ಅಣ್ಣಾವ್ರ ಕುಟುಂಬಕ್ಕೂ ಹಾಗೂ ಪಾರಿವಾಳಕ್ಕೂ ಇದೆ ಎಲ್ಲಿಲ್ಲದ ನಂಟು..! ಈ ವಿಡಿಯೋನೆ ಸಾಕ್ಷಿ
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇದೀಗ ದೈಹಿಕವಾಗಿ ಈ ಲೋಕವನ್ನು ಬಿಟ್ಟು ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ... ಅಕಾಲಿಕ ಮರಣಕ್ಕೆ ತುತ್ತಾದ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಗಲಿಕೆ ನಿಜಕ್ಕೂ ಘೋರ ದುರಂತ. ಸ್ಪಂದನ ಅವರ ಅಗಲಿಕೆ ಆಗಿರುವುದು ನಿಜಕ್ಕೂ ಕನ್ನಡ ಚಿತ್ರರಂಗದ ಕೆಲ ಗಣ್ಯರಿಗೆ ಮತ್ತು ವಿಜಯರಾಘವೇಂದ್ರ ಅವರ ಅಭಿಮಾನಿಗಳಿಗೆ ತುಂಬಾನೇ ನೋವಾಗಿದೆ.. ಇದ್ದಕಿದ್ದಂತೆ ಈ ರೀತಿ ಸಣ್ಣ ವಯಸ್ಸಿಗೆ ಹೃದಯಘಾತ ಸಂಭವಿಸುತ್ತದೆ ಎಂದರೆ ಯಾರಿಗೆ ತಾನೇ ಇಂತಹ ಸಾವುಗಳನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಹೇಳಿ..ಸ್ಪಂದನ ಅವರ ಅಗಲಿಕೆಯನ್ನೂ ಸಹ ಈಗಲೂ ಕೂಡ ಸಾಕಷ್ಟು ಜನರು ನಂಬಲು ಅಸಾಧ್ಯವಾಗಿದೆ.
ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಅತ್ತ ವಿದೇಶಕ್ಕೆ ಅವರ ಗೆಳತಿಯರೊಟ್ಟಿಗೆ ಪ್ರಯಾಣ ಬೆಳೆಸಿದಾಗ, ರಾತ್ರಿ ಮಲಗಿದವರು ಮತ್ತೆ ಮೇಲೆ ಏಳಲೇ ಇಲ್ಲ. ಹೃದಯಘಾತದಿಂದ ಸಾವನಪ್ಪಿದರು. ನಂತರ ಅವರನ್ನ ಬೆಂಗಳೂರಿನ ಅವರ ತಂದೆ ಮನೆಯಾದ ಮಲ್ಲೇಶ್ವರಂಗೆ ಮೃತದೇಹವನ್ನು ತಂದಿದ್ದು, ನಂತರ ವಿಧಿ ವಿಧಾನ ಕಾರ್ಯಗಳನ್ನು ಮುಗಿಸಿ, ಅಂತಿಮ ಕ್ರಿಯೆಯ ಮಾಡಲಾಯಿತು. ನಂತರ ಮೂರು ದಿನದ ಹಾಲು ತುಪ್ಪದ ಕಾರ್ಯಕ್ರಮವನ್ನು ವಿಜಯ್ ರಾಘವೇಂದ್ರ ಅವರ ಕುಟುಂಬ ಹಮ್ಮಿಕೊಂಡಿತ್ತು.. ಆಗ ಒಂದು ಅಚ್ಚರಿಯ ಘಟನೆ ಅಲ್ಲಿ ನಡೆದಿದೆ..
ಸ್ಪಂದನ ಅವರ ಸಮಾಧಿ ಮೇಲೆ ಅಂದು ಕೆಲವು ಸಿಹಿ ತಿಂಡಿಗಳನ್ನು ಇಟ್ಟು ಮಾಡಿ ಪೂಜೆ ಮಾಡಲಾಗಿತ್ತು. ನಂತರ ಅಲ್ಲಿಗೆ ಕಾಗೆಗಳು ಬಂದು ಅವುಗಳನ್ನು ತಿಂದು ಹೋಗಬೇಕು ಎನ್ನುವುದು ವಾಡಿಕೆ. ಅವುಗಳು ತಿಂದು ಹೋದರೆ ಸಾವನ್ನಪ್ಪಿದ ಆ ವ್ಯಕ್ತಿಯೇ ಅಲ್ಲಿಗೆ ಬಂದು ಹೋಗಿದ್ದಾರೆ ಎನ್ನುವ ನಂಬಿಕೆ..ಇದನ್ನು ಕೆಲವರು ನಂಬುತ್ತಾರೆ.. ಇನ್ನು ಕೆಲವರು ನಂಬುವುದಿಲ್ಲ. ಹೌದು ಇದೇ ವೇಳೆ ಕಾಗಿಗಳ ಜೊತೆ ಪಾರಿವಾಳಗಳು ಕೂಡ ಬಂದು ಹಾರಿಕೊಂಡು ಸಮಾಧಿ ಮೇಲೆ ಕುಳಿತಿವೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಕೆಲವರು ಅಣ್ಣಾವ್ರ ಕುಟುಂಬಕ್ಕೂ ಮತ್ತು ಈ ಪಾರಿವಾಳಕ್ಕೂ ಏನೋ ಒಂದು ನಂಟು ಇದೆ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ..
ಸ್ಪಂದನ ಅವರ ಸಮಾಧಿ ಮೇಲೆ ಬಂದು ಕುಳಿತ ಈ ಪಾರಿವಾಳ ನೋಡಿ ಕೆಲವರ ಅಭಿಪ್ರಾಯದ ಮೂಲಕ ಇದು ಕಾಕಾಳಿಯ ಎನ್ನುತ್ತಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ, ಸ್ಪಂದನ ಅವರ ಅಗಲಿಕೆಯ ನೋವನ್ನ ತಡೆದುಕೊಳ್ಳುವ ಶಕ್ತಿಯನ್ನು ಆ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿ, ಮತ್ತು ವಿಡಿಯೋ ನೋಡಿ ಶೇರ್ ಮಾಡಿ ಧನ್ಯವಾದಗಳು..
( video credit : sstv )