ಬಹಳ ದಿನಗಳ ಬಳಿಕ ಕಂಬ್ಯಾಕ್ ಮಾಡ್ತಿರುವ ಯಶ್ ರಾಧಿಕಾ ಜೋಡಿ..! ವಿಡಿಯೋ ವೈರಲ್
ಕನ್ನಡ ಚಿತ್ರರಂಗದ ಖ್ಯಾತ ನಟರ ಪಟ್ಟಿಯಲ್ಲಿ ಇದೀಗ ನಟ ಯಶ್ ಅವರು ಕೂಡ ಇದ್ದಾರೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಇಡೀ ಇಂಡಿಯಾಗೆ ಈ ನಟ ಯಶ್ ಯಾರೆಂದು ಗೊತ್ತು. ಹೌದು ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತ ಚಿತ್ರರಂಗ ಮಾತ್ರವಲ್ಲದೆ ವಿಶ್ವದಾದ್ಯಂತ ತಮ್ಮ ಶಕ್ತಿ ಏನು..? ತಮ್ಮ ನಟನಾಶೈಲಿ ಏನು ಎಂಬುದಾಗಿ ತೋರಿಸಿರುವ ಯಶ್ ಅವರು ಸಾಕಷ್ಟು ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಈಗಾಗಲೇ ಇವರ ಅಭಿನಯದ ಕೆಜಿಎಫ್ ಭಾಗ ಒಂದು ಕೆಜಿಫ್ ಭಾಗ ಎರಡು ಬಿಡುಗಡೆಯಾಗಿದ್ದು ಸಾಕಷ್ಟು ಹೆಚ್ಚು ದಾಖಲೆ ಮಾಡಿವೆ.
ಈ ಸಿನಿಮಾ ಮೂಲಕ ಯಶ್ ಅವರು ತುಂಬಾನೇ ಇನ್ನೂ ಎತ್ತರಕ್ಕೆ ಬೆಳೆದಿದ್ದಾರೆ ಎಂದು ಹೇಳಬಹುದು. ಹಾಗೇನೆ ಸಿನಿಮಾ ಪ್ರಿಯರು ಹಾಗೂ ನಟ ಯಶ್ ರವರ ಅಭಿಮಾನಿಗಳು ಮತ್ತೆ ಯಶ್ ಅವರು ಯಾವಾಗ ತೆರೆಯ ಮೇಲೆ ಬರುತ್ತಾರೆ ಎಂದು ಎದುರು ನೋಡ್ತಿದ್ದು ಮತ್ತೆ ಯಾವ ಸಿನಿಮಾ ಮೂಲಕ ತೆರೆಗೆ ಬರುತ್ತಾರೆ ಎಂಬುದಾಗಿ ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಇವರ ಮುಂದಿನ ಸಿನಿಮಾ ಯಾವುದು.? ಯಾರ ನಿರ್ದೇಶನದಲ್ಲಿ ಬರಲಿದೆ, ಸಿನಿಮಾ ಹೇಗಿರಲಿದೆ ಎಂಬ ಯಾವ ಅಪ್ಡೇಟ್ಸ್ ಇಲ್ಲಿಯವರೆಗೂ ಬಂದಿಲ್ಲ.
ಯಶ್ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ ಎನ್ನಬಹುದು. ರಾಧಿಕಾ ಪಂಡಿತ್ ಯಶ್ ಅವರ ಮಡದಿ ಇದು ಎಲ್ಲರಿಗೂ ಕೂಡ ಗೊತ್ತು. ರಾಧಿಕಾ ಪಂಡಿತ್ ಮತ್ತು ಯಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡು ಬಹಳ ದಿನ ಆಗಿದೆ.. ಇದೀಗ ಮತ್ತೆ ಈ ಜೋಡಿ ತೆರೆಯ ಮೇಲೆ ಕಾಣಿಸಿದ್ದು, ಯಶ್ ಹಾಗೂ ರಾಧಿಕಾರ ಒಂದು ಪ್ರೊಮೋ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಈ ಸಕತ್ ಜೋಡಿ ಮತ್ತೆ ಕಾಣಿಸಿಕೊಂಡಿದೆ. ಬೇಗ ಬೇಗ ಹೋಗಿ ಹುಷಾರಾಗಿ ಎನ್ನುವ ಮೂಲಕ ನಟಿ ರಾಧಿಕಾ ಅವರು ಮಾತನ್ನು ಆರಂಭಿಸುತ್ತಾರೆ.. ಆಗ ಯಶ್ ಇದಕ್ಕೆ ಸಕತ್ತಾಗಿಯೇ ಉತ್ತರ ನೀಡಿದ್ದಾರೆ. ಇದನ್ನ ನೋಡಿ ಯಶ್ ಸಿನಿಮಾ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇದು ಸಿನಿಮಾ ಅಲ್ಲ ಕೇವಲ ಒಂದು ಅಡುಗೆ ಎಣ್ಣೆಯ ಅಡ್ವಟೈಸ್ಮೆಂಟ್ ಆಗಿದೆ. ಇಲ್ಲಿದೆ ನೋಡಿ ಆ ವಿಡಿಯೋ. ಎಷ್ಟು ಮುದ್ದಾಗಿದೆ ಎಂಬುದಾಗಿ ನೋಡಿ. ಜೊತೆಗೆ ಈ ಎಣ್ಣೆ ಪ್ರಾಡಕ್ಟ್ ನ ಪ್ರಚಾರ ಹೇಗೆ ಮಾಡಿದ್ದಾರೆಂದು ನೋಡಿ ಈ ಬಗ್ಗೆ ನಿಮ್ಮ ಅನಿಸಿಕೆಯ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...
( video credit ; kannada filmology )