ರಾಘು ಅವರ ಕುಟುಂಬಸ್ಥರು ಐದು ತಿಂಗಳು ಮನೆ ಬಿಡ್ತಾರಾ..? ಇಲ್ಲಿದೆ ನೋಡಿ ಕುಟುಂಬದ ನಿರ್ಧಾರ
ಸ್ಪಂದನ ವಿಜಯ ರಾಘವೇಂದ್ರ ಅವರು ಈಗಾಗಲೇ ಸಾವನ್ನಪ್ಪಿದ್ದು ವಾರವೆ ಆಗಿದೆ. ಹೌದು ಸ್ಪಂದನ ವಿಜಯ ರಾಘವೇಂದ್ರ ಅವರು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದರು. ಸಾವನ್ನಪ್ಪಿ ಇದೀಗಾಗಲೇ ಏಳು ದಿನಗಳು ಆಗಿವೆ. ಅವರ ಕುಟುಂಬದವರು ಎಲ್ಲಾ ಸೇರಿ ಸ್ಪಂದನಾರ ಉತ್ತರ ಕ್ರಿಯೆಯನ್ನು ಹಮ್ಮಿಕೊಂಡಿದ್ದು, ಇದೇ ಬುಧವಾರ ಅವರ ಪುಣ್ಯ ತಿಥಿ ಮಾಡಲಾಗುತ್ತಿದ್ದು ಶಾಂತಿ ಹೋಮ ಮಾಡಿಸುತ್ತಿದ್ದಾರೆ. ಇನ್ನೊಂದು ಕಡೆ ಮಧ್ಯಾಹ್ನ ಒಂದು ಗಂಟೆಗೆ ಬಿಬಿಎಂಪಿ ಆವೃತ್ತಿಯಲ್ಲಿ ಬರುವ ಮಲ್ಲೇಶ್ವರಂ ನ ಯಂಗ್ಸ್ಟರ್ ಕಬಡ್ಡಿ ಆಟದ ಮೈದಾನದಲ್ಲಿ ಭೋಜನ ವ್ಯವಸ್ಥೆ ಕೂಡ ಮಾಡಲಾಗಿದೆ. ಹಾಗೆ ವಿಜಯ್ ಹಾಗೂ ಶಿವರಾಂ ಕುಟುಂಬದವರು ನೋವಿನಲ್ಲಿದ್ದರೂ ಎಲ್ಲರಿಗೂ ಸ್ಪಂದನಾರ ಪುಣ್ಯ ತಿಥಿಗೆ ಆಹ್ವಾನ ಮಾಡಿದ್ದಾರೆ.
ಪುಣ್ಯತಿಥಿಗೆ ಕಾರ್ಯವನ್ನು ಕೈಗೊಳ್ಳುತ್ತಿರುವ ವಿಜಯ ರಾಘವೇಂದ್ರ ಅವರ ಕುಟುಂಬಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆಯಂತೆ. ಹೌದು ಪುರೋಹಿತರು ಒಬ್ಬರು ವಿಜಯ ರಾಘವೇಂದ್ರ ಅವರ ಕುಟುಂಬದ ಜೊತೆ ಮಾತನಾಡಿ ಸ್ಪಂದನ ಅವರ ಸಾವಿನ ಕುರಿತಾಗಿ ಮಾಡಬೇಕಾಗಿರುವ ಈ ಅಂಶಗಳ ಬಗ್ಗೆ ಹೇಳಿದ್ದಾರಂತೆ. ಹೌದು ಪುರೋಹಿತರು ಒಬ್ಬರು ಹೇಳಿದ ಹಾಗೆ, ಗರುಡ ಪುರಾಣಗಳ ಪ್ರಕಾರ ಮನುಷ್ಯ ಸಾವನ್ನಪ್ಪಿದ ಮೇಲೆ ಏಳು ದಿನಗಳ ಕಾಲ ಅವರ ಪ್ರೀತಿ ಪಾತ್ರರ ಜೊತೆಗೆ, ಈ ಭೂಮಿಯ ಮೇಲೆ ಇರುತ್ತಾರೆ ಎಂದು ನಂಬಿಕೆ ಇದೆ. ಆ ಏಳು ದಿನಗಳು ಈಗಾಗಲೇ ಮುಕ್ತಾಯ ಆಗಿದ್ದು, ನೀವು ಸುಮಾರು ಐದು ತಿಂಗಳು ಮನೆಯನ್ನು ಬಿಡಬೇಕಾಗಿ ಬರುತ್ತದೆ, ಕಾರಣ ದನಿಷ್ಟ ಪಂಚಾಂಗ ನಕ್ಷತ್ರದಲ್ಲಿ ನಿಧನ ಹೊಂದಿರುವ ಕಾರಣಕ್ಕೆ ಎಂದು ಹೇಳಿ ಸುಮಾರು ಐದು ತಿಂಗಳು ಮನೆಯನ್ನು ಬಿಡಬೇಕು ಎಂದರಂತೆ.
ಆದ್ರೆ ಇನ್ನೂ ಒಬ್ಬ ಪುರೋಹಿತರು ಮಾತನಾಡಿದ್ದು, ಸ್ಪಂದನಾ ಏನು ಅವರ ಮನೆಯಲ್ಲಿ ಇದ್ದಾಗ ಅಥವಾ ಬೆಂಗಳರಿನಲ್ಲಿರುವ ವೇಳೆ ಸಾವನ್ನಪ್ಪಿಲ್ಲ, ಬದಲಿಗೆ ವಿದೇಶದಲ್ಲಿ ಸಾವನ್ನಪ್ಪಿದ್ದಾರೆ. ಹಾಗಾಗಿ ನೀವೂ ಮನೆ ಬಿಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಬದಲಿಗೆ ಶಾಂತಿ ಮಾಡಿಸಿದರೆ ಸಾಕು ಎಂಬಂತೆ ಹೇಳಿದ್ದಾರಂತೆ ಪುರೋಹಿತರು..ಆದ್ರೆ ಇದೀಗ ಯಾವ ಪುರೋಹಿತರ ಕ್ರಮವನ್ನು ಕೈಗೊಳ್ಳುತ್ತಾರೋ ನಟ ವಿಜಯ್ ರಾಘವೇಂದ್ರರ ಕುಟುಂಬ ಎಂದು ಕಾದು ನೋಡಬೇಕಾಗಿದೆ. ಮತ್ತು ಶಾಂತಿ ಮಾಡಿಸುವುದಾಗಿ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಇನ್ನೊಂದು ಕಡೆ ಕೇಳಿ ಬಂದಿವೆ. ಇಲ್ಲಿದೆ ನೋಡಿ ಆ ವಿಚಾರ ತಿಳಿಸಿರುವ ವಿಡಿಯೋ, ಮತ್ತು ನೀವು ಕೂಡ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಗಲಿಕೆಯ ಕುರಿತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ, ವಿಡಿಯೋ ಶೇರ್ ಮಾಡಿ ಧನ್ಯವಾದ... ( video credit ; karnataka you tube channel )