ಸ್ನೇಹಾ ಸತ್ತಿಲ್ಲ!ಬದುಕ್ಬಿಟ್ಲು ಹೇಗೆ ನೋಡಿ ? !ಕತೆಗೆ ರೋಚಕ ತಿರುವು :
"ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ ಸ್ನೇಹಾ ಅವರ ಪಾತ್ರವು ಅವರ ಮರಣದೊಂದಿಗೆ ಅಂತ್ಯಗೊಂಡಿದೆ. ಆದರೆ, ಸ್ನೇಹಾ ಅವರು ತಮ್ಮ ತಾಯಿ ಪುಟ್ಟಕ್ಕ ಅವರಿಗೆ ತಮ್ಮ ಸಹೋದರಿ ಸಹನಾ ಮತ್ತು ಬಂಗಾರಮ್ಮ ಅವರನ್ನು ಮರಳಿ ತರುವುದಾಗಿ ಮಾತು ಕೊಟ್ಟಿದ್ದರು. ಸಿಂಗಾರಮ್ಮ ಮತ್ತು ಅವರ ಮಗ ಕಾಳಿ ಅವರ ಸಂಚಿನಿಂದಾಗಿ, ಸ್ನೇಹಾ ಅಪಘಾತಕ್ಕೀಡಾಗಿ ಮರಣ ಹೊಂದುತ್ತಾರೆ. ಕಂಠಿ ತೀವ್ರ ದುಃಖದಲ್ಲಿ, "ನೀನು ನನ್ನನ್ನು ಏಕೆ ಬಿಟ್ಟು ಹೋದೆ ನಾನು ನಿನ್ನೊಂದಿಗೆ ತನಿಖೆಗೆ ಬರ್ತೇನೆ ಎಂದು ಹೇಳಿದ್ದೆ, ಆದರೆ ನೀನು ಕೇಳಲಿಲ್ಲ. ಈಗ ಏನಾಗಿದೆ ನೋಡಿ" ಎಂದು ಅಳುತ್ತಾನೆ
ಗಂಗಾಧರಯ್ಯ ಅವರ ಮಗಳು ಸ್ನೇಹಾ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ಹೃದಯ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಸಲಹೆ ನೀಡಿದ್ದಾರೆ. "ಹೃದಯ ಬದಲಾವಣೆ ಇಲ್ಲದೆ ಅವರು ಬದುಕಲು ಸಾಧ್ಯವಿಲ್ಲ" ಎಂದು ವೈದ್ಯರು ಹೇಳಿದ್ದಾರೆ. ಪುಟ್ಟಕ್ಕ ತಮ್ಮ ಮಗಳು ಸ್ನೇಹಾ ಅವರ ಅಂತ್ಯಕ್ರಿಯೆ ನಡೆಸುವಾಗ, "ನನ್ನ ಮಗಳು ಸ್ನೇಹಾ ಅವರ ಹೃದಯವನ್ನು ಗಂಗಾಧರಯ್ಯ ಅವರ ಮಗಳಿಗೆ ನೀಡಬಹುದು, ಇದರಿಂದ ಅವಳು ಬದುಕಬಹುದು" ಎಂದು ಹೇಳುತ್ತಾರೆ.
ಪುಟ್ಟಕ್ಕ ಅವರ ಭಾವನೆ, ತಮ್ಮ ಮಗಳ ಹೃದಯವನ್ನು ನೀಡುವುದರಿಂದ, ಅವರು ಗಂಗಾಧರಯ್ಯ ಅವರ ಮಗಳಲ್ಲಿಯೇ ಸ್ನೇಹಾ ಅವರನ್ನು ನೋಡಬಹುದು ಎಂಬುದಾಗಿದೆ. ಈ ರೀತಿಯಾಗಿ, ಸ್ನೇಹಾ ಸತ್ತಿಲ್ಲ, ಗಂಗಾಧರಯ್ಯ ಅವರ ಮಗಳ ಮೂಲಕ ಬದುಕುತ್ತಿದ್ದಾರೆ ಎಂಬುದು ಈ ಕಥೆಯ ನಿರೀಕ್ಷೆ. ( video credit :daari Deepa )