ರಚಿತರಾಮ್ ಮದುವೆ ಫಿಕ್ಸ್!! ತಿಳಿಸಿದ ರವಿಚಂದ್ರನ್, ಹುಡುಗ ಯಾರು ನೋಡಿ?

ರಚಿತರಾಮ್ ಮದುವೆ ಫಿಕ್ಸ್!! ತಿಳಿಸಿದ ರವಿಚಂದ್ರನ್, ಹುಡುಗ ಯಾರು ನೋಡಿ?

ಸ್ಯಾಂಡಲ್‌ವುಡ್‌ ನಟಿ ರಚಿತ ರಾಮ್‌ ಅವರ ಮದುವೆ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಇಂದಿಗೂ ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿಯೂ ನಟಿಯ ಮದುವೆ ಬಗ್ಗೆ ಹಲವು ಟ್ರೋಲ್‌ಗಳು, ಫೋಸ್ಟ್‌ಗಳು ಹರಿದಾಡುತ್ತಲೇ ಇವೆ. ಇತ್ತ ನಟ ಧನ್ವೀರ್‌ ಮದುವೆ ಬಗ್ಗೆಯೂ ಕೆಲ ಗಾಸಿಪ್‌ಗಳು ಕೇಳಿಬಂದಿದ್ದವು. ಸದ್ಯ ರಚಿತಾ ರಾಮ್‌ - ಧನ್ವೀರ್‌ ಮದುವೆ ಆಗುತ್ತಾರೆ ಎಂಬ ಸುದ್ದಿ ಪೋಸ್ಟ್‌ ವೈರಲ್‌ ಆಗಿದೆ

ಈ ವೇಳೆ ಮಧ್ಯ ಪ್ರವೇಶಿಸಿದ ಕ್ರೇಜಿಸ್ಟಾರ್ ರವಿಚಂದ್ರನ್, ಇದು ಸರಿಯಾದ ಸಮಯ ಅಲ್ಲ, ರಾಂಗ್ ಟೈಮ್ ಎಂದು ಹೇಳುತ್ತಾರೆ. ಇಷ್ಟು ಹೇಳುತ್ತಿದ್ದಂತೆ ಜೋರಾಗಿ ನಕ್ಕ ಡಿಂಪಲ್ ಚೆಲುವೆ ಇದಕ್ಕೆ ಶೀಘ್ರದಲ್ಲಿಯೇ ಉತ್ತರ ಕೊಡುತ್ತೇನೆ ಎಂದರು.

ರಚಿತಾ ರಾಮ್ . ಅವರಿಗೆ ಈಗ 32 ವರ್ಷ. ಅವರು ಇನ್ನೂ ಮದುವೆ ಆಗಿಲ್ಲ ಏಕೆ ಎಂಬುದು ಅನೇಕರ ಪ್ರಶ್ನೆ. ಅವರು ಲವ್ ವಿಚಾರದಲ್ಲಿ ಯಾರ ಜೊತೆಯೂ ಸುದ್ದಿ ಆಗಿಲ್ಲ. ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತವೆ. ಆದರೆ, ಇದಕ್ಕೆ ಅವರು ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಈಗ ಅವರ ಮದುವೆ ಬಗ್ಗೆ ರವಿಚಂದ್ರನ್  ಅವರು ಮಾಹಿತಿ ನೀಡಿದ್ದಾರೆ. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಈ ಬಗ್ಗೆ ಚರ್ಚೆ ಆಗಿದೆ.

ಮದುವೆ ಮೊದಲ ಜೀವನ, ಮದುವೆ ಬಳಿಕದ ಜೀವನ ಹೇಗಿದೆ’ ಎಂದು ಧನಂಜಯ್ ಅವರಿಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಡಾಲಿ, ‘ಮದುವೆ ಮೊದಲು ನಾಗ ಸಿಕ್ಕರೆ ಅಲ್ಲೇ ಸೆಟಲ್, ನಿರಂಜನ್ ಸಿಕ್ಕರೆ ಅಲ್ಲೇ ಸೆಟಲ್. ಈಗ ಮನೆಗೆ ಹೋಗಬೇಕು’ ಎಂದರು ಧನಂಜಯ್.  ‘ಇಲ್ಲೇನೋ ಸಮಸ್ಯೆ ಇದೆ’ ಎಂದರು ಆ್ಯಂಕರ್ ನಿರಂಜನ್.ಬ್ಯಾಚುಲರ್ ಜೀವನ ಒಂದು ಚಾಪ್ಟರ್, ಮದುವೆ ಬಳಿಕದ ಜೀವನ ಒಂದು ಚಾಪ್ಟರ್. ಮಗು ಆದಮೇಲೆ ಒಂದು ಚಾಪ್ಟರ್’ ಎಂದಿದ್ದಾರೆ ರವಿಚಂದ್ರನ್. ‘ರಚಿತಾ ರಾಮ್ ಅವರು ಇನ್ನೂ ಬ್ಯಾಚುಲರ್​ ಆಗಿರೋದು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದು ಡಾಲಿ ಧನಂಜಯ್ ಹೇಳಿದರು. ‘ಈ ವರ್ಷ ಅವರು ಮದುವೆ ಆಗುತ್ತಿದ್ದಾರೆ’ ಎಂದು ರವಿಚಂದ್ರನ್ ಘೋಷಣೆ ಮಾಡಿಯೇ ಬಿಟ್ಟರು. ಇದನ್ನು ಕೇಳಿ ಎಲ್ಲರಿಗೂ ಶಾಕ್ ಆಯಿತು.

ಇದನ್ನು ರವಿಚಂದ್ರನ್ ಅವರು ಹಾಸ್ಯಕ್ಕೆ ಹೇಳಿದ್ದಾರೋ ಅಥವಾ ನಿಜವನ್ನು ಹಾಸ್ಯದ ರೂಪದಲ್ಲಿ ಹೇಳಿದ್ದಾರೋ ಎನ್ನುವ ಪ್ರಶ್ನೆ ಮೂಡಿದೆ