ಖ್ಯಾತ ಕನ್ನಡ ನಟನ ಪತ್ನಿ ಕಾರು ಭೀಕರ ಅಪಘಾತ!! ಸಾವು ಬದುಕಿನ ನಡುವೆ ಹೋರಾಟ!!

ಬಾಲಿವುಡ್ ನಟ ಸೋನು ಸೂದ್ ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಪತ್ನಿ ಸೋನಾಲಿ ಸ್ಥಿತಿ ಗಂಭೀರವಾಗಿದೆ. ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೋನು ಸೂದ್ ಅವರ ಸಹೋದರಿ ಮತ್ತು ಅವರ ಮಗನಿಗೂ ಭಾರಿ ಪೆಟ್ಟು ಬಿದ್ದಿದ್ದು ಎಲ್ಲರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಅಪಘಾತದ ಫೋಟೋಗಳು ವೈರಲ್ ಆಗಿದ್ದು, ಇದರಲ್ಲಿ ಕಾರು ನಜ್ಜುಗುಜ್ಜಾಗಿರುವುದನ್ನು ನೋಡಬಹುದು. ಮುಂಬೈ ನಾಗ್ಪುರ ಹೆದ್ದಾರಿಯ ಬಳಿ ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸೋನು ಸೂದ್ "ಶ್ರೀಮಂತ" (2023), "ಕುರುಕ್ಷೇತ್ರ" (2019), "ವಿಷ್ಣುವರ್ಧನ" (2016), ಮತ್ತು "ಸೀತಾ" (2019) ಸೇರಿದಂತೆ ಹಲವಾರು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ ಚಿತ್ರದಲ್ಲಿ ಸುದೀಪ್ ಎದುರಿಗೆ ವಿಲನ್ ಆಗಿ ನಟಿಸಿದ್ದರು
ಮುಂಬೈ-ನಾಗ್ಪುರ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಸೋನು ಸೂದ್ (Sonu Sood) ಅವರ ಪತ್ನಿ ಸೋನಾಲಿ ಸೂದ್ (Sonali Sood), ಅವರ ಸಹೋದರಿ ಮತ್ತು ಸೋದರಳಿಯ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಾಗ್ಪುರದ ಸೋಂಗಾವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋನಾಲಿ ಸೂದ್ ಅವರ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಹಾನಿಯಾಗಿದೆ. ಆದರಂತೆ, ಸೋನಾಲಿ ಮತ್ತು ಅವರ ಸೋದರಳಿಯ ಇಬ್ಬರೂ ಗಾಯಗೊಂಡಿದ್ದು, ಪ್ರಸ್ತುತ ನಾಗ್ಪುರದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಪಘಾತಕ್ಕೂ ಮುನ್ನ ಸೋನಾಲಿ ಸೂದ್ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರು ಮತ್ತು ಅವರ ಕುಟುಂಬ ಸದಸ್ಯರು, ಅತ್ತಿಗೆ ಮತ್ತು ಇತರ ಸಂಬಂಧಿಕರು ಹಿಂಭಾಗದಲ್ಲಿ ಕುಳಿತಿದ್ದರು ಎನ್ನಲಾಗಿದೆ.
ಸೋನು ಅವರ ವಕ್ತಾರರು ಈ ಸುದ್ದಿಯನ್ನು ದೃಢಪಡಿಸಿದ್ದಾರೆ, "ಹೌದು, ಸೋನಾಲಿ ಸೂದ್ ಅವರು ಅಪಘಾತಕ್ಕೀಡಾಗಿದ್ದರು. ಆದರಂತೆ, ಸೋನಾಲಿ ಮತ್ತು ಅವರ ಸೋದರಳಿಯನನ್ನು ನಿಕಟವಾಗಿ ವೈದ್ಯರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಆದರಂತೆ, ಮುಂದಿನ 48-72 ಗಂಟೆಗಳ ಕಾಲ ಅವರ ಸ್ಥಿತಿಯನ್ನು ಗಮನಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ದೃಢಪಡಿಸಿದ್ದಾರೆ. ಏತನ್ಮಧ್ಯೆ, ಸೋನಾಲಿಯ ಸಹೋದರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.