ಅಮ್ಮ ಅಕ್ಕ ಅಂಥಾ ಟ್ರೊಲ್ ಮಾಡ್ತಾರೆ..; ಸೋನು ಗೌಡ ಅಮ್ಮಗೆ ಏನಾಗಿದೆ ಗೊತ್ತಾ..! ಈಗ ಕಣ್ಣೀರಿನಲ್ಲಿ ಸೋನು ಗೌಡ
ಸೋನು ಶ್ರೀನಿವಾಸ ಗೌಡ. ಹೌದು ಈ ಹೆಸರನ್ನು ಬಹುತೇಕರು ಈಗಾಗಲೇ ಕೇಳಿದ್ದೀರಿ. ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಒಂದಲ್ಲ ಒಂದು ವಿಚಾರಗಳಲ್ಲಿ ಕಂಡು ಬರುತ್ತಲೆ ಬಂದಿದ್ದಾರೆ. ಇತ್ತೀಚಿಗೆ ಕಳೆದ ಒಟಿಟಿ ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದು ಹೆಚ್ಚು ಸುದ್ದಿಯಲ್ಲಿದ್ದರು. ಹೌದು ಈ ಮುಂಚೆ ಇವರ ಸಾಕಷ್ಟು ವಿಚಾರಗಳ ವಿಡಿಯೋಗಳು ಹೆಚ್ಚು ವೈರಲ್ ಆಗಿದ್ದಾವೇ. ಹಾಗೆ ಅವುಗಳೆಲ್ಲ ಡಬ್ಸ್ಮ್ಯಾಶ್ ವಿಡಿಯೋ ಆಗಿದ್ದವು ಎಂದು ಹೇಳಬಹುದು. ನಂತರದ ದಿನದಲ್ಲಿ ಒಂದು ವಿಡಿಯೋ ಹೊರಗಡೆ ಬಂದು ತುಂಬಾನೇ ಕೆಟ್ಟದಾಗಿ ಕಾಣಿಸಿಕೊಂಡಿದ್ದ ಈ ಸೋನು ಶ್ರೀನಿವಾಸ ಗೌಡ ಅವರು ಇಂದಿಗೂ ಕೂಡ ಆ ತಪ್ಪಿಗಾಗಿ ಬೆಲೆ ಕಟ್ಟುತಲೆ ಇದ್ದಾರೆ.
ಹೆಚ್ಚು ಮಾನಸಿಕವಾಗಿ ನೋವ ಎದುರಿಸುತ್ತಿದ್ದಾರೆ ಸೋನು. ದಿನೇ ದಿನೇ ಅದೊಂದನ್ನೇ ಇಟ್ಟುಕೊಂಡು ಕೆಲ ನೆಟ್ಟಿಗರು, ಈ ಟ್ರೋಲಿಗರು ಇವರ ವಿಚಾರವಾಗಿ ತುಂಬಾ ಕೆಟ್ಟದಾಗಿ ಟ್ರೋಲ್ ಮಾಡುತ್ತ ಬಂದಿರೋದನ್ನ ನೀವೂ ಸಹ ಗಮನಿಸಿದ್ದಿರಿ. ಹೌದು ಇದೀಗ ಸೋನು ಶ್ರೀನಿವಾಸ ಗೌಡ ಅವರು ಮತ್ತೆ ಅವರ ಯೂಟ್ಯೂಬ್ ಖಾತೆಯ ಮೂಲಕ ಒಂದು ವಿಚಾರವನ್ನು ಹೇಳಿದ್ದು ಈ ವಿಡಿಯೋದಲ್ಲಿ ತುಂಬಾನೇ ಕಣ್ಣೀರು ಹಾಕಿದರು ಸೋನು. ಕಾರಣವನ್ನ ಅವರೇ ಬಿಚ್ಚಿಟ್ಟಿದ್ದು ಇತ್ತೀಚಿಗೆ ನಮ್ಮ ತಾಯಿ ಯೂಟ್ಯೂಬ್ ನೋಡುತ್ತಿದ್ದರು, ಆಗ ನನ್ನ ಬಗ್ಗೆ ಕಂಡು ಬಂದ ಆ ಒಂದು ವಿಡಿಯೋ ನೋಡಿ ತುಂಬಾನೇ ನೊಂದುಕೊಂಡಿದ್ದಾರೆ. ಅದನ್ನು ನಾನು ಹೇಗೆ ಸಹಿಸಲಿ ಎಂದು ಒಟ್ಟು ಎಂಟು ವಿಚಾರಗಳ ಬಗ್ಗೆ ಸೋನು ಶ್ರೀನಿವಾಸ ಗೌಡ ಅವರು ಇದೀಗ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೌದು ತಪ್ಪು ಆಗಿದೆ, ಅದನ್ನ ಒಪ್ಪಿಕೊಳ್ಳುತ್ತೇನೆ, ಹಾಗೆ ಅದನ್ನು ತಿದ್ದಿಕೊಳ್ಳಲು ನನಗೆ ಅವಕಾಶ ನೀಡಿ ಎಂದು ಹೇಳಿದರು. ಅವರ ಈ ವಿಡಿಯೋ ನೋಡಿ ಕೆಲವರು ನೀವು ಅಳಬೇಡಿ ಸೋನು, ಜೀವನದಲ್ಲಿ ಈ ರೀತಿ ತೊಂದರೆಗಳಿಗೆ ಕಾಲವೇ ಅವರಿಗೆಲ್ಲ ತಕ್ಕ ಉತ್ತರ ನೀಡುತ್ತದೆ ಎಂಬುದಾಗಿ ಪ್ರೋತ್ಸಾಹದ ಮಾತುಗಳನ್ನು ಆಡಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ. ಸೋನು ಶ್ರೀನಿವಾಸ ಗೌಡ ಅವರ ತಾಯಿ ಕಣ್ಣೀರು ಹಾಕಲು ಅಸಲಿ ಕಾರಣ ಏನೆಂದು ತಿಳಿಯುತ್ತದೆ...ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು..