ಎರಡನೇ ಮದುವೆಗೆ ಸಿದ್ದರಾದ ಸೋನು ಗೌಡ ; ಹೇಳಿದ್ದೇನು ನೋಡಿ
ಸೋನು ಗೌಡ ಅವರು ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದರು ಮತ್ತು ತಮ್ಮ ಮೊದಲ ಪತಿಯ ಚಟುವಟಿಕೆಗಳಿಂದ ತೀವ್ರವಾಗಿ ತೊಂದರೆಗೊಂಡಿದ್ದರು. ಅವರು ವಿಚ್ಛೇದನ ಪಡೆದು ಆ ದುಃಖದ ಘಟನೆಯಿಂದ ಹೊರಬಂದರು. ಆದರೆ, ಅವರು ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು ಮತ್ತು ಅವರ ಇತ್ತೀಚಿನ ಚಿತ್ರ "ಪೇಟೆಂಟ್" ಬಿಡುಗಡೆಗೆ ಸಿದ್ಧವಾಗಿದೆ.
ಈ ಸಂಬಂಧದಲ್ಲಿ, ಸೋನು ಗೌಡ ಅವರು ಸಾಮಾಜಿಕ ಮಾಧ್ಯಮ ಚಾನೆಲ್‌ಗೆ ಸಂದರ್ಶನ ನೀಡಿದಾಗ, ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದರು. "ನಾನು ಖಚಿತವಾಗಿ ಮತ್ತೆ ಮದುವೆಯಾಗಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದರು.
ನನ್ನ ಜೀವನ ತುಂಬಾ ಚೆನ್ನಾಗಿದೆ. ನನ್ನ ಆಲೋಚನೆಗೆ ತಕ್ಕಂತಹ ಪಾರ್ಟ್ನರ್ ಸಿಕ್ಕೇ ಸಿಗುತ್ತಾರೆ. ಸಿಕ್ಕಾಗ ಖಂಡಿತ ಹೇಳುತ್ತೇನೆ. ಪಾರ್ಟ್ನರ್ ಸಿಕ್ಕಿದಾಗ ಖಂಡಿತಾ ಎಲ್ಲರಿಗೂ ತಿಳಿಸುತ್ತೇನೆ..' ಹೀಗಂತ ನೇರವಾಗಿ ಹೇಳಿಬಿಟ್ಟರು ಸೋನು ಗೌಡ.ಇದೇ ವೇಳೆ ಸಂದರ್ಶನವೊಂದರಲ್ಲಿ ಸೋನು ಗೌಡ ಅವರಿಗೆ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳು ಎದುರಾಗಿದೆ. 2ನೇ ಮದುವೆ ಆಗುತ್ತಿರುವ ಬಗೆಗಿನ ಸುದ್ದಿಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದರು.
ನಿಮ್ಮ ಜೀವನಕ್ಕೆ ಇನ್ನೊಬ್ಬ ಪಾರ್ಟ್ನರ್ ಯಾಕೆ ಸಿಗಬಾರದು..? ಅಥವಾ ನೀವು ಆ ಪ್ರೀತಿಗಾಗಿ ಹುಡುಕುತ್ತಿದ್ದಾರಾ..? ಎನ್ನುವ ಪ್ರಶ್ನೆಗೆ ಸಹಜವಾಗಿಯೇ ಉತ್ತರ ನೀಡಿದ ಸೋನು ಗೌಡ, 'ಕೆಲವೊಂದು ಸಹ ನಾವು ಬೇಡ ಎಂದರೂ ಅದು ನಮಗೆ ಸಿಕ್ಕಿರುತ್ತದೆ. ಕೆಲವೊಂದು ಸಹ ಅದು ಬೇಕು ಅಂದರೂ ಅದು ಸಿಕ್ಕಿರುವುದಿಲ್ಲ. ನಾನು ವಿಧಿಯ ಮೇಲೆ ನಂಬಿಕೆ ಇಟ್ಟಿದ್ದೇನೆ. ವಿಧಿ ಆ ವ್ಯಕ್ತಿ ನನ್ನ ಜೀವನಕ್ಕೆ ಬೇಡ ಅಂತಾ ಎಂದುಕೊಂಡಿದ್ದರೆ ಹಾಗೇ ಆಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇದೆ' ಎಂದು ಹೇಳಿದ್ದಾರೆ.
ನನ್ನ ಮೇಲೆ ನಂಬಿಕೆ ಹಾಗೂ ನನ್ನ ವಿಚಾರದಲ್ಲಿ ಸ್ಪಷ್ಟತೆ ಎರಡೂ ಇದೆ. ಜೀವನ ಹೇಗಿರಬೇಕು ಅನ್ನೋದರ ಬಗ್ಗೆ ಸ್ಪಷ್ಟತೆ ಇದೆ. ಇದು ಆ ಹುಡುಗನಲ್ಲೂ ಇರಬೇಕು. ನಮ್ಮ ಆಲೋಚನೆಗಳು ಹೊಂದಾಣಿಕೆ ಆದಾಗ ಚೆನ್ನಾಗಿರುತ್ತದೆ. ಬೇರೆ ಏನೂ ನಿರೀಕ್ಷೆ ಇಲ್ಲ. ಹುಡುಗ ಇದೇ ರೀತಿ ಇರಬೇಕು ಎನ್ನುವ ಯಾವ ನಿರೀಕ್ಷೆ ಕೂಡ ಇಲ್ಲ. ನಾನು ಜೀವನದಲ್ಲಿ ಆರಾಮಾಗಿದ್ದೇನೆ. ಇದೇ ರೀತಿ ನೀವು ಬಂದು ಆರಾಮಾಗಿ ಇರುವುದಿದ್ದರೆ ಇರಿ. ಇಲ್ಲ ಅಂದರೆ ಬೇಡ' ಎಂದು ನೇರವಾಗಿ ತಿಳಿಸಿದ್ದಾರೆ.
ಸೋನು ಗೌಡ ಅವರ ಈ ಮಾತುಗಳು, ಅವರ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.
(video credit :Zee Kannada News Entertainment )