ಸ್ಪಂದನ ಅವರ ಅಂತ್ಯಕ್ರಿಯೆ ಸರಿಯಾಗಿ ಆಗಿತ್ತ..? ಇದೇನಿದು ಗೊಂಬೆ ಸುಟ್ಟು ನೀರಲ್ಲಿ ಬಿಟ್ಟಿದ್ದು

ಸ್ಪಂದನ ಅವರ ಅಂತ್ಯಕ್ರಿಯೆ ಸರಿಯಾಗಿ ಆಗಿತ್ತ..? ಇದೇನಿದು ಗೊಂಬೆ ಸುಟ್ಟು ನೀರಲ್ಲಿ ಬಿಟ್ಟಿದ್ದು

ಜೀವಕ್ಕೆ ಜೀವ ಆಗಿದ್ದ ನಟ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ವಿಜಯ ರಾಘವೇಂದ್ರ ಅವರನ್ನು ಬಿಟ್ಟು ಬಾರದ ಊರಿಗೆ ಪ್ರಯಾಣವನ್ನ ಈಗಾಗಲೇ ಬೆಳೆಸಿದ್ದಾರೆ. ಹೌದು ಇನ್ನೆಂದು ಸ್ಪಂದನ ಅವರು ಮರಳಿ ಬಾರದ ಜಾಗಕ್ಕೆ ಹೋಗಿರುವುದು ಅತ್ಯಂತ ಕಷ್ಟಕರವಾದ ವಿಚಾರ. ಇದರಿಂದ ವಿಜಯ ರಾಘವೇಂದ್ರ ಕುಟುಂಬಸ್ಥರು, ಅತ್ತ ಸ್ಪಂದನ ಅವರ ತಂದೆ ಶಿವರಾಮ ಅವರ ಕುಟುಂಬಸ್ಥರು ಇಂದು ಅವರ ಪುಣ್ಯತಿಥಿ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಸ್ಪಂದನ ಅವರು ಇನ್ನಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಅಂದು ಕರ್ನಾಟಕದಲ್ಲಿ ವಿಜಯ ರಾಘವೇಂದ್ರ ಅವರ ಅಭಿಮಾನಿಗಳು ಕಣ್ಣೀರನ್ನು ಸುರಿಸಿದ್ದರು.

ಜೊತೆಗೆ ಇಡಿ ಕುಟುಂಬಸ್ಥರು ಕಣ್ಣೀರು ಹಾಕಿದ್ದನ್ನು ಕೂಡ ನೀವು ನೋಡಿದ್ದೀರಿ....ತದನಂತರ ಹಂತ ಹಂತವಾಗಿ ಸ್ಪಂದನ ಅವರ ಅಂತಿಮ ದರ್ಶನ ಆಗಿತ್ತು ನಂತರ ಅಂತಿಮ ಕ್ರಿಯೆ ಕೂಡ ಹರಿಚ್ಚಂದ್ರ ಘಾಟ್ ನಲ್ಲಿ ನಡೆಯಿತು. ಮೂರು ದಿನದ ಹಾಲು ತುಪ್ಪ ಕಾರ್ಯ, ಹಾಗೆ ಮಗನ ಕೈಯಲಿ ಮುಡಿ ಕೊಡುವ ಸಂಪ್ರದಾಯ ಎಲ್ಲವೂ ಆಯ್ತು, ಜೊತೆಗೆ ಸ್ಪಂದನ ಅವರು ಉತ್ತರ ಬಾದ್ರಪದ ನಕ್ಷತ್ರದಲ್ಲಿ ಸಾವನ್ನಪ್ಪಿರುವ ಕಾರಣ ಶಾಂತಿ ಹೋಮ ಕೂಡ ಇಂದು ಮಾಡಿಸಲಾಗಿದೆ ಎಂದು ಸ್ವಾಮೀಜಿಗಳು ಹೇಳಿಕೊಂಡಿದ್ದಾರೆ. ಹೌದು ಇದಕ್ಕೂ ಮುಂಚೆ ಸ್ಪಂದನ ಅವರ ಅಸ್ತಿಯನ್ನು ಹೊಳೆಯಲ್ಲಿ ಬಿಡಲಾಗಿತ್ತು..   

ಎಲ್ಲಾ ವಿಧಿ ವಿಧಾನಗಳ ಪೂಜೆ ಕಾರ್ಯಕ್ರಮಗಳನ್ನು ಮುಗಿಸಿ ಸ್ಪಂದನಾ ಅವರ ಅಸ್ತಿಯನ್ನು ಹೊಳೆಯಲ್ಲಿ ಬಿಡಲಾಗಿತ್ತು. ಹೌದು ಸ್ಪಂದನವರ ಅಂತ್ಯಕ್ರಿಯೆಯಲ್ಲಿ ಪೂಜೆ ಮಾಡುವಾಗ ಏನಾದರೂ ತಪ್ಪು ಆಗಿತ್ತಾ ಎನ್ನಲಾಗಿ ಕೆಲ ಪ್ರಶ್ನೆಗಳು ಉದ್ಭವ ಆಗಿದ್ದಾವೆ. ಇವರ ಎಲ್ಲಾ ಪೂಜೆ ಕೈಗೊಂಡ ಸ್ವಾಮೀಜಿಗಳು ಇದರ ಬಗ್ಗೆ ಸಂಕ್ಷಿಪ್ತವಾಗಿ ಮಾದ್ಯಮದ ಎದುರು ಹೇಳಿಕೊಂಡರು. ಹೌದು ಗೊಂಬೆಯನ್ನು ಹಾಲುತುಪ್ಪ ಬಿಡುವ ಮುನ್ನ  ಪೂಜೆಯ ಸಂದರ್ಭದಲ್ಲಿ ಸುಡಲಾಗಿತ್ತು. ಇದರ ಅರ್ಥ ಏನು ಎಂಬುದಾಗಿ ಇದೀಗ ಸ್ವಾಮೀಜಿಯೊಬ್ಬರು ಹೇಳಿಕೊಂಡಿದ್ದಾರೆ ಅದು ಈ ವಿಡಿಯೋದಲ್ಲಿದೆ..

ಹಾಗೆ ವಿಜಯ ರಾಘವೇಂದ್ರ ಅವರು ಮನೆಯ ಬಿಡಬೇಕು ಐದು ತಿಂಗಳು ಎನ್ನುವ ವಿಚಾರ ಕೂಡ ಮೊನ್ನೆ ಕೇಳಿ ಬಂದಿತ್ತು. ಅದರ ಕುರಿತಾಗಿ ಈಗಾಗಲೇ ಶಾಂತಿ ಹೋಮ ಮಾಡಿಸಿದ್ದು, ನಕ್ಷತ್ರ ಹೋಮ ಕೂಡ ಮಾಡಿಸಿದ್ದಾರೆ..ಹೌದು ಧನಿಷ್ಠ ಪಂಚಕ ನಕ್ಷತ್ರ ಮತ್ತು ತ್ರಿಪಾದಿ ನಕ್ಷತ್ರ ಬರುತ್ತದಂತೆ. ಧನಿಷ್ಠ ಪಂಚಕ ನಕ್ಷತ್ರ ಅಂದರೆ ಮನೆಯಲ್ಲಿಯೇ ಸಾವನ್ನಪ್ಪಿದಾಗ ಮಾತ್ರ ಮನೆ ಬಿಡುವ ಸಾಧ್ಯತೆ ಇರುತ್ತದೆ. ಆದರೆ ಸ್ಪಂದನ ಅವರು ವಿದೇಶದಲ್ಲಿ ಇದ್ದಾಗ ಈ ಘಟನೆ ಸಂಭವಿಸಿದ್ದು ಇದರಿಂದ ಯಾವ ತೊಂದರೆಯೂ ಇಲ್ಲ, ವಿಜಯ ರಾಘವೇಂದ್ರ ಮನೆ ಬಿಡುವ ಪರಿಸ್ಥಿತಿ ಬರುವುದಿಲ್ಲ ಎಂದು ಪೂಜೆ ಮುಗಿದ ಬಳಿಕ ಸ್ವಾಮೀಜಿಗಳು ಹೇಳಿಕೊಂಡಿದ್ದರು ಎಂದು ಈ ವಿಡಿಯೋ ಮೂಲಕ ತಿಳಿದುಬಂದಿದೆ. 

ಉತ್ತರಭಾದ್ರ ನಕ್ಷತ್ರದಲ್ಲಿ ಈಗಾಗಲೇ ಹೋಮ ಮಾಡಿಸಿದ್ದು, ಗೊಂಬೆಯನ್ನು ಕೂಡ ಅಂದು ಸುಟ್ಟು ಹಾಕಿದ್ದಾರೆ. ಅಸಲಿಗೆ ಗೊಂಬೆಯನ್ನ ಯಾಕೆ ಸುಟ್ಟರೂ.? ಇದರ ಬಗ್ಗೆ ಇರುವ ಈಡಿಗ ಸಂಪ್ರದಾಯ ಜನರ ನಂಬಿಕೆ ಎಂತದ್ದು..? ಈ ಬಗ್ಗೆ ಇಲ್ಲಿರುವ ವಿಡಿಯೋದಲ್ಲಿ ಮಾಹಿತಿ ತಿಳಿಸಿದ್ದಾರೆ. ಪೂರಾ ವಿಡಿಯೋ ನೋಡಿ. ಹಾಗೆ ಶೇರ್ ಸಹ ಮಾಡಿ, ಮತ್ತೆ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ, ಧನ್ಯವಾದಗಳು... ( video credit : Focus )