ಅತ್ತಿಗೆ ತರ ಇರಲೇ ಇಲ್ಲ..; ಸ್ಪಂದನ ಅಗಲಿಕೆ ನೋವ ತೋಡಿಕೊಂಡ ಶ್ರೀಮುರಳಿ ವಿಡಿಯೋ..!
ಕನ್ನಡ ಚಿತ್ರರಂಗದಲ್ಲಿ ಕರೋನ ಬಂದಾಗಿನಿಂದ ಹೆಚ್ಚು ಸಾವು ನೋವುಗಳು ಸಂಭವಿಸಿವೆ. ನಮ್ಮ ಪ್ರೀತಿಯ ಎಲ್ಲರ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆ ಈಗಲೂ ಯಾರಿಗೂ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅವರ ನೆನಪಿನಲ್ಲಿಯೇ ಜೀವನ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳಂತೂ ಕೇಳಲೇಬೇಡಿ ಇಂದಿಗೂ ಪುನೀತ್ ರಾಜಕುಮಾರ್ ಅವರನ್ನು ಕೆಲ ಸಂದರ್ಭಗಳಲ್ಲಿ ಹಾಗೆ ಕೆಲ ಕಾರ್ಯಕ್ರಮಗಳಲ್ಲಿ ಅವರ ಫೋಟೋ ಹಿಡಿದು ಹುಚ್ಚರಂತೆ ಕುಣಿಯುತ್ತಾರೆ..ಅಷ್ಟು ಪ್ರೀತಿಯನ್ನ ಅಭಿಮಾನಿಗಳಿಂದ ಅಪ್ಪು ಅವರು ಪಡೆದಿದ್ದರು.
ಹೌದು ರಾಜ್ ಕುಟುಂಬಕ್ಕೆ ಒಂದಲ್ಲ ಒಂದು ಕಷ್ಟಗಳು ಎದುರಾಗುತ್ತಿವೆ ಎಂದು ಕೆಲವರು ಹೇಳಿದ್ದು, ಇತ್ತೀಚಿನ ದಿನಕ್ಕೆ ಹೇಳುವುದಾದರೆ ಎರಡು ವಾರಗಳ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ ಚಿನ್ನೇಗೌಡರ ಹಿರಿಯ ಪುತ್ರ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಹೃದಯಘಾತಕ್ಕೆ ಒಳಗಾಗಿ ಇದ್ದಕಿದ್ದ ಹಾಗೆ ಸಾವನ್ನಪ್ಪಿದ್ದು. ಹೌದು ಇದನ್ನು ಸಹ ನಿಜಕ್ಕೂ ಯಾರಿಗೂ ಕೂಡ ಒಪ್ಪಿಕೊಳ್ಳಲು ಆಗಲಿಲ್ಲ. ಇದನ್ನು ಆರಂಭದಲ್ಲಿ ನಂಬುವಂತೆ ಇರಲಿಲ್ಲ, ನಂತರ ಅತ್ತಿಗೆಯ ಸಾವನ್ನು ಖಚಿತಪಡಿಸಿದ್ದು ನಟ ಶ್ರೀಮುರಳಿ.
ಹೌದು ಶ್ರೀ ಮುರುಳಿಯವರು ಇದೀಗ ಸ್ಪಂದನ ಅವರ ಬಗ್ಗೆ ತಮ್ಮ ಅತ್ತಿಗೆ ಬಗ್ಗೆ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ..ಆ ದೇವರು ನಮಗೆ ಯಾಕೆ ಮೇಲಿಂದ ಮೇಲೆ ಇಷ್ಟು ನೋವು ಕೊಡುತ್ತಿದ್ದಾನೆ, ಇತ್ತೀಚಿಗೆ ಸಿನಿ ರಂಗದಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಇನ್ನೇನು ಸ್ವಲ್ಪವೇ ಸ್ವಲ್ಪ ಸುಧಾರಿಸಿಕೊಂಡಿದ್ದೆವು, ಸ್ವಲ್ಪ ನಗುಮುಖ ಎಲ್ಲರಲ್ಲೂ ಸ್ವಲ್ಪ ಮೂಡಿತ್ತು.ಅಷ್ಟರಲ್ಲಿಯೇ ಆ ದೇವರು ನಮ್ಮ ಅಣ್ಣನ ಹೆಂಡತಿಯನ್ನು ತನ್ನ ಬಳಿ ಕರೆದುಕೊಂಡು ಎಲ್ಲರಿಗೂ ಮತ್ತೆ ನೋವು ನೀಡಿಬಿಟ್ಟ. ನಿಜಕ್ಕೂ ಇದನ್ನು ನಂಬಲು ನಮಗೆ ಈಗಲೂ ಕೂಡ ಆಗುತ್ತಿಲ್ಲ. ಅತ್ತಿಗೆ ನಮ್ಮ ಮನೆಯಲ್ಲಿ ಅತ್ತಿಗೆ ರೀತಿಯೇ ಇರಲಿಲ್ಲ, ತಾಯಿಯಂತೆ ನನ್ನನ್ನ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ ಎಂದು ಈ ವಿಡಿಯೋ ಮೂಲಕ ತಿಳಿದು ಬಂದಿದೆ.
ಹೌದು ಶ್ರೀಮುರಳಿಯವರಿಗೆ ಉಗ್ರಂ ಸಿನಿಮಾದ ಮೂಲಕ ಯಾವ ರೀತಿ ಅತಿ ದೊಡ್ಡ ಬ್ರೇಕ್ ಸಿಕ್ಕಿತೋ, ಅದೇ ರೀತಿ ವಿಜಯ ರಾಘವೇಂದ್ರ ಅವರ ಅತಿ ದೊಡ್ಡ ಬ್ರೇಕ್ ಗಾಗಿ ಅವರ ಪತ್ನಿ ಸ್ಪಂದನ ಅವರು ಎದುರು ನೋಡುತ್ತಿದ್ದರಂತೆ. ಅವರ ಡೈರಿಯಲ್ಲಿ ಇದನ್ನು ಕೂಡ ಬರೆದುಕೊಂಡಿದ್ದು, ನಟ ವಿಜಯ್ ರಾಘವೇಂದ್ರ ಅವರ ಯಶಸ್ವಿಗಾಗಿ ಕಾಯುತ್ತಿದ್ದರು, ನಾನೇ ಸಿನಿಮಾಗಳ ನಿರ್ಮಾಣ ಮಾಡಬೇಕು ಎಂದು ಕನಸು ಹೊತ್ತಿದ್ದರೂ ಆ ದೇವರು ಅವರೆಲ್ಲ ಕನಸುಗಳನ್ನ ನುಚ್ಚು ನೂರು ಮಾಡಿ ಬಿಟ್ಟ. ಅತಿ ಬೇಗನೆ ತನ್ನತ್ತ ಕರೆಸಿಕೊಂಡುಬಿಟ್ಟ. ಹೌದು ಇದೀಗ ಸ್ಪಂದನ ಅವರ ಅಗಲಿಕೆಯಿಂದ ರಾಘು ಶ್ರೀಮುರುಳಿ ಮತ್ತು ಅತ್ತ ಬಿಕೆ ಶಿವರಾಂ ಅವರ ಇಡೀ ಕುಟುಂಬ ಎಲ್ಲರೂ ಕೂಡ ನೋವಿನಲ್ಲಿದ್ದಾರೆ.
ಇತ್ತೀಚಿಗೆ ಸ್ಪಂದನ ಅವರ ಪುಣ್ಯತಿಥಿ ಕಾರ್ಯ ಕೂಡ ಜರುಗಿತು, ಏನೇ ಇರಲಿ ವಾಸ್ತವವನ್ನು ನಂಬಿ ಮುಂದೆ ಜೀವನ ಸಾಗಿಸಲೇಬೇಕು, ಇಲ್ಲಿದೆ ನೋಡಿ ಶ್ರೀಮುರಳಿ ಅತ್ತಿಗೆ ಸ್ಪಂದನ ಅವರ ಬಗ್ಗೆ ಹೇಳಿದ ಕೆಲ ಮಾತುಗಳ ವಿಡಿಯೋ. ಒಮ್ಮೆ ನೋಡಿ. ಮಾಹಿತಿಯನ್ನು ಇನ್ನೊಮ್ಮೆ ಖಚಿತಪಡಿಸಿಕೊಳ್ಳಿ, ಮತ್ತು ಈ ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು... ( video credit ; kannada taja suddi )