ನಾಗ ಚೈತನ್ಯ ಎರಡನೇ ಮದ್ವೆ ಸಮಂತಾ ಕಣ್ಣೀರು! ಸಮಂತಾ ಅವರ ರಿಯಾಕ್ಷನ್ ಏನು ಗೊತ್ತಾ?
ಇನ್ನೂ ದಕ್ಷಿಣ ಭಾರತದಲ್ಲಿ ಸಾಕಷ್ಟು ಸಿನಿ ಜನಪ್ರಿಯ ಜೋಡಿಗಳು ಇದ್ದಾರೆ. ಅವರಲ್ಲಿ ಡೈವರ್ಸ್ ಆದರೂ ಕೊಡ ಮತ್ತೆ ಒಂದಾಗಬೇಕು ಎಂಬ ಹಲಬಲದಿಂದ ಪ್ರೀತಿ ಪಡೆದುಕೊಂಡಿದ್ದ ಜೋಡಿ ಎಂದ್ರೆ ಅದು ಸಮಂತಾ ಹಾಗೂ ನಾಗ ಚೈತನ್ಯ ಎಂದರೆ ತಪ್ಪಾಗಲಾರದು. 2010ನಲ್ಲಿ ಇಬ್ಬರ ಮೊದಲ ಸಿನಿಮಾ ಮೂಲಕ ಭೇಟಿ ಆದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. ಅಲ್ಲಿಂದ ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ ಇವರು 2017 ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಅವರು ಅಕ್ಟೋಬರ್ 2021 ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು. ನಾಲ್ಕು ವರ್ಷಗಳ ಕಾಲ ವಿವಾಹವಾಗಿದ್ದ ದಂಪತಿಗಳು, ಭಿನ್ನಾಭಿಪ್ರಾಯಗಳನ್ನು ಅವರು ಬೇರೆಯಾಗುವ ನಿರ್ಧಾರಕ್ಕೆ ಕಾರಣವೆಂದು ಉಲ್ಲೇಖಿಸಿದ್ದಾರೆ.
ಇದೀಗ ನೆನ್ನೆ ಸೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ಅವರ ನಿಶ್ಚಿತಾರ್ಥ ನೆನ್ನೆ ಅವರ ಮನೆಯಲ್ಲಿ ನೆರೆವೇರಿದ್ದು ಅದನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಂಧ್ರಪ್ರದೇಶದ 32ವರ್ಷದ ಸೋಭಿತಾ ಧೂಳಿಪಾಲ ಮೇಜರ್ ಮತ್ತು ಗೂಡಾಚಾರಿ ನಂತಹ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಿಪುಣ ನಟಿ. ಇತ್ತೀಚೆಗೆ ಪೊನ್ನಿಯನ್ ಸೆಲ್ವಂ ಚಿತ್ರದಲ್ಲಿ ಒಂದು ಕೋಟಿ ಸಂಭಾವನ್ನೆಯನ್ನು ಪಡೆದುಕೊಂಡು ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಮೂರು ವರ್ಷಗಳಿಂದ ಇವರಿಬ್ಬರ ಡೇಟಿಂಗ್ ರೂಮರ್ ಹಬ್ಬಿತ್ತು ಆದರೆ ಬಗ್ಗೆ ಸಮಂತಾ ಅವರು ಬಹಿರಂಗವಾಗಿ ಯಾವ ಪ್ರತಿಕ್ರಿಯೆ ನೀಡಿಲ್ಲ
ಆದರೆ ಒಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಯಾರನ್ನು ಬೇಕಾದರೂ ಡೇಟ್ ಮಾಡಬಹುದು ಪ್ರೀತಿಗೆ ಬೆಲೆ ಕೊಡದ ಮನುಷ್ಯ ಯಾವ ಪ್ರೀತಿಯನ್ನು ಉಳಿಸಿಕೊಳ್ಳಲಾರ ಅವಳನ್ನು ಅಳಿಸುತ್ತಾನೆ. ಆದರೆ ಆತ ಬದಲಾಗಿ ಆಕೆಯನ್ನು ಖುಷಿಯಾಗಿ ನೋಡಿಕೊಳ್ಳಲ್ಲಿ ಎಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಇದೀಗ ಇವರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿ ಹೋರ ಬಿದ್ದಿದ್ದು ಮುಂದೆ ಸಮಂತಾ ಅವರು ಯಾವ ಉತ್ತರ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ . ಇನ್ನು ವಿಶೇಷವಾಗಿ ಹೇಳುವುದಾದರೆ ಹಿಂದೆ ಯಾವ ದಿನ ಸಮಂತಾ ಅವರಿಗೆ ಪ್ರಪೋಸ್ ಮಾಡಿದ್ದರೋ ಅದೇ ದಿನಕ್ಕೆ ಸೊಭಿತ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದನ್ನು ಸಮಂತಾ ಅವರೊಟ್ಟಿಗೆ ರಿವೇಂಜ್ ತೆಗೆದುಕೊಳ್ಳುವ ಸಲುವಾಗಿ ನೆನ್ನೆಯ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಸಮಂತಾ ಅವರು ಈ ನಿಶ್ಚಿತಾರ್ಥಕ್ಕೆ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.