ಸ್ಪಂದನ ಕಳೆದ ವರ್ಷ ಹೇಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದರು ಗೊತ್ತೇ..? ಇಲ್ನೋಡಿ

ಸ್ಪಂದನ ಕಳೆದ ವರ್ಷ ಹೇಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದರು ಗೊತ್ತೇ..? ಇಲ್ನೋಡಿ

ಹೌದು, ರಾಜ್ಯದಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬ ತುಂಬಾ ಜೋರಾಗಿಯೇ ನಡೆಯುತ್ತಿದೆ. ಇದನ್ನು ಹೆಚ್ಚಾಗಿ ಹಳ್ಳಿಗಳಲ್ಲಿ ಮಾಡುವುದು ಕಡಿಮೆ ಎಂದು ಹೇಳಬಹುದು. ಕೆಲವರು ಈ ಹಬ್ಬವನ್ನು ಆಚರಣೆ ಮಾಡುವುದಿಲ್ಲ. ಇನ್ನೂ ಕೆಲವರು ಈ ವರಮಹಾಲಕ್ಷ್ಮಿ ಹಬ್ಬದ ಆಚರಣೆಯಲ್ಲಿ ಲಕ್ಷ್ಮಿಯನ್ನ ಪೂಜೆ ಮಾಡಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ಹಬ್ಬದ ಆಚರಣೆ ಮಾಡುತ್ತಾರೆ. ಆದರೆ ಸಿಟಿಗಳಲ್ಲಿ ಈ ವರಮಹಾಲಕ್ಷ್ಮಿ ಹಬ್ಬವನ್ನು ತುಂಬಾ ಗ್ರಾಂಡ್ ಆಗಿಯೇ ಮಾಡುತ್ತಾರೆ ಎಂದು ಹೇಳಬಹುದು. ಮನೆಯಲ್ಲಿ ಸಂಭ್ರಮ ಸಡಗರ ಜೊತೆಗೆ ಲಕ್ಷ್ಮಿಗೆ ಪೂಜೆ ಸಲ್ಲಿಸಿ ಅವರ ಇಷ್ಟಾರ್ಥ ಕನಸುಗಳನ್ನು ಮತ್ತು ಅವರ ಆಸೆಗಳನ್ನು ಲಕ್ಷ್ಮಿ ದೇವಿ ಬಳಿ ಬೇಡಿಕೆಯಾಗಿ ಇಡುತ್ತಾರೆ.

ಸ್ಪಂದನ ವಿಜಯ್ ಅವರು ಕಳೆದ ಬಾರಿ ಇದೆ ವರ ಮಹಾಲಕ್ಷ್ಮಿ ಪೂಜೆಯಲ್ಲಿ ಕಾಣಿಸಿದ್ದರು. ಅದೊಂದು ವಿಡಿಯೋ ಇದೀಗ ಭಾರಿ ವೈರಲಾಗುತ್ತಿದೆ. ಸ್ಪಂದನ ವಿಜಯ್ ಅವರು ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಪ್ರತಿ ವರ್ಷ ಆಚರಣೆ ಮಾಡಿ ಹಬ್ಬವನ್ನ ಗ್ರಾಂಡ್ ಆಗಿಯೇ ಆಚರಿಸುತ್ತಿದ್ದರು. ಆದರೆ ಈ ಬಾರಿ ಅವರೇ ಇಲ್ಲ. ಅವರಿಲ್ಲದೆ ರಾಘು ಮನೆಯಲ್ಲಿ ಯಾವ ಸಂತೋಷವೂ ಈ ಬಾರಿ ಇಲ್ಲ ಎಂದು ಹೇಳಬಹುದು. ಹೀಗಿರುವಾಗ ಕಳೆದ ವರ್ಷ ಅವರ ಸ್ನೇಹಿತೆ ಮನೆಯಲ್ಲಿ ವರಮಹಾಲಕ್ಷ್ಮಿಯ ಹಬ್ಬದಲ್ಲೇ ಸ್ಪಂದನ ಕಾಣಿಸಿದ್ದರು.

ಸ್ಪಂದನ ಅವರು ಅದೆಷ್ಟು ಮುದ್ದಾಗಿ ಕಾಣಿಸಿದ್ದರು ಗೊತ್ತೇ.? ಜೊತೆಗೆ ಅಷ್ಟೇ ಸರಳತನದಿಂದಲೇ ಪೂಜೆಯಲ್ಲಿ ಭಾಗಿಯಾಗಿದ್ದ ಸ್ಪಂದನ ಅವರನ್ನ ನೀವು ಈ ವಿಡಿಯೋದಲ್ಲಿ ಗಮನಿಸಬಹುದು. ಸ್ಪಂದನ ಹಾಗೂ ವಿಜಯ್ ಅವರು ಒಬ್ಬರನ್ನೊಬ್ಬರು ಪ್ರೀತಿ ಮಾಡಿ ಮದುವೆ ಆಗಿದ್ದರು.. ಇಲ್ಲಿಯವರೆಗೆ ಇವರ ಕುಟುಂಬದಲ್ಲಿ ದೇವರು ಎಲ್ಲವನ್ನ ನೀಡಿದ. ಹಾಗೆ ಸಂತೋಷಕ್ಕೆ ಕೊರತೆಯೆ ಇರಲಿಲ್ಲ. ಆದ್ರೆ ಇದೀಗ ಇದ್ದಕ್ಕಿದ್ದಂತೆ ಅವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಗಾಳಿಯಬ್ಬಿಸಿ ಸ್ಪಂದನ ಅವರನ್ನು ತನ್ನ ಬಳಿ ಕರೆದುಕೊಂಡು ದೇವರು, ಅವರ ಸಂತೋಷವನ್ನು ಕಸಿದುಕೊಂಡುಬಿಟ್ಟನು.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸ್ಪಂದನ ಅವರು ಹೇಗೆ ಹೋದ ವರ್ಷ ಹಬ್ಬದಲಿ ಕಂಡಿದ್ದರು ಗೊತ್ತಾ..? ಅವರ ಸ್ನೇಹಿತೆಯ ಮನೆಯಲ್ಲಿ ಹೇಗೆ ಕಾಣಿಸಿದ್ದರು ಗೊತ್ತಾ.? ಇಲ್ಲಿ ನೋಡಿ ವಿಡಿಯೋ.. ನಿಜಕ್ಕೂ ಈ ವಿಡಿಯೋ ನೋಡಿದರೆ ಕಣ್ಣಂಚಲಿ ನೀರು ಬರುತ್ತದೆ.. ( video credit : mastar kannada tv )