಳ್ಳ ಎಂಬುದಾಗಿ ನನಗೆ ನಂಬಲು ಆಗಲಿಲ್ಲ ಅದೇನೋ ಕನಸಿನಲ್ಲಿ ಏನೋ ಹೇಳುತ್ತಿದ್ದಾರೆ ಎಂಬಂತೆ ಭಾಸವಾಗಿತ್ತು.
ನಾನು ಇದರಿಂದ ಹೊರಬರಲು ಮೂರ್ನಾಲ್ಕು ತಾಸು ಆಯಿತು, ನಿಜಕ್ಕೂ ನಂಬಲು ಅಸಾಧ್ಯ, ಸ್ಪಂದನ ಒಳ್ಳೆಯ ಸ್ನೇಹಿತೆ. ಯಾರಿಗೂ ಕೂಡ ಎಂದಿಗೂ ಕೆಟ್ಟದ್ದನ್ನು ಬಯಸಲಿಲ್ಲ, ಹಾಗೇನೇ ಹೆಚ್ಚು ಮಾತನಾಡುತ್ತಿರಲಿಲ್ಲ, ನಾನು ಆಕೆ ಒಂದಿಲ್ಲೊಂದು ವಿಚಾರಗಳ ಕುರಿತು ಪ್ರೀತಿಯಿಂದ ಸ್ನೇಹದಿಂದ ಗಲಾಟೆ ಮಾಡುತ್ತಲೇ ಇದ್ದೆವು. ಆಕೆಯನ್ನು ಚುಡಾಯಿಸುತ್ತಾ ಕೀಟಲೆ ಮಾಡುತ್ತಾ ಒಬ್ಬರಿಗೊಬ್ಬರು ಕಾಲೆಳೆದುಕೊಂಡು ಮಾತನಾಡುತ್ತಿದ್ದೆವು. ಅಂತಹ ಒಳ್ಳೆಯ ಸ್ನೇಹಿತೆ ಆಕೆ ನನಗೆ. ಸ್ಪಂದನ ಸಾವನಪ್ಪಿದ್ದಾಳೆ ಎಂದರೆ ನಿಜಕ್ಕೂ ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಈ ಬೆನ್ನಲ್ಲೇ ವಿಜಯ್ ನ ನೆನೆಸಿಕೊಂಡರೆ ಭಯ ಆಗುತ್ತೆ. ಆತನ ನಗು ಮುಖ ಇದರಿಂದ ಕಮರಿ ಹೋಗುತ್ತಾ ಅನ್ನೋ ಭಯ. ಈ ವಿಷಯದಿಂದ ಹೇಗೆ ಹೊರ ಬರುತ್ತಾನೆ ಅವನು, ಹೇಗೆ ಈ ವಿಷಯವನ್ನು ತಡೆದುಕೊಳ್ಳುತ್ತಾನೆ ಎಂದು ಚಿಂತೆ ಆಗುತ್ತಿದೆ ಎಂದರು ಸೃಜನ್ ಲೋಕೇಶ್. ಹಾಗೆ ಮಾತು ಮುಂದುವರಿಸಿ 'ಅವರಿಬ್ಬರೂ ಒಬ್ಬರಿಗೊಬ್ಬರು ಹೆಚ್ಚು ಪ್ರೀತಿಯಿಂದ ಅನನ್ಯತೆಯಿಂದ ಸಂಸಾರ ಮಾಡುತ್ತಿದ್ದವರು. ವಿಜಯ್ ಸ್ಪಂದನ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದ, ಸಾಕಷ್ಟು ಕನಸುಗಳನ್ನು ಅವರಿಬ್ಬರು ಕಂಡಿದ್ದರು, ಪ್ರೊಡಕ್ಷನ್ ಹೌಸ್ ಬೆಳೆಸಬೇಕು ಎಂಬುದಾಗಿ ಆಶಯ ಹೊಂದಿದ್ದರು. ಹಾಗೇನೆ ಮಕ್ಕಳ ವಿಚಾರದಲ್ಲಿ ಚೆನ್ನಾಗಿ ಓದಿಸಿ ವಿದ್ಯಾಭ್ಯಾಸ ಕೊಡಿಸಬೇಕಾಗಿ ಎಂದು ಆಗಾಗ ಮಾತನಾಡುತ್ತಿದ್ದರು. ನಾನು ಅವರನ್ನು ಕೊನೆಗೆ ಭೇಟಿಯಾಗಿದ್ದು, ನಮ್ಮ ಮನೆ ಹತ್ತಿರ ಇದ್ದಾಗ ಆಗಾಗ ಭೇಟಿ ಆಗುತ್ತಿದ್ದೆ..
ಅವರು ಮನೆ ಚೇಂಜ್ ಮಾಡಿ ತುಂಬಾನೇ ದೂರ ಹೋದರು ಹಾಗಾಗಿ ನಾನು ಹೈದರಬಾದ್ ಹೋಗುವಾಗ ನಿಮ್ಮ ಮನೆಗೆ ಬಂದು ಹೋಗ್ತ್ತೇನೆ ಎಂದು ಹೇಳುತ್ತಿದ್ದೆ. ಅಷ್ಟು ನಮ್ಮ ಅವರ ಒಡನಾಟ ತುಂಬಾನೇ ಇದೆ ಎಂದು ಭಾವುಕರಾದರು.ಸೃಜನ್ ಲೋಕೇಶ್ ಸ್ಪಂದನ ಅವರ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳ ಹೇಳಿಕೊಂಡಿದ್ದಾರೆ. ಈ ವಿಡಿಯೋ ನೋಡಿ. ( video credit :news 18 kannada