ಬ್ರೇಕಿಂಗ್ ನ್ಯೂಸ್ : ರೀಲ್ಸ್ ರಾಣಿ ಸೋನು ಶ್ರೀನಿವಾಸ ಗೌಡ ಮದುವೆ ಅಂತೇ ಸ್ವತಃ ಸುದ್ದಿ ಕೊಟ್ಟ ಸೋನು
ಸೋನು ಶ್ರೀನಿವಾಸ ಗೌಡ ಅವರು ಮಾಲ್ಡೀವ್ಸ್‌ಗೆ ಭೇಟಿ ನೀಡಿದಾಗ ರೀಲ್ಸ್ ಮಾಡುವುದರಲ್ಲಿ ಪ್ರಸಿದ್ಧಿ ಪಡೆದರು ಮತ್ತು ಅವರ ವಿಡಿಯೋಗಳಿಗೆ ಒಂದು ಮಿಲಿಯನ್ ವೀಕ್ಷಣೆಗಳನ್ನು ಪಡೆದರು. ಈಗ, ಅವರು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಸುದಿನವನ್ನು ಹಂಚಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ಹುಡುಗನ ಹೆಸರು ಮತ್ತು ಇತರ ವಿವರಗಳನ್ನು ತಿಳಿಸುತ್ತಾರೆ ಎಂದು ಹೇಳಿದ್ದಾರೆ.
ಮದುವೆ ಬಗ್ಗೆ ಮಾತಾಡಿದ್ದ ಸೋನು ಗೌಡ, ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೀನಿ. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅಂತ ಅನೀಸುತ್ತಿದೆ. ಹುಡುಗು ಯಾರು ಅಂತ ತಿಳಿದುಕೊಳ್ಳಬೇಕಾದರೇ ಕಾಮೆಂಟ್ಸ್ ಮಾಡಿ ಅಂತ ಹೇಳಿದ್ದಾರೆ. ಆದರೆ ಹುಡುಗ ಯಾರು, ಯಾವಾಗ ಮದುವೆ ಅಂತ ಸೋನು ಗೌಡ ಹೇಳಿಕೊಂಡಿಲ್ಲ. ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿದ್ದಾರೆ. ಹೊಸ ಹೊಸ ರೀಲ್ಸ್ ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಲ್ಲಿ ಇರುತ್ತಾರೆ. ಆದರೆ ಇದೀಗ ಮದುವೆ ವಿಚಾರ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಸೋನು ಅವರ ರೀಲ್ಸ್‌ಗಾಗಿ ತೀವ್ರವಾಗಿ ಟ್ರೋಲ್‌ಗೊಳ್ಳುತ್ತಿದ್ದಾರೆ. ಈ ಸುದ್ದಿ ಅವರು ತಮಾಷೆಗೆ ಹೇಳಿದರೋ ಅಥವಾ ನಿಜವಾಗಿಯೂ ಹೇಳಿದರೋ ಎಂಬುದನ್ನು ನಾವು ತಿಳಿಯಲು ಕಾಯಬೇಕು.
ಈ ಸುದ್ದಿಯನ್ನು ಸೋನು ಅವರು ತಮ್ಮ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಆದಾಗ್ಯೂ, ಅವರ ಭವಿಷ್ಯದ ಜೀವನಕ್ಕೆ ಶುಭಾಶಯಗಳನ್ನು ಕೋರುತ್ತೇವೆ ( video credit :Vishwavani TV Special )