ಒಂಬತ್ತು ವರ್ಷಗಳ ಹಿಂದೆ ಒಟ್ಟಿಗೆ ಸಂದರ್ಶನ ಕೊಟ್ಟಿದ್ದ ವಿಜಯ್ ಸ್ಪಂದನಾ..! ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ.

ಒಂಬತ್ತು ವರ್ಷಗಳ ಹಿಂದೆ ಒಟ್ಟಿಗೆ ಸಂದರ್ಶನ ಕೊಟ್ಟಿದ್ದ ವಿಜಯ್ ಸ್ಪಂದನಾ..! ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ.

ನಟ ವಿಜಯ್ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನಾ ಅವರು ಹೇಗೆ ಜೀವನವ ನಡೆಸಿದ್ದರು. ಅವರ ನಿಜ ಜೀವನ ಹೇಗಿತ್ತು ಎಂಬುದಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಹೃದಯಘಾಥದಿಂದ ಇದೀಗ ಸಾವನಪ್ಪಿದ್ದಾರೆ..ಈ ವಿಚಾರ ಎಲ್ಲಾ ಕಡೆ ಕೇಳಿ ಬರುತ್ತಿದ್ದಂತೆ, ತುಂಬಾನೇ ನೋವಿನ ವಿಚಾರ ಇದಾಗಿದೆ ಎನ್ನಬಹುದು. ಸ್ಪಂದನ ಅವರನ್ನು ಕರೆದುಕೊಂಡು ಹೋಗಿ ದೇವರು ತಪ್ಪು ನಿರ್ಧಾರ ಮಾಡಿದ ಎನ್ನುವ ಮಟ್ಟಕ್ಕೆ ಇವರ ಅಗಲಿಕೆಯ ನೋವು ಎಲ್ಲರಿಗೂ ಸಹ ಕಾಡುತ್ತಿದೆ. ಆ ಕುಟುಂಬಸ್ಥರು, ನಟ ವಿಜಯ್ ಅವರ ಅಭಿಮಾನಿಗಳು, ಆ ದೇವರನ್ನು ಶಪಿಸುವ ಹಾಗಾಗಿದೆ.

ಹೌದು ಇಷ್ಟು ಸಣ್ಣ ವಯಸ್ಸಿನ ಸ್ಪಂದನಾ ಅವರನ್ನು ದೇವರು ಕರೆದುಕೊಂಡು ಹೋಗಬಾರದಿತ್ತು, ಸ್ಪಂದನಾ ಅವರದು ಮುಗ್ಧ ಸ್ವಭಾವ, ಅವರ ಸರಳತನ ಮತ್ತು ಹೆಚ್ಚು ಮಾತನಾಡದ ವ್ಯಕ್ತಿತ್ವ ಅವರದ್ದು ಆಗಿತ್ತು. ಹಾಗೆ ಅವರ ನಗು ಸಹ ಅದ್ಭುತವೇ ಸರಿ. ಅಷ್ಟು ಸರಳತೆಯ ಸಾಮ್ಯತೆ ವ್ಯಕ್ತಿ ಸ್ಪಂದನ ಅವರು ಆಗಿದ್ದರು. ಇಂದು ಬೆಂಗಳೂರಿಗೆ ಸ್ಪಂದನ ಅವರ ಮೃತ ದೇಹ ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬರಲಿದೆ. ಇಂದು ಅಥವಾ ನಾಳೆ ಅಂತ್ಯ ಸಂಸ್ಕಾರ ಕ್ರಿಯೆ ನಡೆಯಲಿದೆ. ಇದರ ನಡುವೆ ಅವರ ಜೀವನದ ಶೈಲಿಯ ಒಂದೊಂದೇ ವಿಚಾರಗಳು ಹೊರ ಬರುತ್ತಿದ್ದರೆ ನಿಜಕ್ಕೂ ನೋವಿನ ವಿಷಯ ಇವು ಎನ್ನಬಹುದು. ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಅವರು ಹೇಗೆ ಮದುವೆಯಾದರು, ಅವರ ಲವ್ ಸ್ಟೋರಿ ಕಹಾನಿ ಹೇಗಿತ್ತು ಎಂಬುದಾಗಿ ನೀವೂ ಕೂಡ ಈ ವಿಡಿಯೋದಲ್ಲಿ ನೋಡಿ ತಿಳಿಯಿರಿ.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಅವರ ಕೌಟುಂಬಿಕ ಜೀವನ ಹೇಗಿತ್ತು ಅಂದ್ರೆ, ಸಾಕಷ್ಟು ಬಾರಿ ವೇದಿಕೆ ಮೇಲೆ ವಿಜಯ್ ಅವರೇ ಹೇಳಿಕೊಂಡಿದ್ದಾರೆ. ನನಗೆ ಸುಸ್ತು ಆದಾಗ, ಜೀವನದಲ್ಲಿ ಏನೂ ಕೂಡ ನನ್ನಿಂದ ಆಗುತ್ತಿಲ್ಲವಲ್ಲ ಎಂದು ನಾ ಕುಗ್ಗಿ ಹೋದಾಗ, ಊಹಿಸಲಾಗದ ರೀತಿ ಕಷ್ಟಗಳು ನನ್ನ ಎದುರಿಗೆ ಬಂದಾಗ, ನನ್ನ ಒಟ್ಟಿಗೆ ನಿಂತಿದ್ದು ಮತ್ತು ನನಗೆ ಧೈರ್ಯ ತುಂಬಿದ್ದು ನನ್ನ ಹೆಂಡತಿ ಸ್ಪಂದನ ಎಂದಿದ್ದರು. ಹಾಗೆ ಕಣ್ಣೀರು ಇಡುತ್ತಾ ಅವರನ್ನ ಎಷ್ಟು ಹಚ್ಚಿಕೊಂಡಿದ್ದಾರೆ, ಎಷ್ಟು ಪ್ರೀತಿ ಮಾಡುತ್ತಿದ್ದಾರೆ ಎಂಬುದಾಗಿ ಹೆಚ್ಚು ಬಾರಿ ವೇದಿಕೆ ಮೇಲೆಯೇ ಪ್ರೀತಿ ವ್ಯಕ್ತಪಡಿಸುತ್ತಿದ್ದರು. 

ಈಗ ನಿಧನ ಆಗಿರುವ ಸ್ಪಂದನ ಅವರ ಅಗಲಿಕೆಯಿಂದ ವಿಜಯ್ ರಾಘವೇಂದ್ರ ಅವರು ಅದು ಹೇಗೆ ಹೊರ ಬರುತ್ತಾರೆ ಆ ದೇವರೇ ಬಲ್ಲ. ಸುಮಾರು 9 ವರ್ಷಗಳ ಹಿಂದೆ ನಟ ವಿಜಯ್ ರಾಘವೇಂದ್ರ, ಮತ್ತು ಸ್ಪಂದನ ಅವರು ಖಾಸಗಿ ಚಾನೆಲ್ ಗೆ ಅವರ ದಾಂಪತ್ಯ  ಜೀವನದ ಬಗ್ಗೆ ಮತ್ತು ನಿಜ ಜೀವನದ ಬಗ್ಗೆ, ಸಿನಿಮಾ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಸ್ಪಂದನ ಅವರನ್ನು ಅವರ ತವರು ಮನೆಯಲ್ಲಿ ಪ್ರೀತಿಯಿಂದ ಅಚ್ಚು ಎಂದೇ ಕರೆಯುತ್ತಾರೆ. ಅಸಲಿಗೆ ಸ್ಪಂದನ ಅವರ ಕುಟುಂಬ ಹೇಗಿತ್ತು, ಅತ್ತ ನಟ ವಿಜಯ್ ರಾಘವೇಂದ್ರ ಅವರ ಕುಟುಂಬ ಹೇಗಿತ್ತು, ಅವರು ಹೇಗೆ ಮೊದಲ ಬಾರಿ ಸ್ಪಂದನ ಅವರನ್ನು ಭೇಟಿಯಾದರು, ನಂತರ ಧೈರ್ಯ ಸಾಲದೇ ಇದ್ದಾಗ ಮತ್ತೊಮ್ಮೆ ಭೇಟಿಯಾದಾಗ ವಿಜಯ ರಾಘವೇಂದ್ರ ಅವರು ಯಾವ ರೀತಿ ಸ್ಪಂದನ ಅವರಿಗೆ ಪ್ರಪೋಸ್ ಮಾಡಿ ನಂತರ ಮನೆಯವರನ್ನು ಒಪ್ಪಿಸಿ ಮದುವೆಯಾದರು ಎಂಬುದಾಗಿ ಎಲ್ಲವನ್ನ ಈ ವಿಡಿಯೋದಲ್ಲಿ ಅವರೇ ಸ್ವತಹ ಹೇಳಿಕೊಂಡಿದ್ದಾರೆ.

ಹಾಗೆ ತಮ್ಮ ಮತ್ತು ಸ್ಪಂದನ ಅವರ ನಡುವಿನ ದಾಂಪತ್ಯ ಜೀವನ ಹೇಗಿತ್ತು, ಹೇಗೆ ನಾನು ಮುಂದೆ ಬರುವ ಹೆಂಡ್ತಿಯನ್ನ ಖುಷಿಯಿಂದ ಇಡಬೇಕು ಎಂಬುದಾಗಿ ವಿಜಯ ರಾಘವೇಂದ್ರ ಅವರು ಅಂದು ಕನಸು ಕಂಡಿದ್ದರು ಗೊತ್ತಾ.? ಜೊತೆಗೆ ಮದುವೆ ಆಗುವ ಮುನ್ನ ಯಾವೆಲ್ಲ ಕನಸುಗಳನ್ನು ಹೆಂಡತಿ ವಿಚಾರದಲ್ಲಿ ಕಂಡಿದ್ದರು ವಿಜಯ್ ರಾಘವೇಂದ್ರ ಅವ್ರು ಎಂಬುದಾಗಿ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ. ಸ್ಪಂದನ ಅವರು ಆಡಿದ ಕೆಲವೇ ಕೆಲವು ಮಾತುಗಳು ಆದರೂ ಕೂಡ ಈ ವಿಡಿಯೋದಲ್ಲಿ ಅವರ ಮಾತುಗಳನ್ನು ಕೇಳಿದ ತಕ್ಷಣ ಕಣ್ಣಂಚಲಿ ನೀರು ಬಂದೆ ಬರುತ್ತದೆ. ( video credit : star suvarna plus )

ಅಷ್ಟು ಸರಳತನ ಹೆಚ್ಚು ಮಾತನಾಡುವುದೇ ಇಲ್ಲ. ಇಂತಹ ವ್ಯಕ್ತಿತ್ವ, ಒಳ್ಳೆಯ ಮನಸ್ಥಿತಿ ಹೊಂದಿದ ಸ್ಪಂದನ ಅವರನ್ನು ದೇವರು ತನ್ನ ಬಳಿ ಬೇಗ ಕರೆದುಕೊಂಡಿದ್ದು ವಿಷಾದನೀಯ. ನಿಜಕ್ಕೂ ಈ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಎಷ್ಟು ಸುಂದರವಾಗಿತ್ತು ಗೊತ್ತ ಈ ಜೋಡಿ. ಈ ವಿಡಿಯೋವನ್ನು ಕೊನೆಯವರೆಗೂ ನೋಡಿ...